ETV Bharat / state

ರಾಜ್ಯದಲ್ಲಿ ಶೇ.52.8ರಷ್ಟು ಮಂದಿ ಕೊರೊನಾ ಸೋಂಕಿನಿಂದ ಗುಣಮುಖ - ಸಚಿವ ಡಾ. ಸುಧಾಕರ್ - ಕೊರೊನಾ ಬಗ್ಗೆ ಸುಧಾಕರ್ ಮಾಹಿತಿ

ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ತಪಾಸಣೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಬಹುಪಾಲು ಮಹಾರಾಷ್ಟ್ರದಿಂದ ಬಂದವರಿಗೆ ಸೋಂಕು ಪತ್ತೆಯಾಗಿದೆ..

sudhakar pressmeet in Raichur
ಡಾ.ಕೆ.ಸುಧಾಕರ್, ಸಚಿವ
author img

By

Published : Jun 13, 2020, 5:01 PM IST

Updated : Jun 13, 2020, 5:57 PM IST

ರಾಯಚೂರು: ಕೊರೊನಾ ಸೋಂಕು, ಸಾರ್ಸ್​​ನಷ್ಟು ತೀವ್ರತೆ ಹೊಂದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೂ 6,516 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ 3,440 ಮಂದಿ ಸೋಂಕಿನಿಂದ ಗುಣಮುಖರಾದ್ರೆ, 79 ಜನ ಮೃತರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸೋಂಕಿನಿಂದ ಗುಣಮುಖ ಪ್ರಮಾಣ ಶೇ. 52.8 ರಷ್ಟಿದೆ. ಸಾವಿನ ಪ್ರಮಾಣ ಶೇ.1.2 ರಷ್ಟಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಆದರೆ, ಮಾಧ್ಯಮಗಳಲ್ಲಿ ಕೊರೊನಾ‌ಗೆ ನಿತ್ಯ ಒಂದೊಂದು ಹೆಸರಿಡುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಿದೆ. ಹೀಗಾಗಿ ಇರುವ ವಾಸ್ತವ ಜನರಿಗೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕೆಂದು ಮನವಿ ಮಾಡಿದ್ರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌..

ರಾಜ್ಯದಲ್ಲಿ 40 ಸರ್ಕಾರಿ, 30 ಖಾಸಗಿ ಸೇರಿ ಒಟ್ಟು 71 ಕೊರೊನಾ ತಪಾಸಣಾ ಪ್ರಯೋಗಾಲಯಗಳನ್ನ ಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ತಪಾಸಣೆ ನಡೆಸಲಾಗುತ್ತಿದೆ ಎಂದರು. ರಾಜ್ಯದಲ್ಲಿ ಬಹುಪಾಲು ಮಹಾರಾಷ್ಟ್ರದಿಂದ ಬಂದವರಿಗೆ ಸೋಂಕು ಪತ್ತೆಯಾಗಿದೆ. ಹೊರ ರಾಜ್ಯದಿಂದ ಬಂದಿರುವವರ ಬಗ್ಗೆ ಮುಖ್ಯಕಾರ್ಯದರ್ಶಿಯೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಕೊರೊನಾ ಸೋಂಕಿನ ಚಿಕಿತ್ಸೆಯಿಂದ ಬೇರೆ ಚಿಕಿತ್ಸೆಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗುವುದು ಎಂದರು.

Last Updated : Jun 13, 2020, 5:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.