ETV Bharat / state

ರಾಯಚೂರಿನಲ್ಲಿ ಮಳೆಗಾಗಿ 5 ದಿನಗಳ ಪರ್ಜನ್ಯ ಹೋಮ - viss,bytes and script

ರಾಯಚೂರಿನಲ್ಲಿ ಈ ವೇಳೆಗಾಗಲೇ ಮುಂಗಾರು ಮಳೆ ಸುರಿದು ಕೃಷಿ ಚಟುವಟಿಕೆಗಳು ಚುರುಕುಗೊಂಡಿರಬೇಕಿತ್ತು. ಆದ್ರೆ ಮಳೆರಾಯನ ಮುನಿಸಿನಿಂದ ಕೃಷಿ ಚಟುವಟಿಕೆಗಳು ತಟಸ್ಥಗೊಂಡು, ರೈತಾಪಿ ವರ್ಗವನ್ನ ಚಿಂತೆಗೀಡು ಮಾಡಿದೆ.

ಪರ್ಜನ್ಯ ಹೋಮ
author img

By

Published : Jul 26, 2019, 11:42 PM IST

ರಾಯಚೂರು: ರಾಜ್ಯದೆಲ್ಲೆಡೆ ಸಮೃದ್ಧ ಮಳೆಯಾಗಲಿ ಎಂದು ಪ್ರಾರ್ಥಿಸಿ ಜಿಲ್ಲೆಯ ವಿರಗೋಟದ ಶ್ರೀ ಆದಿಮೌನಲಿಂಗೇಶ್ವರ ದೇವಾಲಯದಲ್ಲಿ 5 ದಿನಗಳ ಕಾಲ ವಿಶೇಷ ಪರ್ಜನ್ಯ ಹೋಮ ನಡೆಯುತ್ತಿದೆ.

ದೇವಾಲಯದ ಪೀಠಾಧಿಪತಿ ಶ್ರೀ ಅಡವಿಲಿಂಗ ಮಹಾರಾಜರ ನೇತೃತ್ವದಲ್ಲಿ 5 ದಿನಗಳ ಕಾಲ ಪರ್ಜನ್ಯ ಯಾಗ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ವರುಣ ದೇವನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಕೃಷ್ಣತೀರದ ದೇವಾಲಯದ ಆವರಣದಲ್ಲಿ 108 ಅಗ್ನಿಕುಂಡಗಳನ್ನು ನಿರ್ಮಿಸಿ, 61 ಜನ ಪುರೋಹಿತರಿಂದ ಮಂತ್ರ ಘೋಷ, ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಹೋಮ,ಪೂಜೆ ನೇರವೇರಿಸಲಾಗುತ್ತಿದೆ. ಮೂರನೇಯ ದಿನವಾದ ಇಂದು 432 ಜನ ದಂಪತಿಗಳು ಪರ್ಜನ್ಯ ಯಾಗ ನೇರವೇರಿಸಿ ಮಳೆಯಾಗಲಿ ಎಂದು ಪ್ರಾರ್ಥಿಸಿದ್ರು.

ಮಳೆಗಾಗಿ 5 ದಿನಗಳ ಪರ್ಜನ್ಯ ಹೋಮ

ಮಳೆ ಮತ್ತು ಲೋಕಕಲ್ಯಾಣಕ್ಕಾಗಿ ಏರ್ಪಡಿಸಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವದುರ್ಗ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ನೇರೆ ಜಿಲ್ಲೆಯ ಭಕ್ತರು ಭಾಗವಹಿಸುತ್ತಿದ್ದಾರೆ.

