ರಾಯಚೂರು: ವಕೀಲರೊಬ್ಬರಿಗೆ ಪ್ರಾಣ ಬೆದರಿಕೆ ಹಾಕಿ ದರೋಡೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಹಟ್ಟಿ ಪೊಲೀಸರು ಬಂಧಿಸಿದ್ದಾರೆ. ಗುರುಗುಂಟಾ ಗ್ರಾಮದ ಕೃಷ್ಣ ಮತ್ತು ಮಂಗಳಾಪ್ಪ ಬಂಧಿತರು. 22 ಗ್ರಾಂ ಬಂಗಾರದ ಚೈನ್, ಒಂದು ನವಗ್ರಹದ ಉಂಗುರ, ಬಜಾಜ್ ಡಿಸ್ಕವರಿ ಬೈಕ್ ಸೇರಿದಂತೆ 1,80,000 ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ: ಜಿಲ್ಲೆಯ ಕಲಬುರಗಿ-ಲಿಂಗಸೂಗೂರು ಹೆದ್ದಾರಿಯ ಗುಂಡಲಬಂಡಾ ಕ್ರಾಸ್ ಹತ್ತಿರ ವಕೀಲ ಶಶಿಧರ ಎನ್ನುವವರು ಮೂತ್ರ ವಿಸರ್ಜನೆ ಮಾಡಲು ಕಾರ್ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಎರಡು ಬೈಕ್‌ನಲ್ಲಿ ಅಲ್ಲಿಗೆ ಬಂದಿದ್ದ ಆರೋಪಿಗಳು ಚಾಕುವಿನಿಂದ ಹೆದರಿಸಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನೂ ಓದಿ: ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ: ಸಿಸಿಟಿವಿ ದೃಶ್ಯ