ಲಿಂಗಸೂಗುರು/ರಾಯಚೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ 6 ಜನರ ಮೇಲೆ ದಾಳಿ ನಡೆಸಿದ ಲಿಂಗಸೂಗುರು ಪೊಲೀಸರು, 6 ಆರೋಪಿಗಳ ಪೈಕಿ ನಾಲ್ವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಲಗಲದಿನ್ನಿ ಗ್ರಾಮದ ಹನುಮಂತ, ಬಾಹುಬಲಿ, ಗೋನವಾರ ಗ್ರಾಮದ ವಿರೇಶ ತೆಗ್ಗಿನಮನಿ, ರಾಜಶೇಖರ್ ಅಲಿಯಾಸ್ ರಾಜು ಜಾವುರು, ರಾಮನಗೌಡ, ಹನುಮಂತ ಗುರಿಕಾರ ಐಪಿಎಲ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಆರೋಪಿಗಳು. ಈ ಪೈಕಿ ಹನುಮಂತ ಗುರಿಕಾರ ಹಾಗೂ ರಾಜು ಪರಾರಿಯಾಗಿದ್ದು, ಇನ್ನುಳಿದ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಸಿಪಿಐ ಮಹಾಂತೇಶ್ ಸಜ್ಜನ್ ನೇತೃತ್ವದಲ್ಲಿ ದಾಳಿ ನಡೆಸಿ 51 ಸಾವಿರ ರೂ. ನಗದು, 3 ಮೊಬೈಲ್ ಫೋನ್ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ.
ಪಟ್ಟಣದ ಮೈಲಾರಲಿಂಗ ಕಟ್ಟಿಗೆ ಅಡ್ಡದ ಬಳಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದರು. ಇದರ ಖಚಿತ ಮಾಹಿತಿ ಆಧಾರದ ಮೇಲೆ ಡಿವೈಎಸ್ಪಿ ಮಾರ್ಗದರ್ಶನ ಮೇರೆಗೆ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಗಳನ್ನ ಸೆರೆ ಹಿಡಿದಿದ್ದಾರೆ.
ಈ ಸಂಬಂಧ ಲಿಂಗಸೂಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.