ETV Bharat / state

ರಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್​ಗೆ ಶಾಸಕ ಬಸವನಗೌಡ ದದ್ದಲ್ ಭೇಟಿ

ರಿಮ್ಸ್ ಆಸ್ಪತ್ರೆಯಲ್ಲಿನ ಕೋವಿಡ್ ವಾರ್ಡ್​ಗೆ ಶಾಸಕ ಬಸವನಗೌಡ ದದ್ದಲ್ ಭೇಟಿ ನೀಡಿ ಚಿಕಿತ್ಸೆ ಕುರಿತಂತೆ ರೋಗಿಗಳು, ವೈದ್ಯರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡರು.

author img

By

Published : May 21, 2021, 9:42 AM IST

MLA Basavanagouda Daddal visits covid ward of Rims Hospital
ರಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್​ಗೆ ಶಾಸಕ ಬಸವನಗೌಡ ದದ್ದಲ್ ಭೇಟಿ

ರಾಯಚೂರು: ನಗರದ ರಿಮ್ಸ್ ಆಸ್ಪತ್ರೆಯಲ್ಲಿನ ಕೋವಿಡ್ ವಾರ್ಡ್​ಗೆ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಭೇಟಿ ನೀಡಿದರು. ಈ ವೇಳೆ ಅವರು ರೋಗಿಗಳ ಯೋಗಕ್ಷೇಮ ವಿಚಾರಿಸಿ ಚಿಕಿತ್ಸೆ ಕುರಿತಂತೆ ರೋಗಿಗಳು ಹಾಗು ವೈದ್ಯರೊಂದಿಗೆ ಮಾಹಿತಿ ಪಡೆದರು.

ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ಭಯಪಡದೆ ಚಿಕಿತ್ಸೆ ಪಡೆದುಕೊಳ್ಳಿ, ಶೀಘ್ರ ಗುಣಮುಖರಾಗುವಿರಿ. ವೈದ್ಯರ ಸಲಹೆ, ಸೂಚನೆಗಳನ್ನು ಪಾಲಿಸುವಂತೆ ರೋಗಿಗಳಿಗೆ ತಿಳಿ ಹೇಳಿದರು. ಈ ವೇಳೆ ಶಾಸಕರು, ಆಸ್ಪತ್ರೆಯ ರೋಗಿಗಳ ಸಂಖ್ಯೆ, ಚಿಕಿತ್ಸೆಯ ಕುರಿತಂತೆ ಮಾಹಿತಿ ಪಡೆದುಕೊಂಡರು. ಚಿಕಿತ್ಸೆಗೆ ಬರುವಂತಹ ರೋಗಿಗಳಿಗೆ ಸೂಕ್ತ ವೈದ್ಯಕೀಯ ಸೇವೆಯನ್ನು ಒದಗಿಸಬೇಕು. ಸೋಂಕಿತರಿಗೆ ಬೇಕಾಗಿರುವ ಔಷಧಿಗಳು ಮತ್ತು ಆಕ್ಸಿಜನ್, ವೆಂಟಿಲೇಟರ್, ರೆಮಿಡಿಸಿವಿರ್​​ ಚುಚ್ಚುಮದ್ದನ್ನು ಸೋಂಕಿತರಿಗೆ ನೀಡಿ ಬೇಗ ಗುಣಮುಖವಾಗುವಂತೆ ಚಿಕಿತ್ಸೆ ನೀಡಬೇಕು. ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವಾಗಬೇಕು ಎಂದು ವೈದ್ಯರಿಗೆ ಸೂಚಿಸಿದರು.

ಇದನ್ನೂ ಓದಿ: ಸಂಪೂರ್ಣ ಲಾಕ್‌ಡೌನ್ ನಡುವೆಯೂ ರಾಯಚೂರಿನಲ್ಲಿ ತರಕಾರಿ ಮಾರಾಟ

ಸೋಂಕಿತರು ಯಾವುದೇ ಸಮಯದಲ್ಲಿ ಬಂದರೂ ಅವರಿಗೆ ಚಿಕಿತ್ಸೆ ದೊರೆಯುವ ನಿಟ್ಟಿನಲ್ಲಿ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು. ಸೂಕ್ತ ಚಿಕಿತ್ಸೆ ಒದಗಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಬಾರದೆಂದು ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.