ETV Bharat / state

ಪ್ರತಾಪ್​ಗೌಡ ಪಾಟೀಲ್​​ರಿಗಾಗಿ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ದ: ಶಾಸಕ ಕೆ.ಶಿವನಗೌಡ ನಾಯಕ - Cabinet expansion

ಸಚಿವ ಸ್ಥಾನದ ಅಭಿಲಾಷೆ ನನಗೂ ಇದೆ. ಆದರೆ, ಕೊಟ್ಟರೂ ಖುಷಿ ಪಡುತ್ತೇನೆ ಕೊಡದಿದ್ದರೂ ಖುಷಿಪಡುತ್ತೇನೆ. ಯಾವುದೇ ರೀತಿ ಸಚಿವ ಸ್ಥಾನಕ್ಕಾಗಿ ಒತ್ತಾಯ ಮಾಡುವುದಿಲ್ಲ..

Devadurga MLA K. Sivanagouda is the leader
ಶಾಸಕ ಕೆ.ಶಿವನಗೌಡ ನಾಯಕ
author img

By

Published : Nov 20, 2020, 6:23 PM IST

ರಾಯಚೂರು: ಉಪಚುನಾವಣೆಯಲ್ಲಿ ಗೆದ್ದ ಪ್ರತಾಪ್‌ಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಅವರಿಗಾಗಿ ಸಚಿವ ಸ್ಥಾನದ ತ್ಯಾಗಕ್ಕೆ ಸಿದ್ದನಿದ್ದೇನೆ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಹೇಳಿದ್ದಾರೆ.

ಸಿಂಧನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವಂತೆ ಕೇಳಿಲ್ಲ. ಆದರೆ, ದೇವರ ದಯೆಯಿಂದ ನನಗೂ ಸಚಿವ ಸ್ಥಾನ ಒಲಿದು ಬಂದರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಆದರೆ, ಒತ್ತಾಯಿಸುವುದಿಲ್ಲ ಎಂದರು.

ಸರ್ಕಾರ ರಚನೆಯಲ್ಲಿ ಪ್ರತಾಪ್‌ಗೌಡ ಪಾಟೀಲ್ ಪ್ರಮುಖ ಪಾತ್ರವಿದೆ. ಅವರಿಗೆ ಸಚಿವ ಸ್ಥಾನ ನೀಡುವುದು ರಾಜಧರ್ಮ. ನನಗೆ ಸಚಿವ ಸ್ಥಾನ ಕೊಟ್ಟರೂ ಖುಷಿ, ಕೊಡದಿದ್ದರು ಖುಷಿ. ಆದರೆ, ಹಿಂದುಳಿದ ಪ್ರದೇಶ ಭಾಗದ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಒಳಿತು. ಈ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.

ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ

ಮರಾಠ ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಕೆಲವರ ಅಸಮಾಧಾನವಿದೆ. ಆದರೆ, ದೂರದೃಷ್ಟಿಯಿಂದ ಸಿಎಂ ಈ ನಿರ್ಣಯ ಕೈಗೊಂಡಿದ್ದಾರೆ. ಮರಾಠಿಗರು ರಾಜ್ಯದಲ್ಲಿರುವ ಕನ್ನಡಿಗರು ಎಂದು ಅವರ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿದ್ದಾರೆ. ವೀರಶೈವ-ಲಿಂಗಾಯತ ನಿಗಮದಿಂದ ಆ ಸಮುದಾಯದ ಜನರಿಗೆ ಅನುಕೂಲವಾಗಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.