ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ತೋರಲಬಂಚಿ ಗ್ರಾಮದ ಭೀಮಪ್ಪ ಸಿಂಗೋಜಿಯನ್ನು (37) ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಆರೋಪಿಗಳು ಪರಾರಿಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಭೀಮಪ್ಪ ಸಿಂಗೋಜಿಯನ್ನು ಎರಡು ದಿನಗಳ ಹಿಂದೆ ಮೊಹರಂ ಹಬ್ಬಕ್ಕೆಂದು ಕರೆದು ಗುಂಪುಗೂಡಿದ ಮಾಳಿಂಗರಾಯ, ಹನುಮಪ್ಪ, ದ್ಯಾಮವ್ವ (ಹೆಂಡತಿ), ಮಸಿಗೆಪ್ಪ, ಗದ್ದೆವ್ವ, ಬಂಡಾರೆಪ್ಪ, ಬಸವರಾಜ ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪಿಸಲಾಗಿದೆ.
ಈ ಸಂಬಂಧ ಮೃತನ ತಂದೆ ಸಂಗಪ್ಪ ಸಿಂಗೋಜಿ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.