ರಾಯಚೂರು: ಬೆಡ್‌ಗಳ ಕೊರತೆ ಹಾಗೂ ತುರ್ತು ಸಮಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರಾಯಚೂರಿನಲ್ಲಿ ಮೂರು ಸಂಚಾರಿ ಕೋವಿಡ್ ಆಸ್ಪತ್ರೆ ಚಿಕಿತ್ಸೆ ಕೇಂದ್ರಗಳು ರೆಡಿಯಾಗುತ್ತಿವೆ.
ನಗರದ ಎನ್‌ಈಕೆಎಸ್‌ಆರ್‌ಟಿ ಬಸ್‌ಗಳನ್ನ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಕೋವಿಡ್ ಚಿಕಿತ್ಸೆ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗುತ್ತದೆ. ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸುವವರೆಗೂ ಈ ಸಂಚಾರಿ ಕೇಂದ್ರದಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಜತೆಗೆ ತಾಲೂಕು ಕೇಂದ್ರಗಳಲ್ಲಿ ಆಸ್ಪತ್ರೆಯಲ್ಲಿ ಬೆಡ್‌ಗಳ ಸಮಸ್ಯೆ ಈ ಸಂಚಾರಿ ಚಿಕಿತ್ಸೆ ಕೇಂದ್ರಗಳನ್ನ ಬಳಸಿಕೊಳ್ಳಬಹುದಾಗಿದೆ. ಅಲ್ಲದೇ ಜಿಲ್ಲಾ ಕೇಂದ್ರದಿಂದ ಸಿಂಧನೂರು, ಲಿಂಗಸೂಗೂರು ದೂರವಿದ್ದು, ಒಂದು ವೇಳೆ ಅಲ್ಲಿ ಬೆಡ್ ಸಮಸ್ಯೆಗಳು ಎದುರಾದಾಗ ಈ ಸಂಚಾರಿ ಬಸ್ ಕೇಂದ್ರವನ್ನ ಬಳಸಲು ಅನುಕೂಲವಾಗಿದೆ.
ಇನ್ನೂ ಸಂಚಾರಿ ಕೇಂದ್ರದಲ್ಲಿ, ಒಂದು ಬಸ್ ನಾಲ್ಕು ಬೆಡ್‌ಗಳು, ನಾಲ್ಕು ಸೀಟ್‌ಗಳ ವ್ಯವಸ್ಥೆ ಮಾಡಲಾಗಿದೆ ಜತೆಗೆ ಸಿಲಿಂಡರ್ ಅಳವಡಿಸಿ, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಹಾಗೂ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಬಹುದಾಗಿದೆ. ತುರ್ತು ಸಂದರ್ಭದಲ್ಲಿ ಸಹ ಎಲ್ಲಿಗಾದರೂ ಕೊಂಡೊಯ್ಯಬಹುದಾಗಿದೆ. ಸದ್ಯ ರಾಯಚೂರಿನ ಮೂರು ಬಸ್‌ಗಳನ್ನ ಸಂಚಾರಿ ಬಸ್‌ಗಳನ್ನು ರೆಡಿ ಮಾಡಲಾಗುತ್ತಿದೆ. ಸಂಚಾರಿ ಕೋವಿಡ್ ಚಿಕಿತ್ಸೆ ಕೇಂದ್ರವನ್ನ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಮೂರ್ನಾಲ್ಕು ದಿನಗಳಲ್ಲಿ ಬಸ್ಗಳು ಸೇವೆಗೆ ಸಿದ್ಧವಾಗಲಿದ್ದು, ಬೆಡ್‌ಗಳ ಕೊರತೆ ನೀಗಿಸಲು ಅನುಕೂಲವಾಗಲಿದೆ ಎಂದರು.