Intro:ಸ್ಲಗ್: ಪರ್ಜನ್ಯ ಹೋಮ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 26-೦7-2019
ಸ್ಥಳ: ರಾಯಚೂರು
ಆಂಕರ್: ರಾಜ್ಯದಲ್ಲಿ ಮುಂಗಾರು ಮಳೆ ಸುರಿದು ಕೃಷಿ ಚಟುವಟಿಕೆಗಳು ಚುರುಕುಗೊಂಡಿರಬೇಕು. ಆದ್ರೆ ಮಳೆರಾಯನ ಮುನಿಸಿನಿಂದ ಕೃಷಿ ಚಟುವಟಿಕೆಗಳು ತಟಸ್ಥಗೊಂಡು, ರೈತಾಪಿ ವರ್ಗವನ್ನ ಚಿಂತಿಸುವಂತೆ ಮಾಡಿದೆ. ರೈತರ ಬಂದಿರುವ ಈ ಸಂಕಷ್ಟದಿಂದ ಪಾರು ಮಾಡಿ, ಸಮೃದ ಮಳೆ ಸುರಿಯಲಿ ಎಂದು 5 ದಿನಗಳ ಕಾಲ ಪರ್ಜನ್ಯ ಹೋಮ ಮಾಡುವ ಮೂಲಕ ವರುಣ ದೇವನ್ನ ಪ್ರಾರ್ಥಿಸಲಾಗುತ್ತದೆ. ಎಲ್ಲಿ ನಡೆಯುತ್ತಿದ್ದ. ಹೋಮ ಅಂತಿರಾ ಹಾಗಿದ್ರೆ ಈ ಸ್ಟೋರಿ ನೋಡಿ.
Body:ವಾಯ್ಸ್ ಓವರ್.1: ಹೀಗೆ ಒಂದು ಕಡೆ ನೂರಾರು ಹೋಮ ಕುಂಡ ನಿರ್ಮಿಸಿ ಹೋಮ ಮುಂದೆ ಕುಳಿತಿರುವ ಮಠಾಧೀಶರು, ಮತ್ತೊಂದು ಪುರೋಹಿತರ ಮಂತ್ರಘೋಷ ಮಧ್ಯ ಹೋಮ ನೇರವೇರಿಸುತ್ತಿರುವ ದಂಪತಿಗಳು. ಈ ಎಲ್ಲಾ ದೃಶ್ಯಗಳು ಕಂಡು ಬಂದಿರುವುದು ರಾಯಚೂರು ಜಿಲ್ಲೆಯ ವಿರಗೋಟದ ಶ್ರೀ ಆದಿಮೌನಲಿಂಗೇಶ್ವರ ದೇವಾಲಯದ ಆವರಣದಲ್ಲಿ. ದೇವಾಲಯದ ಪೀಠಾಧಿಪತಿ ಶ್ರೀ ಅಡವಿಲಿಂಗ ಮಹಾರಾಜರು ನೇತೃತ್ವದಲ್ಲಿ 5 ದಿನಗಳ ಕಾಲ ಪರ್ಜನ್ಯ ಯಾಗ ಹಮ್ಮಿಕೊಳ್ಳುವ ಮೂಲಕ ವರುಣ ದೇವನಿಗೆ ವಿಶೇಷವಾಗಿ ಪ್ರಾರ್ಥಿಸಲಾಗುತ್ತಿದೆ.
ವಾಯ್ಸ್ ಓವರ್.2: ಇನ್ನು ಪರ್ಜನ್ಯ ಯಾಗವನ್ನ ಕಳೆದ ಜು.24ರಿಂದ 28ರವರೆಗೆ ಐದು ದಿನಗಳ ನಡೆಯಲಿದೆ. ಇದಕ್ಕಾಗಿ ಕೃಷ್ಣ ತೀರದ ದೇವಾಲಯ ಆವರಣದಲ್ಲಿ 108 ಅಗ್ನಿಕುಂಡಗಳನ್ನ ನಿರ್ಮಾಣ ಮಾಡಿ, 61 ಜನ ಪುರೋಹಿತರ ಮಂತ್ರ ಘೋಷಗಳೊಂದಿಗೆ, ವಿವಿಧ ಮಠಾಧೀಶರು ಹಾಗೂ ಒಂದು ಅಗ್ನಿ ಕುಂಡದ ಬಳಿ 4 ಜನ ದಂಪತಿಗಳಿಂದ 432 ಜನರಿಂದ ಹೋಮ ಪೂಜೆ ನೇರವೇರಿಸಲಾಗುತ್ತಿದೆ. ಮೂರನೇಯ ದಿನವಾದ ಇಂದು ಸಹ 432 ಜನ ದಂಪತಿಗಳು ಪರ್ಜನ್ಯ ಯಾಗ ನೇರವೇರಿಸಿ ಮಳೆಯಾಗಿ ಪ್ರಾರ್ಥಿಸಿದ್ರು.
