ಬೆಂಗಳೂರು: ರಾಯಚೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ (ಐಐಐಟಿ )ಗೆ ರಾಷ್ಟೀಯ ಸಂಸ್ಥೆಗಳ ಸ್ಥಾನಮಾನ ನೀಡುವ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದು, ಡಿಸಿಎಂ ಲಕ್ಮಣ ಸವದಿ ಅಭಿನಂದನೆ ಸಲ್ಲಿಸಿದ್ದಾರೆ.
ರಾಯಚೂರು ಸೇರಿದಂತೆ ದೇಶದ 5 ಕಡೆಗಳಲ್ಲಿ ಕಾರ್ಯನಿರ್ವಹಿಸಲಿರುವ ಐಐಐಟಿಗಳಿಗೆ ರಾಷ್ಟ್ರೀಯ ಸಂಸ್ಥೆಗಳ ಸ್ಥಾನಮಾನ ನೀಡುವ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಇದರಿಂದ ರಾಯಚೂರಿನ ಐಐಐಟಿಯ ಹೆಚ್ಚಿನ ಚಟುವಟಿಕೆಗಳಿಗೆ ಚಾಲನೆ ಸಿಕ್ಕಂತಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಡಿಸಿಎಂ ಲಕ್ಷಣ ಸವದಿ, ರಾಯಚೂರಿನಲ್ಲಿ ಅತೀ ಶೀಘ್ರವಾಗಿ ಐಐಟಿ ಕಾರ್ಯಾರಂಭಿಸಬೇಕೆಂಬುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಮಾರ್ಚ್ನಲ್ಲೇ ಕಾನೂನು ( ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು, ಇದೀಗ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದೆ ಎಂದು ತಿಳಿಸಿದ್ದಾರೆ.
-
ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ಐಐಐಟಿ ಸ್ಥಾಪಿಸುವ ಕನಸು ಈಗ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯುವುದರೊಂದಿಗೆ ಸಂಪೂರ್ಣ ಸಾಕಾರಗೊಂಡಂತಾಗಿದೆ.
— Laxman Sangappa Savadi | ಲಕ್ಷ್ಮಣ್ ಸಂಗಪ್ಪ ಸವದಿ (@LaxmanSavadi) September 23, 2020 " class="align-text-top noRightClick twitterSection" data="
ಈ ಬಗ್ಗೆ ವಿಶೇಷ ಕಾಳಜಿ ತೋರಿದ ಸನ್ಮಾನ್ಯ ಪ್ರಧಾನಿಗಳಾದ ಶ್ರೀ @narendramodi, ಶ್ರೀ @DrRPNishank, ಶ್ರೀ @AmitShah ಜೀ, ಹಾಗೂ ಶ್ರೀ @JoshiPralhad ಜೀ ಯವರಿಗೆ ನನ್ನ ವಂದನೆಗಳು. pic.twitter.com/HxZmKakvFM
">ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ಐಐಐಟಿ ಸ್ಥಾಪಿಸುವ ಕನಸು ಈಗ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯುವುದರೊಂದಿಗೆ ಸಂಪೂರ್ಣ ಸಾಕಾರಗೊಂಡಂತಾಗಿದೆ.
— Laxman Sangappa Savadi | ಲಕ್ಷ್ಮಣ್ ಸಂಗಪ್ಪ ಸವದಿ (@LaxmanSavadi) September 23, 2020
ಈ ಬಗ್ಗೆ ವಿಶೇಷ ಕಾಳಜಿ ತೋರಿದ ಸನ್ಮಾನ್ಯ ಪ್ರಧಾನಿಗಳಾದ ಶ್ರೀ @narendramodi, ಶ್ರೀ @DrRPNishank, ಶ್ರೀ @AmitShah ಜೀ, ಹಾಗೂ ಶ್ರೀ @JoshiPralhad ಜೀ ಯವರಿಗೆ ನನ್ನ ವಂದನೆಗಳು. pic.twitter.com/HxZmKakvFMಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ಐಐಐಟಿ ಸ್ಥಾಪಿಸುವ ಕನಸು ಈಗ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯುವುದರೊಂದಿಗೆ ಸಂಪೂರ್ಣ ಸಾಕಾರಗೊಂಡಂತಾಗಿದೆ.
— Laxman Sangappa Savadi | ಲಕ್ಷ್ಮಣ್ ಸಂಗಪ್ಪ ಸವದಿ (@LaxmanSavadi) September 23, 2020
ಈ ಬಗ್ಗೆ ವಿಶೇಷ ಕಾಳಜಿ ತೋರಿದ ಸನ್ಮಾನ್ಯ ಪ್ರಧಾನಿಗಳಾದ ಶ್ರೀ @narendramodi, ಶ್ರೀ @DrRPNishank, ಶ್ರೀ @AmitShah ಜೀ, ಹಾಗೂ ಶ್ರೀ @JoshiPralhad ಜೀ ಯವರಿಗೆ ನನ್ನ ವಂದನೆಗಳು. pic.twitter.com/HxZmKakvFM
ಮಸೂದೆ ಅಂಗೀಕಾರವಾಗಿರುವುದರಿಂದ ರಾಯಚೂರಿನ ಐಐಐಟಿಗೆ ಕೇಂದ್ರಿಯ ಸಂಸ್ಥೆ ಸ್ಥಾನಮಾನ ಸಿಗಲಿದೆ. ಇದರಿಂದ ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೌರವ ಸಿಗಲಿದೆ. ಐಐಐಟಿಗಳಿಗೆ ಅಕಾಡೆಮಿಕ್ ಪದವಿಯಿಂದ ಹಿಡಿದು ಪಿಹೆಚ್ಡಿವರೆಗೆ ವಿವಿಧ ಉನ್ನತ ಶಿಕ್ಷಣಗಳ ಪದವಿ ನೀಡುವ ಕಾನೂನುಬದ್ಧ ಅರ್ಹತೆಯು ಈ ಮಸೂದೆಯಿಂದ ಸಿಕ್ಕಂತಾಗಿದೆ ಎಂದಿದ್ದಾರೆ ಡಿಸಿಎಂ ಸವದಿ.