ರಾಯಚೂರು: ಆಹಾರ ಸಿಗದೆ ರಸ್ತೆ ಬದಿ ಅಸ್ವಸ್ಥಗೊಂಡಿದ್ದ ವೃದ್ಧೆಯನ್ನು ನಿರ್ಗತಿಕರ ಕೇಂದ್ರಕ್ಕೆ ರವಾನಿಸುವ ಮೂಲಕ ಪೊಲೀಸರು ಮಾನವೀಯತೆ ಮೆರದಿದ್ದಾರೆ.
ನಗರದ ತೀನ್ ಕಂದಿಲ್ ಬಳಿ ವೃದ್ಧೆ ಅನ್ನ, ನೀರು ಸಿಗದೇ ಅಸ್ವಸ್ಥಗೊಂಡಿದ್ದರು. ಇದನ್ನ ಕಂಡು ಪೊಲೀಸರು ನಿರ್ಗತಿಕರ ಕೇಂದ್ರಕ್ಕೆ ಮಾಹಿತಿ ನೀಡಿದರು. ಬಳಿಕ ನಿರ್ಗತಿಕರ ಕೇಂದ್ರ ವಾಹನ ಸ್ಥಳಕ್ಕೆ ಆಗಮಿಸಿತ್ತು.