ರಾಯಚೂರು: ಕಿರಿಯ ಸಹೋದರ ಸ್ವತಃ ತನ್ನ ಅಣ್ನನನ್ನು ಹತ್ಯೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಚಂದ್ರಬಂಡಾ ರಸ್ತೆಯ ಜನತಾ ಕಾಲೋನಿ ನಿವಾಸಿಯಾದ ಶರಣಬಸವ(24) ಹತ್ಯೆಯಾಗಿರುವ ಅಣ್ಣನಾಗಿದ್ದು, ಶಶಿಕುಮಾರ್ ಕೊಲೆ ಮಾಡಿದ ತಮ್ಮನಾಗಿದ್ದಾನೆ.
ರಾಯಚೂರು ತಾಲೂಕಿನ ಹುಣಸಿಹಾಳ ಉಡಾ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ನಾಲೆಯ ಪಕ್ಕದ ತೊಗರಿ ಹೊಲದಲ್ಲಿ ಮದ್ಯಪಾನ ಮಾಡಿಸಿ, ಬಳಿಕ ಬಿಳಿ ಬಣ್ಣದ ಪ್ಲಾಸ್ಟಿಕ್ ಮಾದರಿಯಲ್ಲಿ ಬರುವ ದಾರದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಯಾದ ವ್ಯಕ್ತಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರೆ, ಹತ್ಯೆ ಮಾಡಿದ ಆರೋಪಿ ಜೊಮೊಟೋದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.
ರಾಯಚೂರು: ಅನುಮಾನಾಸ್ಪದವಾಗಿ ಯುವಕನ ಶವ ಪತ್ತೆ
ಕೊಲೆ ಮಾಡಿದ ಆರೋಪಿಯನ್ನು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ನಿನ್ನೆ ನಡೆದಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ. ಗುರುತು ಪತ್ತೆಗಾಗಿ ಪೊಲೀಸರು ಮನವಿ ಮಾಡಿಕೊಂಡು ತನಿಖೆ ನಡೆಸುತ್ತಿದ್ದರು.