ETV Bharat / state

ರಾಯಚೂರು ಜಿಲ್ಲೆಯಲ್ಲಿ ಹೆಚ್ಚಾಗ್ತಿದ್ದಾರೆ ಮನೋ ರೋಗಿಗಳು... ಅಂಕಿ ಅಂಶ ಕೇಳಿದ್ರೆ ಶಾಕ್ ಆಗ್ತೀರಿ! - ಮನೋಚೈತನ್ಯ ಯೋಜನೆ

ಕಳೆದ ಮೂರು ವರ್ಷಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, 2017-18ರಲ್ಲಿ 46 ಸಾವಿರ ಮಂದಿ ಪತ್ತೆಯಾಗಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.

ಏರಿಕೆ
author img

By

Published : Sep 23, 2019, 12:01 AM IST

Updated : Sep 23, 2019, 9:50 AM IST

ರಾಯಚೂರು: ಮನುಷ್ಯನಿಗೆ ಮಾನಸಿಕವಾಗಿ ನೆಮ್ಮದಿ ಬಹಳ ಮುಖ್ಯ. ಒಂದು ವೇಳೆ ಮನುಷ್ಯನ ಮೇಲೆ ಒತ್ತಡ, ಆತನಿಗೆ ದುಷ್ಟಚಟಗಳು ಜಾಸ್ತಿಯಾದ್ರೆ ಅದರ ನೇರ ಪರಿಣಾಮ ಮನಸ್ಸಿನ ಮೇಲೆ ಬೀರಿ ಮಾನಸಿಕ ಕಾಯಿಲೆಗೆ ಒಳಗಾಗುತ್ತಾರೆ. ಅಂತೆಯೇ ರಾಯಚೂರು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. 2016-17ರಲ್ಲಿ 6,449 ಮಾನಸಿಕ ರೋಗಿಗಳು ಪತ್ತೆಯಾಗಿದ್ದರು. 2017-18ರಲ್ಲಿ ಇದು 46 ಸಾವಿರದ 59ಕ್ಕೆ ಏರಿದೆ. ಇನ್ನು 2018-19 ರಲ್ಲಿ 44,854 ಮಾನಸಿಕ ರೋಗಿಗಳು ಪತ್ತೆಯಾಗಿದ್ದಾರೆ. ಇದರಲ್ಲಿ ಬಾಣಂತಿಯರು ಕೂಡ ಇರುವುದು ಆತಂಕಕಾರಿ ವಿಷಯವಾಗಿದೆ. ಇಂತಹ ರೋಗಿಗಳಿಗೆ ಮನೋಚೈತನ್ಯ ಯೋಜನೆಯಡಿಯಲ್ಲಿ ಆಯಾ ಕಾಲಕ್ಕೆ ಜಿಲ್ಲೆಯ ಕೇಂದ್ರಗಳಲ್ಲಿ ಚಿಕಿತ್ಸೆ ಹಾಗೂ ಔಷಧಿಯನ್ನ ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿದೆ ಅಂತಾರೆ ಮಾನಸಿಕ ರೋಗಿಗಳ ಅನುಷ್ಠಾನಾಧಿಕಾರಿಗಳು.

