ETV Bharat / state

ಜೂನ್ 22ರಿಂದ ಮಂತ್ರಾಲಯದ ರಾಯರ ದರ್ಶನಕ್ಕೆ ಅವಕಾಶ - Raichur Raghavendra math news

ಜೂನ್ 22ರ ಬೆಳಗ್ಗೆಯಿಂದ ರಾಯರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಆನ್​ಲೈನ್ ಮೂಲಕವೂ ಸೇವೆಗಳನ್ನು ಪಡೆಯಹುದಾಗಿದೆ.

Mantrayala opens for devotees from June 22
ಜೂನ್ 22ರಿಂದ ಮಂತ್ರಾಲಯದ ರಾಯರ ದರ್ಶನಕ್ಕೆ ಅವಕಾಶ
author img

By

Published : Jun 17, 2021, 1:00 PM IST

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಜೂನ್​​ 22ರಿಂದ ರಾಯರ ದರ್ಶನ ಆರಂಭವಾಗಲಿದೆ ಎಂದು ಶ್ರೀಮಠದ ವ್ಯವಸ್ಥಾಪಕ ವೆಂಕಟೇಶ್ ಜೋಷಿ ಮಾಹಿತಿ ನೀಡಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶ್ರೀರಾಘವೇಂದ್ರ ಸ್ವಾಮಿ ಮಠ ಬಂದ್ ಮಾಡಿ ಭಕ್ತರಿಗೆ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಇದೀಗ ಆರೋಗ್ಯ ಇಲಾಖೆ ಮಾರ್ಗಸೂಚಿಗಳ ಅನುಗುಣವಾಗಿ ಮಠದ ಪೀಠಾಧಿಪತಿ ಶ್ರೀಸುಬುದೇಂಧ್ರ ತೀರ್ಥರು ಭಕ್ತರಿಗೆ ರಾಯರ ಮೂಲ ಬೃಂದಾವನ ‌ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ.

Mantrayala opens for devotees from June 22
ಮಠದ ಅಧಿಕೃತ ಪ್ರಕಟಣೆ

ಜೂನ್ 22ರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 4ರಿಂದ ರಾತ್ರಿ 9 ಗಂಟೆಯವರೆಗೆ ಮೂಲ ಬೃಂದಾವನ ದರ್ಶನವನ್ನು ಭಕ್ತರು ಪಡೆಯಬಹುದಾಗಿದೆ. ಅಲ್ಲದೇ ಶ್ರೀಮಠಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಸರ್ಕಾರದ ನಿರ್ದೇಶನದ್ವನಯ ಕೋವಿಡ್ ನಿಯಮಗಳನ್ನ ಪಾಲಿಸಬೇಕಿದೆ.

ಇದನ್ನೂ ಓದಿ: 12th ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ CBSE ಮಾನದಂಡ ಪ್ರಕಟ: ಜುಲೈ 31ರೊಳಗೆ ರಿಸಲ್ಟ್​

ಇದರ ಜೊತೆಗೆ ದರ್ಶನಕ್ಕೆ ಆಗಮಿಸಲು ಸಾಧ್ಯವಾಗದ ಭಕ್ತರು ಶ್ರೀಮಠದ www.srsmatha.org/online ಲಿಂಕ್ ಮೂಲಕ ದರ್ಶನ ಪಡೆಯಬಹುದು ಹಾಗೂ ಸೇವೆಗಳನ್ನು ಸಲ್ಲಿಸಬಹುದು ಎಂದು ವೆಂಕಟೇಶ್ ಜೋಷಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.