ಲಿಂಗಸುಗೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದ ರೋಸಿಹೋದ ರೈತರು, ಸ್ವಯಂ ಪ್ರೇರಿತರಾಗಿ ವಿತರಣಾ ಮತ್ತು ಉಪ ಕಾಲುವೆ ದುರಸ್ತಿಗೆ ಮುಂದಾಗುವ ಮೂಲಕ ಮಾದರಿಯಾದರು.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಗುರುಗುಂಟ ಬಳಿ ನಾರಾಯಣಪುರ ಬಲದಂಡೆಯ 7ಎ ವಿತರಣಾ ಕಾಲುವೆ ಹಾಗೂ ಈ ವ್ಯಾಪ್ತಿಯ ಉಪ ಕಾಲುವೆ 5, 6, 7 ರಲ್ಲಿ ಗುತ್ತಿಗೆದಾರರು ಹೂಳೆತ್ತಿ ಸ್ವಚ್ಛತೆ ಮಾಡಿಲ್ಲ ಎಂದು ದೂರಿದರು ಅಧಿಕಾರಿಗಳು ಸ್ಪಂದಿಸಲಿಲ್ಲ. ಕಾಲುವೆಗೆ ನೀರು ಹರಿಸಿದರು ಸಮರ್ಪಕವಾಗಿ ಬರದೆ ಹೋಗಿದ್ದರಿಂದ ಬೇಸತ್ತ ರೈತರು ಸ್ವಂತ ದುಡ್ಡು ಖರ್ಚು ಮಾಡಿ ಸ್ವಯಂ ಪ್ರೇರಿತರಾಗಿ ಕಾಲುವೆ ಸ್ವಚ್ಛತೆ ಮಾಡಿ, ಜಮೀನಿಗೆ ನೀರು ಹರಿಸಿಕೊಂಡರು.
ಗುರುಗುಂಟಾ ಹೋಬಳಿಯ ಲೇಕಂಚೇರಿ, ಪರಾಂಪುರ, ಐದಭಾವಿ ಸೇರಿದಂತೆ ದೊಡ್ಡಿ ಪ್ರದೇಶಗಳ ಜೀವನಾಡಿ ಕಾಲುವೆ ನಿರ್ವಹಣೆ ಮತ್ತು ನಿರ್ಲಕ್ಷ್ಯಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ನಿರ್ವಹಣೆ ಹೆಸರಲ್ಲಿ ನಡೆಯುತ್ತಿರುವ ಹಣ ದುರ್ಬಳಕೆ ಬಗ್ಗೆ ತನಿಖೆ ನಡೆಸಲು ಆಗ್ರಹಪಡಿಸಿದರು.