ರಾಯಚೂರು ಜಿಲ್ಲೆಯಲ್ಲಿ ಹೆಚ್ಚಾಗ್ತಿದ್ದಾರೆ ಮನೋ ರೋಗಿಗಳು

ಮನುಷ್ಯನ ಮೇಲೆ ಅಧಿಕ ಒತ್ತಡ ಹಾಗೂ ದುಷ್ಚಟಗಳು ಆತನ ವಿಚಾರ ಹಾಗೂ ನಡುವಳಿಕೆಯಲ್ಲಿ ಬದಲಾವಣೆ ತಂದು ಮಾನಸಿಕ ಅಸ್ವಸ್ಥೆ ಕಾಯಿಲೆಗೆ ಒಳಗಾಗುವಂತೆ ಮಾಡುತ್ತವೆ ಅಂತಾರೆ ಮಾನಸಿಕ ರೋಗ ತಜ್ಞರು. ಕಾಯಿಲೆ ಕಂಡು ಬಂದಾಗ ಮಾನಸಿಕ ವೈದ್ಯರ ಬಳಿ ಬರಲು ಜನರು ಮುಜುಗರ ಪಡುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಇದೀಗ ಹಿಂದುಳಿದ ಪ್ರದೇಶಗಳಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಇದನ್ನು ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಜಾಗೃತ ಜಾಥಾ, ತಪಾಸಣೆ, ಉತ್ತಮ ಚಿಕಿತ್ಸೆಯನ್ನ ನೀಡಲು ಮುಂದಾಗಿದೆ.

ಒಟ್ಟಾರೆ ಮನುಷ್ಯ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಅಲ್ಲದೇ ನಡವಳಿಕೆ, ವಿಚಾರ, ಮಾತಿನಲ್ಲಿ ಬದಲಾವಣೆ ಕಂಡುಬಂದರೆ ಹತ್ತಿರದ ಮಾನಸಿಕ ರೋಗಿಗಳ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕಾಗಿದೆ.

