ETV Bharat / state

ಕೆಎಸ್​​ಆರ್​​ಟಿಸಿ ಸಿಬ್ಬಂದಿಗೆ ಗುಡ್ ನ್ಯೂಸ್: ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಗೆ ಸಿಎಂ ಚಾಲನೆ - KSRTC HEALTH SCHEME

ಕೆಎಸ್​​ಆರ್​ಟಿಸಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಯೋಜನೆಗೆ ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಮೂಲಕ ಸಾರಿಗೆ ಸಿಬ್ಬಂದಿಗೆ ಹೊಸ ವರ್ಷದ ಗಿಫ್ಟ್ ನೀಡಲಾಗಿದೆ.

ಕೆಎಸ್​​ಆರ್​​ಟಿಸಿ ಆರೋಗ್ಯ ಯೋಜನೆಗೆ ಸಿಎಂ ಚಾಲನೆ
ಕೆಎಸ್​​ಆರ್​​ಟಿಸಿ ಆರೋಗ್ಯ ಯೋಜನೆಗೆ ಸಿಎಂ ಚಾಲನೆ (ETV Bharat)
author img

By ETV Bharat Karnataka Team

Published : Jan 6, 2025, 3:44 PM IST

ಬೆಂಗಳೂರು: ಕೆಎಸ್ಆರ್​​ಟಿಸಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಆರೋಗ್ಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಮೂಲಕ ಸಾರಿಗೆ ನೌಕರರ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.

ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಈ ಯೋಜನೆಯಡಿ ಒಡಬಂಡಿಕೆ ಮಾಡಿಕೊಂಡಿರುವ ಎಲ್ಲ ಆಸ್ಪತ್ರೆಗಳು ಕೆಎಸ್​​ಆರ್​ಟಿಸಿ ನೌಕರರು ಮತ್ತು ಕುಟುಂಬದವರು ಆಸ್ಪತ್ರೆಗೆ ಬಂದಾಗ ಅವರನ್ನು ಗೌರವಯುತವಾಗಿ ಹಾಗೂ ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.

"ಕೆಎಸ್ಆರ್​ಟಿಸಿ ಆರೋಗ್ಯ" ಯೋಜನೆಯಡಿ ಸಾರಿಗೆ ಸಂಸ್ಥೆಯ ಎಲ್ಲ ನೌಕರರು, ಅವರ ತಂದೆ - ತಾಯಿ ಮತ್ತು ಪತ್ನಿ - ಮಕ್ಕಳಿಗೆ ಖರ್ಚಿನ ಮಿತಿಯಿಲ್ಲದ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಸಿಗಲಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 250 ಖಾಸಗಿ ಆಸ್ಪತ್ರೆಗಳೊಂದಿಗೆ ಒಡಬಂಡಿಕೆ ಮಾಡಿಕೊಳ್ಳಲಾಗಿದೆ. ಇದೇ ವೇಳೆ, ಕೆಎಸ್​​ಆರ್​ಟಿಸಿ ನೌಕರರು ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೀಡಲಾಗುವ 1 ಕೋಟಿ ರೂ ಹಾಗೂ ಸೇವೆಯಲ್ಲಿರುವ ಮೃತಪಟ್ಟ ನೌಕರರ ಕುಟುಂಬಕ್ಕೆ ನೀಡಲಾಗುವ 10 ಲಕ್ಷ ರೂ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.

