ETV Bharat / state

ರಾಜ್ಯ ಸರ್ಕಾರ ನೂತನ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುತ್ತಿಲ್ಲ: ಲಕ್ಷ್ಮಣ ಸವದಿ

ರಾಜ್ಯ ಸರ್ಕಾರ ಇನ್ನೂ ಎರಡು ನೂತನ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುತ್ತಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿಯಷ್ಟೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

new DCM position creation DCM laxmana savadi Reaction
ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿv
author img

By

Published : Dec 15, 2019, 3:10 PM IST

ರಾಯಚೂರು: ರಾಜ್ಯ ಸರ್ಕಾರ ಇನ್ನೂ ಎರಡು ಡಿಸಿಎಂ ಹುದ್ದೆಗಳನ್ನು ಸೃಷ್ಠಿಸುತ್ತಿದೆ ಎನ್ನುವುದು ಮಾಧ್ಯಮಗಳ ಸೃಷ್ಠಿಯೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ

ನಗರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸರ್ಕಾರದ ಯಾವ ಸಚಿವರಲ್ಲೂ ಗೊಂದಲವಿಲ್ಲ. ಗೊಂದಲವಿದೆ ಎಂಬುವುದು ಕೇವಲ ಊಹಾಪೋಹವಷ್ಟೆ ಎಂದರು.

ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಸರ್ಕಾರ ಮಾಡಲಿದೆ. ನೆರೆಯಿಂದ ಹಾಳಾದ ಬೆಳೆ ಹಾಗೂ ಮನೆಗಳಿಗೆ ಕೇಂದ್ರದಿಂದ ಎರಡನೇ ಹಂತದ ಪರಿಹಾರ ಮೊತ್ತ ಬಿಡುಗಡೆಯಾದ ತಕ್ಷಣ ವಿತರಿಸಲಾಗುವುದು. ಸಾರಿಗೆ ಇಲಾಖೆಯಿಂದ 1200 ನೂತನ ಬಸ್​ಗಳ ಖರೀದಿ ಬಗ್ಗೆ ಚಿಂತನೆ ನಡೆದಿದೆ. ಬಸ್​ ಖರೀದಿ ವೇಳೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇನ್ನು ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯಿಂದ ಯಾವುದೇ ಸಮುದಾಯದ ಜನರಿಗೆ ತೊಂದರೆಯಾಗುವುದಿಲ್ಲ. ಕಾಯ್ದೆಯ ಬಗ್ಗೆ ಕೆಲವರು ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದರು.

Intro:ಸ್ಲಗ್: ಡಿಸಿಎಂ ಲಕ್ಷ್ಮಣ ಸವದಿ
ಫಾರ್ಮೇಟ್: ಎವಿಬಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೫-೧೨-೨೦೧೯
ಸ್ಥಳ: ರಾಯಚೂರು

ಆಂಕರ್: ಬಿಜೆಪಿ ಸರಕಾರದಲ್ಲಿ ಇನ್ನೆರಡು ಉಪಮುಖ್ಯಮಂತ್ರಿ‌ ಹುದ್ದೆ ಸೃಷ್ಠಿ ಎನ್ನುವುದು ಅದು ಮಾಧ್ಯಮಗಳ ಸೃಷ್ಠಿಯೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. Body:ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸರಕಾರದಲ್ಲಿ ಯಾವ ಸಚಿವರಲ್ಲೂ ಗೊಂದಲ್ಲವಿಲ್ಲ, ಅದು ಕೇವಲ ಊಹಪೋಹ ಅಷ್ಟೆ. ರೈತರ ಆತ್ಮಹತ್ಯೆಯ ಪ್ರಕರಣಗಳು ತಗ್ಗಿಸುವ ನಿಟ್ಟಿನಲ್ಲಿ ರೈತರಿಗೆ ಆತ್ಮಸ್ಥೈರ್ಯ ಹೇಳುವ ಕಾರ್ಯ ಸರಕಾರ ಮಾಡಲಿದೆ.
ಕೇಂದ್ರ ಸರಕಾರದ ಜಾರಿಗೊಳಿಸಿರುವ ಪೌರತ್ವ ಕಾಯ್ದೆ ಜಾರಿಗೆಯಿಂದ, ದೇಶದ ಯಾವ ಸಮುದಾಯಕ್ಕೆ ತೊಂದರೆ ಆಗುವುದಿಲ್ಲ. ಕಾಯಿದೆ ಬಗ್ಗೆ ಕೆಲವರು ಗೊಂದಲ ಉಂಟು ಮಾಡುತ್ತಿದ್ದಾರೆ.  ನೆರೆಯಿಂದ ಹಾಳಾದ ಬೆಳೆ ಹಾಗೂ ಮನೆಗಳ ಹಾನಿಗೆ ಕೇಂದ್ರದ‌ 2 ನೇ ಹಂತದ ಪರಿಹಾರ ಬಂದ ಕೂಡಲೇ ಕ ಉಳಿದವರಿಗೆ ನೆರೆ ಸಂತ್ರಸ್ತರಿಗೆ ಹಣ ಜಮಾ ಮಾಡಲಾಗುವುದು ಎಂದರು.  ಇನ್ನೂ ಸಾರಿಗೆ ಇಲಾಖೆಯಿಂದ 1200 ನೂತನ ಬಸ್ ಖರೀದಿಗೆ ಚಿಂತನೆ ಮಾಡಲಾಗುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಬಸ್‌ಗಳನ್ನ ನೀಡುವುದಕ್ಕ  ಆದ್ಯತೆ ನೀಡಲಾಗುವುದು ಎಂದರು.ಈ ವೇಳೆ ಸಚಿವ ಪ್ರಭು ಚವ್ಹಾಣ್ ಸಾಥ್ ನೀಡಿದ್ರು.

Conclusion:ಬೈಟ್.೧: ಲಕ್ಷ್ಮಣ ಸವದಿ, ಡಿಸಿಎಂ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.