Intro:¬ಸ್ಲಗ್: ಹೆಚ್ಚುಗುತ್ತಿದ್ದ ಮಾನಸಿಕ ರೋಗಿಗಳ ಸಂಖ್ಯೆ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 22-೦9-2019
ಸ್ಥಳ: ರಾಯಚೂರು
ಆ್ಯಂಕರ್: ಮನುಷ್ಯನಿಗೆ ಮಾನಸಿಕವಾಗಿ ನೆಮ್ಮದಿ ಬಹಳ ಮುಖ್ಯ. ಒಂದು ವೇಳೆ ಮನುಷ್ಯನ ಮೇಲೆ ಒತ್ತಡ, ಆತನ ಮಾಡುವ ದುಷ್ಟಾಚಟಗಳು ಜಾಸ್ತಿಯಾದ್ರೆ ಅದರ ನೇರ ಪರಿಣಾಮ ಮನಸ್ಸಿನ ಮೇಲೆ ಬೀರಿ ಮಾನಸಿಕ ಕಾಯಿಲೆ ಒಳಗಾಗುತ್ತೇನೆ. ಇಂತಹ ಒತ್ತಡಗಳು ಜಾಸ್ತಿಯಾಗಿ ರಾಯಚೂರು ಜಿಲ್ಲೆಯ ವರ್ಷದಿಂದ ವರ್ಷದಿಂದ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಕುರಿತು ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಮನುಷ್ಯನ ಮೇಲೆ ಅಧಿಕ ಒತ್ತಡ ಹಾಗೂ ದುಷ್ಟಾಚಾಟಗಳು, ಆತನ ವಿಚಾರ, ನಡುವಳಿಕೆ ಬದಲಾವಣೆ ಕಂಡು ಬಂದರೆ ಆತನನ್ನು ಕಾಮನ್ ಮಾನಸಿಕ ಆಸ್ವಸ್ಥೆ ಕಾಯಿಲೆಗೆ ಒಳಗಾಗುತ್ತಾನೆ ಅಂತಾರೆ ಮಾನಸಿಕ ರೋಗ ತಜ್ಞನ ವೈದ್ಯರು.
ವಾಯ್ಸ್ ಓವರ್.2: ರಾಯಚೂರು ಜಿಲ್ಲೆಯ 2016-2017 ಸಾಲಿನಲ್ಲಿ 6449 ಮಾನಸಿಕ ರೋಗಿಗಳು ಪತ್ತೆಯಾಗಿದ್ದಾರೆ. 2017-2018 ಸಾಲಿನಲ್ಲಿ 46059 ಮಾನಸಿಕ ರೋಗಿಗಳು, 2018-2019 ಸಾಲಿನಲ್ಲಿ 13,912 ಹಾಗೂ 2019-2020 ಸಾಲಿನಲ್ಲಿ ಇಲ್ಲಿವರೆಗೆ 44854 ಮಾನಸಿಕ ರೋಗಿಗಳು ಪತ್ತೆಯಾಗಿದ್ದಾರೆ. ಈ ಪತ್ತೆಯಾದ ರೋಗಿಗಳು ಬಾಣಂತಿಯರು ಸೇರಿರುವುದು ಆತಂಕಕಾರ ಅಂಶ ಬೆಳಕಿಗೆ ಬಂದಿದೆ. ಈಗ ಪತ್ತೆಯಾಗಿರುವ ಮಾನಸಿಕ ತೀವ್ರ ಅಸ್ವಸ್ಥೆ ರೋಗಿಗಳ ಹೆಚ್ಚಿದೆ. ಇಂತಹ ರೋಗಿಗಳಿಗೆ ಮನೋಚೈತನ್ಯ ಯೋಜನೆಯಡಿಯಲ್ಲಿ ಆಯಾ ಕಾಲಕ್ಕೆ ಜಿಲ್ಲೆಯ ಕೇಂದ್ರಗಳಲ್ಲಿ ಚಿಕಿತ್ಸೆ ಹಾಗೂ ಔಷಧಿಯನ್ನ ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿದೆ ಅಂತಾರೆ ಮಾನಸಿಕ ರೋಗಿಗಳ ಅನುಷ್ಠಾನಾಧಿಕಾರಿಗಳು.
ವಾಯ್ಸ್ ಓವರ್.3: ಇನ್ನೂ ಮಾನಸಿಕ ರೋಗ ಬಾಣಂತಿಯರು ಸೇರಿರುವುದು ಆತಂಕ ಮೂಡಿಸಿದೆ. ಇದಕ್ಕೆ ಜನರು ಮೇಲೆ ಆಗುತ್ತಿರುವ ಒತ್ತಡದಿಂದ ಮಾನಸಿಕ ಕಾಯಿಲೆ ಹೆಚ್ಚಳ ಕಾರಣವಾಗಿದೆ, ಆದ್ರೂ ಕಾಯಿಲೆ ಕಂಡು ಬಂದ್ರೆ ಮಾನಸಿಕ ವೈದ್ಯರಲ್ಲಿ ತೆರಳು ಮುಜುಗರ ಪಾಡುತ್ತಿದ್ದಾರೆ. ಇದೀಗ ಹಿಂದುಳಿದ ಪ್ರದೇಶದಲ್ಲಿ ಮಾನಸಿಕ ರೋಗಿಗಳು ಸಂಖ್ಯೆ ಹೆಚ್ಚು ಆಗುತ್ತಿರುವು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದು ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ನಡೆಯುತ್ತಿರುವ ಜಾಗೃತ ಜಾಥ, ತಪಾಸಣೆ, ಚಿಕಿತ್ಸೆ ನಡೆಯುತ್ತಿವೆ. ಇದನ್ನು ಮತೊಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ರೋಗಿಗಳ ಸಂಖ್ಯೆ ಕಡಿಮೆಯಾಗುವ ಜತೆಗೆ ಮನುಷ್ಯ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಅಲ್ಲದೇ ನಡುವಳಿಕೆ, ವಿಚಾರ, ಮಾತಿನಲ್ಲಿ ಬದಲಾವಣೆಯಾದ್ರೆ ಹತ್ತಿರ ಮಾನಸಿಕ ರೋಗಿಗಳ ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕಾಗಿದೆ.
Conclusion:ಬೈಟ್.1: ಡಾ.ಮನೋಹರ ವೈ. ಪತ್ತಾರ, ಮಾನಸಿಕ ರೋಗ ತಜ್ಞರು. ಜಿಲ್ಲಾ ಮಾನಸಿಕ ಆರೋಗ್ಯ.
ಬೈಟ್.2: ಡಾ. ನಂದಿತಾ, ಮಾನಸಿಕ ರೋಗ ಅನುಷ್ಠಾನಾಧಿಕಾರಿಗಳು, ರಾಯಚೂರು
Last Updated : Sep 23, 2019, 9:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.