ಲಿಂಗಸುಗೂರು: ಬಹಿರ್ದೆಸೆಗೆ ತೆರಳಿ ಮಸ್ಕಿ ನಾಲಾದ ದಿಬ್ಬದಲ್ಲಿ ಸಿಲುಕಿದ್ದ ಜಲೀಲ ಎಂಬಾತನನ್ನು ಅಗ್ನಿಶಾಮಕದಳ ಸಿಬ್ಬಂದಿ ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಚೂರು ಜಿಲ್ಲೆ ಮಸ್ಕಿ ತಾಲೂಕು ಕೇಂದ್ರಕ್ಕೆ ಹೊಂದಿಕೊಂಡ ನಾಲಾದಲ್ಲಿ ಸಿಲುಕಿದ್ದ ಇಬ್ಬರು ಯುವಕರ ರಕ್ಷಣೆ ಕಾರ್ಯದಲ್ಲಿ ಚೆನ್ನಬಸವನ ರಕ್ಷಣೆ ವಿಫಲವಾದ ಬೆನ್ನಲ್ಲೇ ಅಗ್ನಿಶಾಮಕ ದಳ ಕ್ರೇನ್ ಸಹಾಯದಿಂದ ಇನ್ನೋರ್ವ ಯುವಕ ಜಲೀಲ ಅವರನ್ನು ರಕ್ಷಣೆ ಮಾಡಲಾಗಿದೆ. ಜಲೀಲನನ್ನು ದಡಕ್ಕೆ ಕರೆ ತರುತ್ತಿದ್ದಂತೆ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಸಾಮೂಹಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಯಿತು. ಕೊಚ್ಚಿ ಹೋಗಿರುವ ಚೆನ್ನಬಸವನಿಗಾಗಿ ಹುಡುಕಾಟ ಮುಂದುವರೆದಿದೆ.
ಮಸ್ಕಿ ನಾಲಾದಲ್ಲಿ ಕೊಚ್ಚಿಹೋದ ಯುವಕ: ರಕ್ಷಣಾ ಕಾರ್ಯ ವಿಫಲ
ಹಗ್ಗ ತುಂಡರಿಸದಿದ್ದರೆ ಚೆನ್ನಬಸವ ಕೂಡ ದಡ ಸೇರುತ್ತಿದ್ದ. ಓರ್ವ ಯುವಕ ಕೊಚ್ಚಿ ಹೋಗಿದ್ದು, ಓರ್ವನನ್ನು ಮಾತ್ರ ರಕ್ಷಿಸಿದ್ದೇವೆ. ಇಬ್ಬರ ರಕ್ಷಣೆಗೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಅಗ್ನಿಶಾಮಕದಳ ಸಿಬ್ಬಂದಿ ಹೇಳಿದ್ದಾರೆ.