ETV Bharat / state

ರಾಯಚೂರಿನ ವೀರಗೋಟದ ಸುಕ್ಷೇತ್ರಕ್ಕೆ ನುಗ್ಗಿದ ಕೃಷ್ಣೆ ನೀರು: ಹಲವೆಡೆ ಜಮೀನು ಜಲಾವೃತ - ಕೃಷ್ಣ ನದಿ ಪ್ರವಾಹ

ರಾಯಚೂರಿನ ಹಲವೆಡೆ ಕೃಷ್ಣಾ ನದಿ ನೀರು ಜಮೀನುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ದೇವದುರ್ಗ ತಾಲೂಕಿನ ವೀರಗೋಟದ ಸುಕ್ಷೇತ್ರ ಆದಿಮೌನೇಶ್ವರ ದೇವಸ್ಥಾನದತ್ತ ನೀರು ನುಗ್ಗುತ್ತಿದೆ.

ಕೃಷ್ಣ ನದಿ ಪ್ರವಾಹ
author img

By

Published : Aug 5, 2019, 12:11 PM IST

ರಾಯಚೂರು: ಕೃಷ್ಣಾ ನದಿ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೋಟದ ಸುಕ್ಷೇತ್ರ ಆದಿಮೌನೇಶ್ವರ ದೇವಸ್ಥಾನದ ಆವರಣದತ್ತ ನೀರು ನುಗ್ಗಿದೆ.

ದೇವಸ್ಥಾನದ ಆವರಣದತ್ತ ನೀರು ನುಗ್ಗಿರುವುದರಿಂದ ವೀರಗೋಟಕ್ಕೆ ಆಗಮಿಸಿದ್ದ ಭಕ್ತರಲ್ಲಿ ಆತಂಕ ಮೂಡಿಸಿದೆ. ಇನ್ನು ದೇವಾಲಯಕ್ಕೆ ಭೇಟಿ ನೀಡಿದ ಶಾಸಕ ಶಿವನಗೌಡ ನಾಯಕ್ ಹಾಗೂ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ.

Krishna river
ಕೃಷ್ಣಾ ನದಿ ಪ್ರವಾಹ ಅವಾಂತರ

ಇನ್ನು ಜಿಲ್ಲೆಯ ಹಲವೆಡೆ ನದಿ ಪಾತ್ರದಲ್ಲಿನ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿ ಉಂಟಾಗಿದೆ. ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮದ ಬಳಿ ಬರುವ ನೂರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿರುವ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಹೊಲ-ಗದ್ದೆಗಳು ಜಲಾವೃತಗೊಂಡಿವೆ.

ಕೃಷ್ಣಾ ನದಿ ಪ್ರವಾಹ ಅವಾಂತರ

ಅಲ್ಲದೆ ಜಿಲ್ಲೆಯ ದೇವದುರ್ಗ ತಾಲೂಕಿನ ನಿಲುವಂಜಿ, ಹೂವಿನ ಹೆಡಗಿ, ಕೊಪ್ಪರ, ಕೂಪರ್ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಸದ್ಯ ನಾರಾಯಣಪುರ ಜಲಾಶಯದಿಂದ 2.90 ಲಕ್ಷ ಕ್ಯೂಸೆಕ್​​ ನೀರು ಬಿಡುಗಡೆಯಾಗಿದ್ದು, ಮತ್ತಷ್ಟು ಜಮೀನು ಜಲಾವೃತಗೊಳ್ಳುವ ಸಾಧ್ಯತೆಯಿದೆ.

Intro:ರಾಯಚೂರು.ಆ.5
ಕೃಷ್ಣ ನದಿ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ವೀರಗೋಟದ ಸುಕ್ಷೇತ್ರ ಆದಿಮೌನೇಶ್ವರ ದೇವಸ್ಥಾನದ ಆವರಣ ತಲುಪಿದ ನದಿ ನೀರು.
ಕೃಷ್ಣಾ ನದಿಗೆ ಹೆಚ್ಚಿನ ನೀರು ಬಿಟ್ಟ ಹಿನ್ನೆಲೆ ದೇವಸ್ಥಾನ ಆವರಣ ತಲುಪಿದ ನೀರು.

Body:ವೀರಗೋಟದಲ್ಲಿ ಸುಕ್ಷೇತ್ರಕ್ಕೆ ಹಲವಾರು ಭಕ್ತರು
ಬರುತ್ದೇತಾರೆ ನೀರು ಆವರಣಕ್ಕೆ ನುಗ್ಗಿದ ಕಾರಣ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿಂದೆ ಇಲ್ಲಿ ಐತಿಹಾಸಿಕವಾಗಿ ಸಾವಿರಾರು ಸಂಖ್ಯೆಯಲ್ಲಿಬ ಧಾರ್ಮಿಕ ಕಾರ್ಯಕ್ರಮ ನಡೆದಿದ್ದೇದು ಪ್ರಸಿದ್ದಿ ಪಡೆದಿದೆ.
ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಶಿವನಗೌಡ ನಾಯಕ್ ಹಾಗು ಅಧಿಕಾರಿಗಳು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.