ವಾಯ್ಸ್ ಓವರ್.3: ಮಳೆ ಮತ್ತು ಲೋಕಕಲ್ಯಾಣ ಏರ್ಪಡಿಸಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವದುರ್ಗ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ನೇರೆ ಜಿಲ್ಲೆಯ ಭಕ್ತರು ಭಾಗವಹಿಸುತ್ತಿದ್ದಾರೆ. ಅಲ್ಲದೇ ಮಳೆ ಬಾರದೆ ಸಮಯದಲ್ಲಿ ಮೋಡ ಬಿತ್ತನೆ ಮಾಡುವ ಮೂಲಕ ಮಳೆ ತರಿಸುವ ಕೆಲಸ ನಡೆಯುತ್ತಿತ್ತು. ಆದ್ರೆ ಹಿಂದಿನ ಕಾಲದಲ್ಲಿ ಹೋಮ-ಹವನ ಮಾಡಿ, ಹೋಮದಲ್ಲಿ ಹಾಕುವ ಧವಸ-ಧನ್ಯಗಳು, ಸುಗಧ ಭರಿತ ಕಟ್ಟಿಗೆಗಳು, ತುಪ್ಪ ಅರ್ಪಿಸಿದಾಗ ಆದರಿಂದ ಬರುವ ಹೊಗೆ ಆಕಾಶ ತಲುಪುವ ಮೂಲಕ ಮಳೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಹಿಂದೆ ಮಾಡುವಂತಹ ಧಾರ್ಮಿಕ ಕಾರ್ಯವನ್ನ ವೈಜ್ಞಾನಿಕವಾಗಿ ನೇರವೇರಿಸುವ ಮೂಲಕ ವರುಣನಿಗಾಗಿ ಪ್ರಾರ್ಥಿಸಲಾಗುತ್ತದೆ ಎನ್ನುತ್ತಾರೆ ಅಡವಿಲಿಂಗ ಮಹಾರಾಜರು.
ವಾಯ್ಸ್ ಓವರ್.4: ಇನ್ನು ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವರುಣ ದೇವನ ಯಾಗದಲ್ಲಿ ಕಾಕತಳಿಯಬೆಂತೆ ಇಂದು ಸಂಜೆ ಜಿಲ್ಲೆಯಾದ್ಯಂತ ಮಳೆ ಸುರಿದಿದೆ. ಒಟ್ನಿಲ್ಲಿ, ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಲಾಶಯಗಳು, ಕೆರೆ ಕಟ್ಟೆಗಳು, ಹಳ್ಳಕೊಳ್ಳಗಳು, ನೀರಿಲ್ಲದೆ ತನ್ನ ಮೂಲ ಸ್ವರೂಪ ಕಳೆದುಕೊಂಡು, ವ್ಯವಸಾಯ ಮಾಡುವುದಕ್ಕೆ ನೀರಿಲ್ಲದೆ ಕೃಷಿ ಚಟುವಟಿಕಗಳು ರೈತಾಪಿ ವರ್ಗ ಚಿಂತೆಗೆ ಹಿಡು ಮಾಡಿದ್ದು, ಹೋಮ-ಹಮನಗಳು, ಪೂಜೆ ಕೈಂಕಾರ್ಯಗಳು ನಡೆಯುತ್ತಿವೆ. ವರುಣ ದೇವ ಈ ಪ್ರಾರ್ಥನೆಯಿಂದರು ಮಳೆಯಾಗಲಿ ಎನ್ನುವುದು ಎಲ್ಲಾರ ಆಶಯ.
Conclusion:ಬೈಟ್.1: ಶ್ರೀ ಅಡವಿಲಿಂಗ ಮಹಾರಾಜರು, ಪೀಠಾಧಿಪತಿ, ವೀರಗೋಟ
ಬೈಟ್.2: ದಶವಂತ ಕುಮಾರ, ಭಕ್ತ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.