ETV Bharat / state

ದ್ವಂದ್ವ ಹೇಳಿಕೆ ನೀಡುವುದು ಸಹ ಕುತಂತ್ರ ರಾಜಕಾರಣ: ಈಶ್ವರಪ್ಪ ವಾಗ್ದಾಳಿ

author img

By

Published : Jun 8, 2021, 11:58 AM IST

ಕೇಂದ್ರದ ನಾಯಕರು ಕೇಳಿದ್ರೆ ರಾಜೀನಾಮೆಗೆ ಸಿದ್ಧವೆಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ ತಕ್ಷಣವೇ ಕಾಂಗ್ರೆಸ್​ ನಾಯಕರ ಹೇಳಿಕೆಗಳು ಬದಲಾಗಿವೆ. ಈ ರೀತಿ ದ್ವಂದ್ವ ಹೇಳಿಕೆ ನೀಡುವುದು ಸಹ ಕುತಂತ್ರ ರಾಜಕಾರಣ. ಕಾಂಗ್ರೆಸ್​​ನ ಡಿಕೆಶಿ ಮತ್ತು ಸಿದ್ದರಾಮಯ್ಯ ಆಟಗಳು ಬಿಜೆಪಿ ಮುಂದೆ ನಡೆಯಲ್ಲ ಎಂದು ರಾಯಚೂರಿನಲ್ಲಿ ಸಚಿವ ಈಶ್ವರಪ್ಪ ಹೇಳಿದ್ರು.

minister ks Eshwarappa
ಕೆ ಎಸ್​​ ಈಶ್ವರಪ್ಪ

ರಾಯಚೂರು: ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಬಿಟ್ಟರೆ ಮುಖ್ಯಮಂತ್ರಿ ಆಗಲು ಬೇರೆ ನಾಯಕರಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸಚಿವ ಕೆ ಎಸ್​ ಈಶ್ವರಪ್ಪ ವಾಗ್ದಾಳಿ

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ ಇನ್ನೊಬ್ಬ ಮುಖ್ಯಮಂತ್ರಿಯಾಗುವಂತಹ ವ್ಯಕ್ತಿಯೇ ಬಿಜೆಪಿಯಲ್ಲಿಲ್ಲ ಅಂತಾರೆ. ಡಿಕೆಶಿ ಮಾತನಾಡುತ್ತಾ ಯಡಿಯೂರಪ್ಪ ಭದ್ರವಾದ ರಾಜಕಾರಣಿ ಯಾವುದಕ್ಕೂ ಜಗ್ಗಲ್ಲ ಬಗ್ಗಲ್ಲ ಅಂತಾರೆ. ಈ ರೀತಿ ದ್ವಂದ್ವ ಹೇಳಿಕೆ ನೀಡುವುದು ಸಹ ಕುತಂತ್ರ ರಾಜಕಾರಣವಾಗಿದೆ ಪ್ರತಿಕ್ರಿಯಿಸಿದ್ರು.

ಬಿಜೆಪಿಯಲ್ಲಿ ಬಹಳಷ್ಟು ಜನರಿಗೆ ಸಿಎಂ ಆಗುವ ಶಕ್ತಿ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿ ಡಬಲ್ ಗೇಮ್ ಆಡುತ್ತಿದ್ದು, ಅಂತಹ ಕೆಲಸ ಮಾಡುವುದು ಬೇಡ. ಯಡಿಯೂರಪ್ಪ ಕೇಂದ್ರದ ನಾಯಕರು ಕೇಳಿದ್ರೆ ರಾಜೀನಾಮೆಗೆ ಸಿದ್ಧವೆಂದು ಹೇಳಿದ ತಕ್ಷಣ ಕಾಂಗ್ರೆಸ್ ನಾಯಕರ ಹೇಳಿಕೆಗಳೇ ಬದಲಾಗಿವೆ. ಈ ಆಟಗಳು ಬಿಜೆಪಿ ಮುಂದೆ ನಡೆಯಲ್ಲ. ಯಡಿಯೂರಪ್ಪನವರ ಹೇಳಿಕೆಯೇ ಡಿಕೆಶಿ ಮತ್ತು ಸಿದ್ದರಾಮಯ್ಯಗೆ ಉತ್ತರ ಕೊಟ್ಟಿದೆ. ಇಡೀ ರಾಜ್ಯದ ಕಾರ್ಯಕರ್ತರಿಗೆ ಬಿಎಸ್​ವೈ ಹೇಳಿಕೆಯಿಂದ ತೃಪ್ತಿ ಆಗಿದ್ದು, ಇದನ್ನು ಕಾಂಗ್ರೆಸ್​ನವರು ಗಮನಿಸಿದ್ದಾರೆ ಎಂದರು.

ಸಿಎಂ ರಾಜೀನಾಮೆ ವಿಚಾರವಾಗಿ ಶಾಸಕರ ಸಹಿ ಸಂಗ್ರಹ ಬಗ್ಗೆ ಅಂತೆ ಕಂತೆ ಶುರುವಾಗಿದೆ. ಸಹಿ ಬಗ್ಗೆ ನಾನು ನೋಡಿಲ್ಲ, ಹಿಂದೆ ಯಾವುದಕ್ಕೋ ಮಾಡಿದ ಸಹಿ ಸಂಗ್ರಹವಾಗಿದೆ. ಸಹಿ ಸಂಗ್ರಹ ಬಿಜೆಪಿಯ ಪದ್ಧತಿ ಅಲ್ಲ. ಯಾರೂ ಪರ- ವಿರುದ್ಧ ಸಹಿ ಸಂಗ್ರಹ ಮಾಡಕೂಡದು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.