ರಾಯಚೂರು: ಹಟ್ಟಿ ಚಿನ್ನದ ಗಣಿ ಪ್ರದೇಶ ವೀಕ್ಷಣೆಗೆ ತೆರಳುವ ವೇಳೆ ಸಚಿವ ಮುರುಗೇಶ್ ನಿರಾಣಿಗೆ ಕಾರ್ಮಿಕರು ಶೂ ತೊಡಿಸಿದ್ದಾರೆ. ಲಿಂಗಸೂಗೂರು ತಾಲೂಕಿನ ಹಟ್ಟಿ ಗೋಲ್ಡ್ ಮೈನಿಂಗ್ ಪ್ರಗತಿ ಪರಿಶೀಲನೆ ಸಭೆ ನಡೆಸುವ ಮುನ್ನ ಗೋಲ್ಡ್ ಮೈನಿಂಗ್ ವೀಕ್ಷಣೆಗೆ ತೆರಳಲು ಮುಂದಾದ ವೇಳೆ ಸುರಕ್ಷತಾ ದೃಷ್ಟಿಯಿಂದ ಸುರಕ್ಷಾ ಸಾಧನ ತೊಡಿಸಿದ್ದರು. ಆದರೆ ಬಳಿಕ ಸಚಿವರ ಕಾಲಿಗೆ ಶೂ ಕೂಡ ತೊಡಿಸಿದರು.
ಇನ್ನು ಸಚಿವರ ಮುಂದೆ ಕಾರ್ಮಿಕರು ಗಣಿಯಲ್ಲಿ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಲು ಮನವಿ ಸಲ್ಲಿಸಲು ಮುಂದಾದರು. ಹಟ್ಟಿ ಚಿನ್ನದ ಗಣಿಯಲ್ಲಿ ಕೆಲಸ ಮಾಡುವಾಗ ಮೃತಪಟ್ಟ ಕಾರ್ಮಿಕರ ಕುಟುಂಬದವರಿಗೆ ನೌಕರಿ ನೀಡಬೇಕು. ಆದ್ರೆ ಅಧಿಕಾರಿಗಳು ಕೆಲಸವನ್ನು ನೀಡುತ್ತಿಲ್ಲವೆಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ನಿತ್ಯ ಮೈನಿಂಗ್ ಕೆಲಸ ಮಾಡುವ ಕಾರ್ಮಿಕರಿಗೆ ಕಾಲ ಕಾಲಕ್ಕೆ ಸುರಕ್ಷತಾ ಸಾಧನಗಳನ್ನು ನೀಡಬೇಕು. ಆದರೆ ಶೂಗಳು ಹರಿದು ಹೋಗಿವೆ. ಇದನ್ನು ಬದಲಾಯಿಸಿಕೊಡಿ ಎಂದು ಕೇಳಿದರೆ, ಸಂಬಂಧಿಸಿದ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂದು ದೂರು ನೀಡಿದರು.
ಇದನ್ನೂ ಓದಿ: ಮನುಷ್ಯನ ಅಂತ್ಯ ಸಂಸ್ಕಾರಕ್ಕೂ ಸಿಗುತ್ತಿಲ್ಲ ತುಂಡು ಜಾಗ!