ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಡುಗಡ್ಡೆ ಪ್ರದೇಶಗಳಿಗೆ ಉಪ ವಿಭಾಗಾಧಿಕಾರಿ ರಾಜಶೇಖರ ಡಂಬಳ ನೇತೃತ್ವದ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನಡುಗಡ್ಡೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಪ್ರವಾಹ ಬರುವ ಮುಂಚೆಯೇ ನಡುಗಡ್ಡೆ ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ಜಾನುವಾರು, ಕುರಿ, ಮೇಕೆ ಸಮೇತ ಸ್ಥಳಾಂತರಗೊಳಿಸುವಂತೆ ನೋಟಿಸ್ ನೀಡಿದರು. ಶಾಶ್ವತ ಸ್ಥಳಾಂತರಕ್ಕೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಭರವಸೆ ನೀಡಿದರು.
ಏಕಾಏಕಿ ಅಧಿಕಾರಿಗಳ ತಂಡ ಕೃಷ್ಣಾ ನದಿ ನೀರಿನಲ್ಲಿ ಕಲ್ಲು ಬಂಡೆಗಳನ್ನು ದಾಟಿಕೊಂಡು ನಡುಗಡ್ಡೆ ಜನರ ಸಂಕಷ್ಟ ತಿಳಿಯಲು ಆಗಮಿಸಿದ್ದಕ್ಕೆ ಮ್ಯಾದರಗಡ್ಡಿ, ವಂಕಮ್ಮನಗಡ್ಡಿ, ಕರಕಲಗಡ್ಡಿ ಸಂತ್ರಸ್ತರು ಹರ್ಷಗೊಂಡಿದ್ದು, ತಮಗೆ ಶಾಶ್ವತ ಪರಿಹಾರ ಸಿಗಬಹುದು ಎಂಬ ಆಶಯ ಹೊಂದಿದ್ದಾರೆ.
ಸಹಾಯಕ ಆಯುಕ್ತ ರಾಜಶೇಖರ ಡಂಬಳ, ತಹಶೀಲ್ದಾರ ಚಾಮರಾಜ ಪಾಟೀಲ್, ಸಿಪಿಐ ಮಹಾಂತೇಶ ಸಜ್ಜನ್, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ, ಅಗ್ನಿ ಶಾಮಕ ದಳ ಅಧಿಕಾರಿ ಹೊನ್ನಪ್ಪ ಸೇರಿದಂತೆ ಇತರರು ಇದ್ದರು.