250 ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್​ ಬಳಸಿ ನಗದು ರಹಿತ ಚಿಕಿತ್ಸೆ: ದೇಶದಲ್ಲಿ ಮೊದಲ ಬಾರಿಗೆ ಸಾರಿಗೆ ನಿಗಮದಲ್ಲಿ ಆರೋಗ್ಯ ಸೇವೆ ಸೌಲಭ್ಯ ನೀಡುತ್ತಿದೆ. ರಾಜ್ಯದ 250 ಆಸ್ಪತ್ರೆಯಲ್ಲಿ ಸಾರಿಗೆ ನೌಕರರು ಆರೋಗ್ಯ ಕಾರ್ಡ್ ಬಳಸಿ ನಗದು ರಹಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ಸೂಪರ್ ಸ್ಪೆಷಾಲಿಟಿ, ಮಲ್ಟಿ ಸ್ಪೆಷಾಲಿಟಿ ಸೇರಿದಂತೆ ಸಾಮಾನ್ಯ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಪಡೆಯಬಹುದಾಗಿದೆ. ಆ ಮೂಲಕ ಡ್ರೈವರ್, ಕಂಡಕ್ಟರ್ ಸೇರಿದಂತೆ ಸಿಬ್ಬಂದಿಗೆ ನಗದು ರಹಿತ ಚಿಕಿತ್ಸೆ ದೊರೆಯಲಿದೆ. ಯಾವುದೇ ಕಾಯಿಲೆಗೆ, ಸಂಪೂರ್ಣ ಚಿಕಿತ್ಸೆ ವೆಚ್ಚ ನೀಡಲಾಗುವುದು. ಸಾರಿಗೆ ನೌಕರರ ಮನೆಯ ಆರು ಜನರು ಈ ಕಾರ್ಡ್ ಬಳಸಿ ಚಿಕಿತ್ಸೆ ಪಡೆದುಕೊಳ್ಳಬಹುದು. ಕೆಎಸ್​​ಆರ್​ಟಿಸಿ ನೌಕರರು ನಿವೃತ್ತಿಯಾಗುವವರೆಗೂ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಈ ಯೋಜನೆಯಿಂದ ಆಗಲಿದೆ ಬಹಳಷ್ಟು ಉಪಯೋಗ: ಈ ವೇಳೆ ಮಾತನಾಡಿದ ಸಿಎಂ, ಇದೊಂದು ಬಹಳ ಒಳ್ಳೆಯ ಕಾರ್ಯಕ್ರಮ. ಕಾರ್ಮಿಕ ನಾಯಕರು, ನೌಕರರು ಬಹಳ ದಿನದಿಂದ‌ ಈ ಬೇಡಿಕೆ ಇಟ್ಟಿದ್ರು. ನೌಕರರು, ಕುಟುಂಬದವರು ಇದರ ಸೌಲಭ್ಯ ಪಡೆಯಲಿದ್ದಾರೆ. ಈ ಯೋಜನೆಯಿಂದ ಬಹಳಷ್ಟು ಉಪಯೋಗವಾಗಲಿದೆ. ಯಾವ ಯಾವ ಸ್ಥಳದಲ್ಲಿದ್ದಾರೋ ಅಲ್ಲೇ ಆರೋಗ್ಯ ಸೇವೆ ಪಡೆಯಬಹುದು. ಆಸ್ಪತ್ರೆಯ ಪ್ರತಿನಿಧಿಗಳಿಗೆ ನಾನು ಸೂಚನೆ ಕೊಡ್ತೇನೆ. ಯಾವುದೇ ಕಾರಣಕ್ಕೂ ತಿರಸ್ಕಾರ ಮನೋಭಾವದಿಂದ‌ ನೋಡಬಾರದು. ಕೆ‌ಎಸ್‌ಆರ್‌ಟಿಸಿ ಮಾತ್ರ ಯೋಜನೆಯನ್ನು ಇಂದು ಜಾರಿಗೆ ತಂದಿದೆ. ಉಳಿದ ನಿಗಮಗಳು ಮೂರು ತಿಂಗಳೊಳಗಾಗಿ ಯೋಜನೆ ಜಾರಿ ಮಾಡಲಿವೆ ಎಂದರು.

ನೌಕರರ ಕನಸು ನನಸಾದ ದಿನವಿಂದು: ಇದೇ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸುಮಾರು 20 ವರ್ಷ ಗಳಿಂದ ಈ ವಿಚಾರವಾಗಿ ಬೇಡಿಕೆ ಇತ್ತು. 250 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಇನ್ನೂ 50 ಆಸ್ಪತ್ರೆಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಮುಂದೆ ಸರ್ಕಾರದ ಆಸ್ಪತ್ರೆಗಳನ್ನು ಸಹ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅನೇಕ ನೌಕರರ ಕನಸು ನನಸಾದ ದಿನ ಇಂದು ಎಂದು ತಿಳಿಸಿದ್ದಾರೆ.

ಕೆಎಸ್​​ಆರ್ ಟಿಸಿ ಎಂಡಿ ಅನ್ಬು ಕುಮಾರ್ ಮಾತನಾಡಿ, ಕೆಎಸ್ಆರ್​ಟಿಸಿ ಆರೋಗ್ಯ ಕಾರ್ಡ್​ಗಾಗಿ ನೌಕರರು ಪ್ರತಿ ತಿಂಗಳು 650 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಕೆಎಸ್ಆರ್​ಟಿಸಿ ನಿಗಮ 600 ರೂಪಾಯಿ ಪಾವತಿ ಮಾಡುತ್ತದೆ. ಇದರಿಂದ ವರ್ಷಕ್ಕೆ ಒಟ್ಟು 46 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಈ ಹಿಂದೆ ಕೆಎಸ್​​ಆರ್​​ಟಿಸಿ ನೌಕರರ ಆರೋಗ್ಯಕ್ಕಾಗಿ ಪ್ರತಿ ವರ್ಷ 16 ಕೋಟಿ ರೂಪಾಯಿ ವೆಚ್ಚ ಮಾಡುತ್ತಿತ್ತು‌. ರಾಜ್ಯದ ಆಯುರ್ವೇದಿಕ್ ಆಸ್ಪತ್ರೆ ಸೇರಿದಂತೆ 250 ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಕೆಎಸ್ಆರ್​ಟಿಸಿ ನೌಕರರು ನಗದು ರಹಿತವಾಗಿ ಚಿಕಿತ್ಸೆ ‌ಪಡೆದುಕೊಳ್ಳಬಹುದು. ನೌಕರರು ಚಿಕಿತ್ಸೆ ಪಡೆದುಕೊಳ್ಳಲು ಯಾವುದೇ ಮಿತಿ ಇರೋದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ - ಮಧ್ಯರಾತ್ರಿಯಿಂದಲೇ ಜಾರಿ: ಎಲ್ಲಿಗೆ ಎಷ್ಟು ದರ ತಿಳಿಯಿರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.