ETV Bharat / state

ಹೊಟ್ಟೆನೋವಿನ ಟಾನಿಕ್ ಎಂದು ಸ್ಯಾನಿಟೈಸರ್ ಸೇವಿಸಿ ವ್ಯಕ್ತಿ ಸಾವು - ರಿಮ್ಸ್ ಆಸ್ಪತ್ರೆ

ವಿಪರಿತ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಮನೆಯಲ್ಲಿದ್ದ ಸ್ಯಾನಿಟೈಸರ್​​​​​​​​​ ಅನ್ನು ಹೊಟ್ಟೆ ನೋವಿನ ಟಾನಿಕ್ ಎಂದು ಸೇವಿಸಿ ಮೃತಪಟ್ಟಿದ್ದಾನೆ.

rcr police
rcr police
author img

By

Published : Jul 28, 2020, 11:15 AM IST

ರಾಯಚೂರು: ಹೊಟ್ಟೆ ನೋವು ತಾಳಲಾರದೇ ಹೊಟ್ಟೆ ನೋವಿನ ಟಾನಿಕ್ ಎಂದು ಸ್ಯಾನಿಟೈಸರ್ ಸೇವಿಸಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ರಾಯಚೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ತಾಲೂಕಿನ ನೆಲಹಾಳ ಗ್ರಾಮದ ಖಾಸಿಂಸಾಬ್(65) ಮೃತ ವ್ಯಕ್ತಿ. ಜು.26ರಂದು ಖಾಸಿಂಸಾಬ್​ಗೆ ವಿಪರಿತ ಹೊಟ್ಟೆನೋವು ಕಾಣಿಸಿಕೊಂಡಿದೆ. ಆಗ ಮನೆಯಲ್ಲಿದ್ದ ಸ್ಯಾನಿಟೈಸರ್​ ಅನ್ನು ಹೊಟ್ಟೆ ನೋವಿನ ಟಾನಿಕ್ ಎಂದು ಸೇವಿಸಿ ಅಸ್ವಸ್ಥಗೊಂಡಿದ್ದಾರೆ.

ಕೂಡಲೇ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಖಾಸಿಂಸಾಬ್ ನಿನ್ನೆ ರಾತ್ರಿ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಘಟನೆ ಕುರಿತಂತೆ ಯರಗೇರಾ ಠಾಣೆಯಲ್ಲಿ ಕಲಂ 174 ಸಿಆರ್​ಪಿಸಿ ಅಡಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.