ETV Bharat / state

ಈಟಿವಿ ಭಾರತ ಫಲಶ್ರುತಿ: ಚರಂಡಿಯಲ್ಲಿದ್ದ ಪೈಪ್​ಲೈನ್​​ ತೆರವುಗೊಳಿಸಿದ ಪುರಸಭೆ ಅಧಿಕಾರಿಗಳು - Municipal officials

ಲಿಂಗಸುಗೂರಲ್ಲಿ ಚರಂಡಿಯಲ್ಲಿದ್ದ ಪೈಪ್​ಲೈನ್​ಅನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈಟಿವಿ ಭಾರತ ವರದಿಗೆ ಸ್ಪಂದಿಸಿರುವ ಅಧಿಕಾರಿಗಳು ತಕ್ಷಣಕ್ಕೆ ಕ್ರಮ ಕೈಗೊಂಡಿದ್ದಾರೆ.

Municipal officials who cleared  the pipeline in the sewer
ಚರಂಡಿಯಲ್ಲಿದ್ದ ಪೈಪ್​ಲೈನ್​​ ತೆರವು
author img

By

Published : Jun 7, 2020, 7:21 PM IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಇತ್ತೀಚೆಗೆ ಈಟಿವಿ ಭಾರತ್​ನಿಂದ​​ ಮಾಡಲಾಗಿದ್ದ ವರದಿಗೆ ಸ್ಪಂದಿಸಿ ಚರಂಡಿಯಲ್ಲಿದ್ದ ಪೈಪ್​ಲೈನ್​​ ತೆರವುಗೊಳಿಸಿದ್ದಕ್ಕೆ ವಾರ್ಡ್ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

ಚರಂಡಿಯಲ್ಲಿದ್ದ ಪೈಪ್​ಲೈನ್​​ ತೆರವು

ಪುರಸಭೆಯ ರಾಜಕಾಲುವೆಯಲ್ಲಿ ಕುಡಿಯುವ ನೀರಿನ ಪೂರೈಕೆ ಪೈಪ್​ಗಳ ಮೇಲೆ ಚರಂಡಿ ನಿರ್ಮಿಸಿ ಸ್ಲ್ಯಾಬ್ ಹಾಕುವ ಕಾಮಗಾರಿ ಕಳಪೆಯಿಂದ ಕೂಡಿತ್ತು. ಈ ಕುರಿತು 'ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಕೊಳಚೆ ನೀರಲ್ಲಿ ಕುಡಿವ ನೀರಿನ ಪೈಪ್​ಲೈನ್' ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ಬಿತ್ತರಿಸಿದ್ದ ವರದಿಗೆ ಸ್ಪಂದಿಸಿದ ಆಡಳಿತಾಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪೈಪ್​​ಲೈನ್​​ ತೆರವುಗೊಳಿಸಿ, ಗುಣಮಟ್ಟದಿಂದ ನಿರ್ಮಿಸಲು ಸೂಚಿಸಿದ್ದಾರೆ.

ಈ ಬಗ್ಗೆ ಕಿರಿಯ ಇಂಜಿನಿಯರ್​ ಹಸನ್ ಮಾತನಾಡಿ, ಚರಂಡಿ ನಿರ್ಮಾಣ ಆರಂಭಿಕ ಹಂತದಲ್ಲಿದ್ದು, ಸದ್ಯ ಕಟ್ಟಿದ ಕಟ್ಟಡ ತೆರವುಗೊಳಿಸಬೇಕು. ಪೈಪ್​ಲೈನ್​​​ ತೆಗೆದು ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈಟಿವಿ ಭಾರತ ವರದಿ ನೋಡಿ ಜನರ ಸಮಸ್ಯೆಗೆ ಸ್ಪಂದಿಸಿರುವ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ.

ಇದನ್ನು ಓದಿ: 'ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಕೊಳಚೆ ನೀರಲ್ಲಿ ಕುಡಿವ ನೀರಿನ ಪೈಪ್​ಲೈನ್'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.