ETV Bharat / state

ಕೃಷ್ಣಾ ನದಿ ನೀರಿನ ಏರಿಕೆ: ಗುರ್ಜಾಪುರ ಗ್ರಾಮ ಸ್ಥಳಾಂತರ - flood in karnataka

ಕೃಷ್ಣಾ ನದಿಯಿಂದ 6 ಲಕ್ಷ ಕ್ಯುಸೆಕ್​ ನೀರು ಬಿಡಲಾಗುತ್ತಿದ್ದು. ನದಿ ಪಾತ್ರದ ಗ್ರಾಮಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿದೆ. ಇದರಿಂದ ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮವನ್ನು ಸ್ಥಳಾಂತರಿಸಲಾಗುತ್ತಿದೆ.

ಕೃಷ್ಣ ನದಿ ಪ್ರವಾಹ ಭೀತಿಗೆ ಗ್ರಾಮಸ್ಥರ ಸ್ಥಳಾಂತರ
author img

By

Published : Aug 11, 2019, 12:05 AM IST

ರಾಯಚೂರು: ಕೃಷ್ಣಾ ನದಿ ಪ್ರವಾಹದ ಮುನ್ಮೆಚ್ಚರಿಕಾ ಕ್ರಮವಾಗಿ, ಜಿಲ್ಲಾಡಳಿತದ ಒತ್ತಾಯದಿಂದ ತಾಲೂಕಿನ ಗುರ್ಜಾಪುರ ಗ್ರಾಮದ ಜನರನ್ನು ಸ್ಥಳಾಂತರಿಸಲಾಗುತ್ತಿದೆ.

ಕೃಷ್ಣ ನದಿ ಪ್ರವಾಹ ಭೀತಿಗೆ ಗ್ರಾಮಸ್ಥರ ಸ್ಥಳಾಂತರ

ಕೃಷ್ಣಾ ನದಿಯಿಂದ 6 ಲಕ್ಷ ಕ್ಯುಸೆಕ್​ ನೀರು ಬಿಡಲಾಗುತ್ತಿದ್ದು. ಗುರ್ಜಾಪುರ ಗ್ರಾಮದ ಜನರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿದೆ. ಬಸ್, ಆಟೋ ವಾಹನಗಳ ಮೂಲಕವೂ ಊರು ತೊರೆಯುತ್ತಿದ್ದಾರೆ. ಹತ್ತಿರದ ಜೆಗರ್ಕಲ್​ ಗ್ರಾಮದಲ್ಲಿ ತೆರೆಯಲಾಗಿದ್ದ ಗಂಜಿ ಕೇಂದ್ರದತ್ತ ಹೊರಟಿದ್ದಾರೆ.

ಒಟ್ಟಾರೆ ಮಳೆಯ ಅಬ್ಬರ ಮುಂದುವರೆದಿದ್ದು. ನಾಡಿನ ಲಕ್ಷಾಂತರ ಜನರ ಜೀವನ ಅತಂತ್ರವಾಗಿದೆ.

Intro:ಕೃಷ್ಣ ನದಿಯಿಂದ 6 ಲಕ್ಷ ಕ್ಯುಸೆಕ ನೀರು ಬಿಡುತ್ತಿರುವ ಕಾರಣ ಅಪಾಯದಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಾಯಚೂರು ತಾಲೂಕುನ ಗುರ್ಜಾಪುರ ಗ್ರಾಮಸ್ಥರನ್ನು ಸ್ಥಳಾಂತರಿಸಲಾಯಿತು.
ಜಿಲ್ಲಾಡಳಿತ ದ ಕರೆಯ ಮೇರೆಗೆ ಗ್ರಾಮಸ್ಥರು ಒಲ್ಲದ ಮನಸ್ಸಿನಿಂದ ತಮ್ಮ ಸ್ವ ಗ್ರಾಮ ತೊರೆಯುತ್ತಿರುವುದು ಕಂಡು ಬಂತು.

