ETV Bharat / state

ರಾಜಕೀಯ ದ್ವೇಷಕ್ಕೆ ಓರ್ವ ಬಲಿ: ಇಬ್ಬರಿಗೆ ಗಾಯ - lingasuguru latest crime news

ಲಿಂಗಸುಗೂರು ತಾಲೂಕು ಗುಡದನಾಳ ಗ್ರಾಮದಲ್ಲಿ ಗ್ರಾಪ ಪಂಚಾಯತ್​ ಚುನಾವಣೆ ವೇಳೆ ಹುಟ್ಟಿಕೊಂಡ ರಾಜಕೀಯ ದ್ವೇಷ ಓರ್ವ ವ್ಯಕ್ತಿಯ ಜೀವವನ್ನೇ ತೆಗೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ.

man killed in lingasuguru over politicsman killed in lingasuguru over politics
ಇಬ್ಬರಿಗೆ ಗಾಯ
author img

By

Published : Feb 16, 2021, 11:54 AM IST

ರಾಯಚೂರು: ಲಿಂಗಸುಗೂರು ತಾಲೂಕು ಗುಡದನಾಳ ಗ್ರಾಮದಲ್ಲಿ ರಾಜಕೀಯ ದ್ವೇಷದಿಂದ ಶರಣಬಸವ ಹೊಸಮನಿ (35) ಎಂಬಾತ ಕೊಲೆಯಾಗಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಜರುಗಿದೆ.

ಹೊನ್ನಳ್ಳಿ ಗ್ರಾಮ ಪಂಚಾಯತ್​ಗೆ ಈಚೆಗೆ ಜರುಗಿದ ಚುನಾವಣೆಯಲ್ಲಿ ಶರಣಬಸವ ಹೊಸಮನಿ ತಾಯಿ ಹನುಮಂತಮ್ಮ ಹೊಸಮನಿ ಆಯ್ಕೆಯಾಗಿದ್ದರು. ಪ್ರತಿಸ್ಪರ್ಧಿ ಕುಟುಂಬಸ್ಥರು ಆಗಿನಿಂದಲೇ ರಾಜಕೀಯ ದ್ವೇಷ ಸಾಧಿಸುತ್ತ ಸೋಮವಾರ ರಾತ್ರಿ ಜಗಳ ತೆಗೆದು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆ ನಡೆಸಿ ಕೊಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಗ್ರಾಮ ಪಂಚಾಯತ್​ ಸದಸ್ಯೆ ಹನುಮಂತಮ್ಮ ಹೊಸಮನಿ ನೀಡಿದ ದೂರು ಸ್ವೀಕರಿಸಿದ ಲಿಂಗಸುಗೂರು ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಜೆ ಡಿವೈಎಸ್ಪಿ ಎಸ್.ಎಸ್ ಹುಲ್ಲೂರು, ಸಿಪಿಐ ಮಹಾಂತೇಶ ಸಜ್ಜನ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಇದನ್ನೂ ಓದಿ:ಮಹಿಳೆಯ‌ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ: ಅಶ್ಲೀಲ ಫೋಟೋ ಕಳಿಸುತ್ತಿದ್ದ ಆರೋಪಿ ಅರೆಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.