ರಾಯಚೂರು: ಚಲಿಸುತ್ತಿದ್ದ ಲಾರಿಯ ಸ್ಟೇರಿಂಗ್ ಕಟ್ ಆಗಿ ಲಾರಿ ಪಲ್ಟಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾನವಿ ತಾಲೂಕಿನ ಕಲ್ಲೂರು ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ.
ಭತ್ತ ಕಟಾವ್ ಮಾಡುವ ಯಂತ್ರ ತೆಗೆದುಕೊಂಡು ಲಾರಿ ಕಾರಟಗಿಯಿಂದ ರಾಯಚೂರು ಕಡೆ ಬರುತ್ತಿತ್ತು. ಮಾರ್ಗಮಧ್ಯ ಲಾರಿ ಸ್ಟೇರಿಂಗ್ ಕಟ್ ಆಗಿದೆ. ಪರಿಣಾಮ ಲಾರಿಯಲ್ಲಿದ್ದ ನಾಲ್ವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಸಿರವಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳುಗಳನ್ನ ಚಿಕಿತ್ಸೆಗಾಗಿ ಮಾನವಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಿರವಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.