ರಾಯಚೂರು : ಕೇಂದ್ರ ಸರ್ಕಾರ ರಾಜ್ಯಕ್ಕೆ ಆಹಾರ ಧಾನ್ಯಗಳ ಪೂರೈಕೆ ಮಾಡದೆ ಇರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜ್ ಅವರು ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ರಾಜ್ಯ ಸರ್ಕಾರದಿಂದ ತಮಗೆ ಬೇಕಾದ ಯಾವುದೇ ಅಗತ್ಯ ಆಹಾರ ಧಾನ್ಯಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ತಮ್ಮ ವ್ಯಾಪ್ತಿಯಲ್ಲಿ ಎಫ್ಸಿಐಯಿಂದ ಡಿಮ್ಯಾಂಡ್ ಮಾಡಿರುವ ಆಹಾರ ಧಾನ್ಯಗಳನ್ನು ನೀಡುವ ಸಂಪ್ರದಾಯವಿದೆ ಎಂದರು.
ಇದನ್ನೂ ಓದಿ: ನಿರ್ಮಾಣ ಹಂತದ ಗೋಡೆ ಕುಸಿದು ಬಾಲಕ ಸಾವು ಪ್ರಕರಣ: ಮೂವರ ವಿರುದ್ಧ ಎಫ್‌ಐಆರ್
ಆಹಾರ ಧಾನ್ಯಗಳನ್ನು ನೀಡುವುದಕ್ಕೆ ಒಪ್ಪಿಗೆ ನೀಡಿತ್ತು: ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನತೆಗೆ ಭರವಸೆ ನೀಡಿದಂತೆ 10 ಕೆ ಜಿ ಅಕ್ಕಿಯನ್ನು ನೀಡಬೇಕಾಗಿತ್ತು. ಹೀಗಾಗಿ ಎಫ್ಸಿಐಯಿಂದ ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿತ್ತು. ಅದರಂತೆ ನೀಡುವುದಕ್ಕೆ ಮೊದಲು ಒಪ್ಪಿಕೊಂಡು, ಬೇಕಾದ ಆಹಾರ ಧಾನ್ಯಗಳನ್ನು ನೀಡುವುದಕ್ಕೆ ಸಜ್ಜಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ: ದಾವಣಗೆರೆಯಲ್ಲಿ ಪೆಟ್ರೋಲ್ ಕಳ್ಳರ ಹಾವಳಿ .. ಬೈಕ್ಗಳಲ್ಲಿನ ಪೆಟ್ರೋಲ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅಕ್ಕಿ ಇಲ್ಲವೆಂದಿದೆ: ಜನರಿಗೆ ನೀಡಿದ ಭರವಸೆಯಂತೆ ಸರ್ಕಾರ ಅಕ್ಕಿ ನೀಡಲು ತೀರ್ಮಾನಿಸಿತ್ತು. ಆದರೆ ಕೇಂದ್ರ ಸರ್ಕಾರ, ಎಫ್ಸಿಐಯಿಂದ ಆಹಾರ ಧಾನ್ಯಗಳ ಸಂಗ್ರಹವಿಲ್ಲವೆಂದು ಹೇಳಿದೆ. ಏಕೆಂದರೆ ಎಲ್ಲಿ ಅಕ್ಕಿಯನ್ನು ನೀಡಿದರೆ, ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ಹಾಗೂ ಒಳ್ಳೆಯ ಹೆಸರು ಬರುತ್ತದೆ ಎಂದು ಭಾವಿಸಿ ಅಕ್ಕಿ ಇಲ್ಲವೆಂದು ಹೇಳಿದೆ ಎಂದು ಸಚಿವರು ದೂರಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ವೀಕೆಂಡ್ ಪಾರ್ಟಿಯಲ್ಲಿದ್ದವರಿಗೆ ಪೊಲೀಸರ ಶಾಕ್: 25ಕ್ಕೂ ಹೆಚ್ಚು ಮಂದಿ ವಶಕ್ಕೆ
ಅಕ್ಕಿ ಇಲ್ಲ ಎನ್ನುವ ಮೂಲಕ ರಾಜಕೀಯ ಮಾಡಿದೆ: ಮೊದಲಿಗೆ ಒಪ್ಪಿಗೆ ನೀಡಿದ್ದರಿಂದ, ನಂತರದಲ್ಲಿ ರಾಜ್ಯ ಸರ್ಕಾರ ಜನರಿಗೆ ನೀಡಿದ ವಾಗ್ದಾನದಂತೆ ಅಕ್ಕಿಯನ್ನು ನೀಡುವುದಾಗಿ ದಿನಾಂಕವನ್ನು ನಿಗದಿ ಮಾಡಿ ಘೋಷಣೆ ಮಾಡಲಾಯಿತು. ಅಲ್ಲದೇ ನಿಗದಿ ಪಡಿಸಿದ ದರವನ್ನು ಸರ್ಕಾರ ಭರಿಸಲು ಸಿದ್ಧವೆಂದು ಸಹ ತಿಳಿಸಿತ್ತು. ಆದರೂ ಸಹ ಇಲ್ಲವೆಂದು ಹೇಳುವ ಮೂಲಕ ರಾಜಕೀಯ ಮಾಡಿದೆ. ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಅಕ್ಕಿಯನ್ನು ಬೇರೆ ರಾಜ್ಯಗಳನ್ನು ಸಂಪರ್ಕಿಸಿ, ಅಲ್ಲಿಂದ ತಂದು ಬಡವರಿಗಾಗಿ ತಂದಿರುವ ಯೋಜನೆಯಂತೆ ಆಹಾರ ಧಾನ್ಯಗಳನ್ನು ನೀಡಲಾಗುವುದು ಎಂದು ಭರವಸೆಯನ್ನು ನೀಡಿದರು.
ಇದನ್ನೂ ಓದಿ: ಅಕ್ಕಿ ಪೂರೈಕೆ ಬಗ್ಗೆ ಕಾಂಗ್ರೆಸ್, ಸಿಎಂ ತಮ್ಮ ಅಸಮರ್ಥತೆ ಮರೆಮಾಚಲು ಸುಳ್ಳು ಹೇಳುತ್ತಿದ್ದಾರೆ: ಸಂಸದ ತೇಜಸ್ವಿ ಸೂರ್ಯ
ಯೋಜನೆಯನ್ನು ವಿಫಲಗೊಳಿಸುವ ಪ್ರಯತ್ನ: ಬೇರೆ ರಾಜ್ಯಗಳಿಂದ ಸರ್ಕಾರ ನಿಗದಿಪಡಿಸಿದ ದರದಲ್ಲಿ ಖರೀದಿಸಿ ಆಹಾರ ಧಾನ್ಯಗಳನ್ನು ನೀಡುತ್ತೇವೆ. ಕೇಂದ್ರ ಸರ್ಕಾರದ ಕುತಂತ್ರ ರಾಜಕೀಯದಿಂದ ಕರ್ನಾಟಕದ ಬಡ ಜನರಿಗಾಗಿ ತಂದಿರುವ ಯೋಜನೆಯನ್ನು ವಿಫಲಗೊಳಿಸಲು ಪ್ರಯತ್ನ ಮಾಡುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ನಾವು 25 ಸಂಸದರು 5 ಕೆಜಿ ಅಕ್ಕಿ ಕೊಟ್ವಿ, ಕಾಂಗ್ರೆಸ್‌ನಲ್ಲೀಗ 135 ಶಾಸಕರಿದ್ದಾರೆ, 10 ಕೆಜಿ ಅಕ್ಕಿ ಕೊಡಲಿ ನೋಡೋಣ'