ರಾಯಚೂರು: ಇಳಿ ವಯಸ್ಸಿನಲ್ಲಿ ಮೃತಪಟ್ಟಿರುವ ಹಿರಿಯ ವೃದ್ಧರೊಬ್ಬರ ದೇಹವನ್ನ ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.
ನಗರದ ಪ್ರತಿಕಾ ಛಾಯಾಗ್ರಾಹಕರಾಗಿರುವ ಮಲ್ಲಿಕಾರ್ಜುನ ಸ್ವಾಮಿ ಅವರ ತಂದೆ ಮಹಾಂತಸ್ವಾಮಿ(85) ಮೃತ ವ್ಯಕ್ತಿ. ಸಹಜವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ನಿನ್ನೆ ಸಂಜೆ ವೇಳೆ ರಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವರ ಸಾವಿನ ಬಳಿಕ ಅವರ ದೇಹ ಹಾಗೂ ಕಣ್ಣುಗಳನ್ನು ದಾನ ಮಾಡುವಂತೆ ಈ ಮೊದಲು ಸೂಚಿಸಿದ್ರು. ಅವರ ಇಚ್ಛೆಯಂತೆ ಕುಟುಂಬಸ್ಥರು ಕಣ್ಣುಗಳನ್ನು ನವೋದಯ ಆಸ್ಪತ್ರೆ ಹಾಗೂ ದೇಹವನ್ನ ರಿಮ್ಸ್ ಆಸ್ಪತ್ರೆಗೆ ದಾನ ಮಾಡಿದ್ದಾರೆ. ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿನ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನದ ಬಳಿಕ ದೇಹ ಹಾಗೂ ಕಣ್ಣುಗಳನ್ನ ದಾನ ಮಾಡಲಾಯಿತು.