ETV Bharat / state

ರಾಯಚೂರು: ಕ್ಷುಲ್ಲಕ ಕಾರಣಕ್ಕೆ ‌ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ - ಕ್ಷುಲ್ಲಕ ಕಾರಣಕ್ಕೆ ‌ಮಾರಕಾಸ್ತ್ರಗಳಿಂದ ವ್ಯಕ್ತಿಯ ಬರ್ಬರ ಹತ್ಯೆ

ವ್ಯಕ್ತಿಯನ್ನ‌ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಪಾರ್ ಕೋಟ್ ಬಡಾವಣೆ ನಿವಾಸಿ ಶೇಕ್ ‌ಬಡೆಸಾಬ್, ಅಲಿಯಾಸ್ ಸಲ್ಮಾನ್ ಮಹೆಬೂಬು ಹತ್ಯೆಗೀಡಾದ ವ್ಯಕ್ತಿ.

murder of a person
ಸಲ್ಮಾನ್ ಮಹೆಬೂಬು
author img

By

Published : Sep 2, 2020, 9:22 AM IST

ರಾಯಚೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನ‌ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ನಗರದ ಪಾರ್ ಕೋಟ್ ಬಡಾವಣೆ ನಿವಾಸಿ ಶೇಕ್‌ ಬಡೆಸಾಬ್, ಅಲಿಯಾಸ್ ಸಲ್ಮಾನ್ ಮಹೆಬೂಬು(28) ಹತ್ಯೆಗೀಡಾದ ವ್ಯಕ್ತಿ. ನಿನ್ನೆ ತಡರಾತ್ರಿ ಗಂಗಾ ನಿವಾಸದ ಬಳಿ ಬೈಕ್ ನಿಲ್ಲಿಸುವ ವಿಚಾರವಾಗಿ ಗಲಾಟೆ ನಡೆದಿದ್ದು, ನಾಲ್ಕು ಜನರ ಗುಂಪು ಮಾರಕಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸದರ್‌ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಥಮವಾಗಿ ಕ್ಷುಲ್ಲಕ ಕಾರಣಕ್ಕೆ ಘಟನೆ ಸಂಭವಿಸಿರಬಹುದೆಂದು ಊಹಿಸಲಾಗಿದ್ದು, ತನಿಖೆ ಬಳಿಕ ಘಟನೆಗೆ ನಿಖರ‌ ಕಾರಣ ತಿಳಿದು ಬರಲಿದೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರನ್ನ‌ ನಿಯೋಜಿಸಲಾಗಿದೆ. ಕೃತ್ಯವೆಸಗಿರುವ ದುರ್ಷ್ಕಮಿಗಳು ಪರಾರಿಯಾಗಿದ್ದಾರೆ. ಕೊಲೆಗೀಡಾಗಿರುವ ವ್ಯಕ್ತಿ ಪತ್ನಿ ನಾಲ್ವರ ಮೇಲೆ‌ ದೂರು ನೀಡಿದ್ದು, ದುರ್ಷ್ಕಮಿಗಳ ಬಂಧನಕ್ಕೆ ಪೊಲೀಸರು ಶೋಧ‌‌ ನಡೆಸುತ್ತಿದ್ದಾರೆ.

ಈ ಸಂಬಂಧ ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.