Body:ಸಾಲು ಸಾಲು ಬಂಡಿಗಳಲ್ಲಿ ಗ್ರಾಮದಿಂದ ಹೊರಗೆ ಹೋಗುತ್ತಿರುವ ಅವರ ನೋವು ಹೇಳತೀರದು, ಗ್ರಾಮದಲ್ಲಿನ ಅಪಾಯ ದಿನದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಸ್ಥಳಾಂತರವಾನಿವಾರ್ಯವಾಗಿತ್ತು ಇದಕ್ಕೆ ಅವರೂ ತಿಳಿದುಕೊಂಡು ಹೋಗುವುದು ಅನಿವಾರ್ಯವಾಗಿತ್ತು.
ಒಂದೆಡೆ ಬಸ್,ಟ್ರ್ಯಾಕ್ಟರ್ ನಲ್ಲಿ ತೆರಳಿದರೆ ಮತ್ತೊಂದೆಡೆ ತಮ್ಮ ಜಾನುವಾರು ಗಳೋಂದಿಗೆ ಬಂಡಿಗಳಲ್ಲಿ ಸಾಮಾನು ಹಾಕಿಕಿಂಡು ಗ್ರಾಮ ತೊರೆದರು.
ಗ್ರಾಮದಿಂದ ತೆರಳುವಾಗ ಈ ಟಿವಿ ಭಾರಯ ಅವರನ್ನು ಮಾತನಾಡಿಸಿದಾಗ ಪರಿಸ್ಥಿತಿಯ ಬಗ್ಗೆ ಹೆಳುತ್ತಾ ಅವರ ಕಣ್ಣು ಒದ್ದೆಯಾಗಿ ಅಸಾಹಯಕತೆ ವ್ಯಕ್ತವಾಗುತಿತ್ತು.
ಗುರ್ಜಾಪುರ ಗ್ರಾಮದಿಂದ ಜೆಗರ್ಕಲ್ ಗ್ರಾಮಕ್ಕೆ ಸ್ಥಳಾಂತರ ಮಾಡಿದ್ದು ಅಲ್ಲಿ ಗಂಜಿ ಕೇಂದ್ರ ಸ್ಥಾಪಿಸಿ ಆಸರೆ ನೀಡಲಾಗುತ್ತಿದೆ.
ದಾರಿಯಲ್ಲಿ ಹೊರಟ ಸಂತ್ರಸ್ಥರನ್ನು ಮಾತನಾಡಿಸಿದಾಗ, ನಮ್ಮ ಊರಲ್ಲಿ ನೀರು ಹೆಚ್ಚು ಬರುತ್ತಿರುವ ಕಾರಣ ಕೆಲ ದಿನಗಳಿಂದ ಹೀಗೆ ಕಾಲ ದೂಡುತಿದ್ವಿ ಆದ್ರೆ ಈಗ ನೀರಿನ ಅಪಾಯ ಹೆಚ್ಚಾಗಿರುವ ಕಾರಣ ನಮ್ಮ ಊರು ಮುಳುಗಡೆಯಾಗುತ್ತಿದೆ ಎಂದು ಹೆಳಿ ಕಳುಹಿಸಲಾಗ್ತಿದೆ ಎಂದು ದುಃಖ ತಪ್ತರಾಗಿ ಹೇಳಿದರು.
ಮತ್ತೊಬ್ಬರು ಬಂಡಿಯಲ್ಲಿ ಸಿಲಿಂಡರ್,ಅಲ್ಪ ಅಕ್ಕಿ ಇತರೆ ವಸ್ತುಗಳನ್ನು ಹಾಕಿಕೊಂಡು ಹೋಗುತ್ತಿರುವವರನ್ನು ಎಲ್ಲಿಗೆ ಎಂದು ಕೇಳಿದಾಗ ಊರಲ್ಲಿ ನೀರುಬಂದ ಕಾರಣ ಊರು ಬಿಡುತಿದ್ದೇವೆ ಎಲ್ಲಿ ಸಿಗುತ್ತೋ ಅಲ್ಲೇ ಟಿಕಾಣಿ ಹೂಡುತ್ತೇವೆ ಏನು ಮಾಡೋದು ಎಂದು ಅಸಹಾಯಕ ವ್ಯಕ್ತಪಡಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.