ಹೈದ್ರಾಬಾದ್: ರಾಯಚೂರು ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಯಮದಲ್ಲಿ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ತಾಂತ್ರಿಕ ಅಪ್ರೆಂಟಿಸ್ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ಭರ್ತಿಗೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ, ಒಂದು ವರ್ಷದ ಅವಧಿಯ ಈ ಹುದ್ದೆಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆ ವಿವರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಯಮದಲ್ಲಿ 133 ಹುದ್ದೆಗಳ ವಿವರ ಇಲ್ಲಿದೆ.
- ಆಟೋ ಮೆಕಾನಿಕ್ - 46
- ಆಟೋ ವಿದ್ಯುತ್ -28
- ಆಟೋ ವೈಲ್ಡರ್ - 20
- ಆಟೋ ಬಾಡಿ ಫೀಟರ್ - 20
- ಆಟೋ ಪೇಂಟರ್ - 9
- ಆಟೋ ಮೆಷಿನಿಸ್ಟ್ - 9
ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ ಉತ್ತೀರ್ಣತೆಯ ಪ್ರಮಾಣ ಪತ್ರವನ್ನು ಹೊಂದಿರಬೇಕು.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ವಯೋಮಿತಿ ಮೀರಿರಬಾರದು.
ಈ ಅಪ್ರೆಂಟಿಸ್ ಅವಧಿಯಲ್ಲಿ ಸರ್ಕಾರ ಅಥವಾ ನಿಗಮದಲ್ಲಿ ಚಾಲ್ತಿಯಿರುವ ನಿಯಮಾನುಸಾರ ತರಬೇತಿ ಭತ್ಯೆಯನ್ನು ನೀಡಲಾಗುವುದು.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಿದೆ. ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಜನವರಿ 11 ರಂದು ಬೆಳಗ್ಗೆ 10 ಗಂಟೆಗೆ ನೇರ ಸಂದರ್ಶನ ಈ ಕೆಳಗಿನ ವಿಳಾಸದಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ಶೈಕ್ಷಣಿಕ ದಾಖಲಾತಿ ಜೊತೆಗೆ ದೈಹಿಕ ಅರ್ಹತೆ ಮತ್ತು ವೈದ್ಯಕೀಯ ಪ್ರಮಾಣ ಪತ್ರವನ್ನು ಸಂದರ್ಶನಕ್ಕೆ ಕೊಂಡೊಯ್ಯುವುದು ಅವಶ್ಯವಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಯಮ, ವಿಭಾಗೀಯ ಕಚೇರಿ, ರಾಯಚೂರು ವಿಭಾಗ, ರಾಯಚೂರು.
ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು kkrtc.karnataka.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: ಉದ್ಯೋಗ: ಚೆಸ್ಕಾಂನಲ್ಲಿ 200 ಅಪ್ರೆಂಟಿಸ್ ಹುದ್ದೆಗಳು