ETV Bharat / state

ಗುರ್ಜಾಪುರ ಬ್ಯಾರೇಜ್​ಗೆ ಎನ್​ಡಿಆರ್​ಎಫ್​ ತಂಡ ಭೇಟಿ, ಪರಿಶೀಲನೆ

ಭೀಮಾ ನದಿಯಲ್ಲಿ ಹರಿಬಿಟ್ಟಿರುವ ನೀರು ಇಂದು ಮಧ್ಯರಾತ್ರಿ ವೇಳೆಗೆ ಕೃಷ್ಣಾ ಭೀಮಾ ಸಂಗಮಕ್ಕೆ ಬರಲಿದ್ದು, ರಕ್ಷಣಾ ಕಾರ್ಯಕ್ಕೆ 60 ಜನರ ಎನ್​ಡಿಆರ್​ಎಫ್ ತಂಡವು ಜಿಲ್ಲೆಗೆ ಆಗಮಿಸಿದೆ. ಜಿಲ್ಲಾಧಿಕಾರಿಯೊಂದಿಗೆ ಸಭೆಯ ಬಳಿಕ ಪ್ರವಾಹಕ್ಕೆ ಒಳಗಾಗುವ ಗುರ್ಜಾಪುರ ಸೇರಿದಂತೆ ಇತರೆ 5 ಗ್ರಾಮಗಳಿಗೆ ಎನ್​ಡಿಆರ್​ಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

NDRF team visit to Gurjapura Barrage
ಗುರ್ಜಾಪುರ ಬ್ಯಾರೇಜ್​ಗೆ ಎನ್​ಡಿಆರ್​ಎಫ್​ ತಂಡ ಭೇಟಿ
author img

By

Published : Oct 18, 2020, 5:45 PM IST

Updated : Oct 18, 2020, 6:49 PM IST

ರಾಯಚೂರು: ಭೀಮಾ ನದಿಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ತಾಲೂಕಿನ ಗುರ್ಜಾಪುರ ಹತ್ತಿರದ ಸಂಗಮ ಪ್ರದೇಶದಲ್ಲಿ ಪ್ರವಾಹ ಉಂಟಾಗಲಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ತಾಲೂಕಿನ ಗುರ್ಜಾಪುರ ಗ್ರಾಮ ಮತ್ತು ಬ್ಯಾರೇಜ್​ಗೆ ಎನ್​ಡಿಆರ್​ಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಗುರ್ಜಾಪುರ ಬ್ಯಾರೇಜ್​ಗೆ ಎನ್​ಡಿಆರ್​ಎಫ್​ ತಂಡ ಭೇಟಿ

ಭೀಮಾ ನದಿಯಲ್ಲಿ 8 ಲಕ್ಷ ಕ್ಯೂಸೆಕ್ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ತಾಲೂಕಿನ 17 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಜಿಲ್ಲಾಡಳಿತ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಭೀಮಾ ನದಿಯಲ್ಲಿ ಹರಿಬಿಟ್ಟಿರುವ ನೀರು ಇಂದು ಮದ್ಯರಾತ್ರಿ ವೇಳೆಗೆ ಕೃಷ್ಣಾ, ಭೀಮಾ ಸಂಗಮಕ್ಕೆ ಬರಲಿದ್ದು, ರಕ್ಷಣಾ ಕಾರ್ಯಕ್ಕೆ 60 ಜನರ ಎನ್​ಡಿಆರ್​ಎಫ್ ತಂಡವು ಜಿಲ್ಲೆಗೆ ಆಗಮಿಸಿದೆ. ಜಿಲ್ಲಾಧಿಕಾರಿಯೊಂದಿಗೆ ಸಭೆಯ ಬಳಿಕ ಪ್ರವಾಹಕ್ಕೆ ಒಳಗಾಗುವ ಗುರ್ಜಾಪುರ ಸೇರಿದಂತೆ ಇತರೆ 5 ಗ್ರಾಮಗಳಿಗೆ ಎನ್​ಡಿಆರ್​ಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರ ಕಾರ್ಯಗಳ ಕುರಿತು ಕಾರ್ಯ ಯೋಜನೆ ಸಿದ್ಧಪಡಿಸಿಕೊಂಡಿದೆ.

ಎನ್​ಡಿಆರ್​ಎಫ್ ತಂಡದ ಮುಖ್ಯಸ್ಥ ವಿವೇಕ ಪಾಂಡೆ ಮಾತನಾಡಿ, 'ಜಿಲ್ಲಾಡಳಿತದೊಂದಿಗೆ ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ್ದು, ನದಿಯಲ್ಲಿ ನೀರಿನ ಮಟ್ಟ ಹೆಚ್ಚುವ ಸಂಭವ ಹೆಚ್ಚಾಗಿರುವುದರಿಂದ ಪರಿಹಾರಕ್ಕೆ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಪ್ರವಾಹ ಏರಿಕೆ ಸಮಯದಲ್ಲಿ ಯಾವುದೇ ರೀತಿಯ ತೊಂದರೆಯಾಗದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು 60 ಜನರ ಎನ್​ಡಿಆರ್​ಎಫ್ ತಂಡ ಬಂದಿದ್ದು, ಸ್ಥಳೀಯರು, ಅಗ್ನಿಶಾಮಕ ದಳದ ಸಹಾಯದಿಂದ ರಕ್ಷಣಾ ಕಾರ್ಯ ನಡೆಯಲಿದೆ' ಎಂದರು.

Last Updated : Oct 18, 2020, 6:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.