ಲಿಂಗಸುಗೂರು: ಕೊರೊನಾ ವೈರಸ್ ತಡೆಗೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಅನುಷ್ಠಾನಗೊಳಿಸುವ ಜೊತೆ ಗ್ರಾಹಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ತಾಲ್ಲೂಕು ಆಡಳಿತ ಹಗಲಿರಳು ಶ್ರಮಿಸುತ್ತಿದೆ ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ ತಿಳಿಸಿದರು.
ಶನಿವಾರ ಸಂತೆಯಲ್ಲಿ ಒಂದು ಸುತ್ತು ಸುತ್ತಿ ಮಾತನಾಡಿದ ಅವರು ಲಾಕ್ ಡೌನ್ ನಿಯಮಗಳ ಪಾಲನೆ ಮಾಡುವಲ್ಲಿ ಜನತೆ ಇನ್ನೂ ಸಹಕಾರ ನೀಡಿ ಸರ್ಕಾರದ ಜೊತೆ ಸಹಕರಿಸುತ್ತಿಲ್ಲ. ಪೊಲೀಸ್, ಕಂದಾಯ, ಆರೋಗ್ಯ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದರು.
ಜೂನಿಯರ್ ಕಾಲೇಜು ಆವರಣದಲ್ಲಿ ದಿನದ ಸಂತೆ ಆರಂಭವಾದ ಬಳಿಕ ಹಣ್ಣು ಮತ್ತು ತರಕಾರಿ ಇತರೆ ವಸ್ತುಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿರುವುದು ಹರ್ಷ ಮೂಡಿಸಿದೆ ಎಂದು ತಿಳಿಸಿದರು.
ಕಿರಾಣಿ ವಸ್ತುಗಳಲ್ಲಿ ಪೈಪೋಟಿ ನಡೆದಿದ್ದು, ಶೀಘ್ರದಲ್ಲಿಯೆ ಬೆಲೆ ಹೆಚ್ಚಳಕ್ಕೆ ಕಡಿವಾಣ ಹಾಕಲಾಗುವುದು. ಪುರಸಭೆ ಅಧ್ಯಕ್ಷ ಕೆ.ಕೆ. ಮುತ್ತಪ್ಪ, ಸಿಪಿಐ ಯಶವಂತ ಬಿಸ್ನಳ್ಳಿ, ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ತಂಡದಲ್ಲಿ ಉಪಸ್ಥಿತರಿದ್ದರು.