ರಾಯಚೂರು: ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಪ್ರಮಾಣ ಹೆಚ್ಚಳವಾಗಿದ್ದು, ನಾರಾಯಣಪುರ(ಬಸವಸಾಗರ) ಜಲಾಶಯಕ್ಕೆ ನೀರು ಹರಿದು ಬಿಡುವುದರಿಂದ ರಾಯಚೂರು ಜಿಲ್ಲೆಯ ನದಿಯ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಜಲಾಶಯದ ಅಧಿಕಾರಿಗಳು ಸೂಚಿಸಿದ್ದಾರೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿಗೆ ನಾರಾಯಣಪುರ ಜಲಾಶಯದ ನೀರು ಹರಿದು ಬರಲಿದೆ. ಆಲಮಟ್ಟಿ ಜಲಾಶಯಕ್ಕೆ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ನಾರಾಯಣಪುರ ಜಲಾಶಯಕ್ಕೆ ನೀರನ್ನು ಹರಿಬಿಡುವ ಸಾಧ್ಯತೆಯಿದೆ. ಇದಕ್ಕಾಗಿ ನದಿ ಪಾತ್ರದಲ್ಲಿ ವಾಸಿಸುವ ಜನರು, ನದಿಗೆ ಇಳಿಯದಂತೆ ಹಾಗೂ ತಮ್ಮ ಜಾನುವಾರುಗಳುನ್ನು ಬಿಡದಂತೆ ಎಚ್ಚರಿಕೆ ವಸಹಿಸುವಂತೆ ಕೃಷ್ಣ ಭಾಗ್ಯ ಜಲನಿಗಮ ಆಣೆಕಟ್ಟು ವಿಭಾಗದ ಕಾರ್ಯನಿರ್ವಹಕ ಅಭಿಯಂತರರು ಸೂಚಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗೆ ಸಂದೇಶವನ್ನು ಕೂಡಾ ರವಾನಿಸಿಲಾಗಿದೆ. ಅಲ್ಲದೇ ಒಳಹರಿವು ಹೆಚ್ಚಳವಾದಲ್ಲಿ ಪ್ರವಾಹ ಎದುರಾಗಲಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮಾಹಿತಿ ರವಾನಿಸಲಾಗಿದೆ.
ನಾರಾಯಣಪುರ ಜಲಾಶಯದಿಂದ ನೀರು ಬಿಟ್ಟರೆ ಪ್ರವಾಹ ಮುನ್ನೆಚ್ಚರಿಕೆ ಕ್ರಮಗಳು:
1) 100000 ಕ್ಯೂಸೆಕ್ ನೀರು ಹರಿದು ಬಿಟ್ಟರೆ, ಕೃಷ್ಣಾ ನದಿ ಪಾತ್ರದಲ್ಲಿರುವ ಜನರಿಗೆ ಮುನ್ನೆಚ್ಚರಿಕೆ.
2) 150000 ಕ್ಯೂಸೆಕ್ ನೀರು ಬಿಟ್ಟರೆ ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗಬಹುದು.
3) 200000 ಕ್ಯೂಸೆಕ್ ನೀರು ಬಿಟ್ಟರೆ ರಾಯಚೂರು-ಕಲಬುರಗಿ ರಸ್ತೆ ಸಂಪರ್ಕ ಕಲ್ಪಿಸುವ ದೇವದುರ್ಗ ತಾಲೂಕಿನ ಹೂವಿನಹೆಡಗಿ ಮುಳಗಡೆಗೊಂಡು, ಸಂಚಾರ ಸ್ಥಗಿತಗೊಳ್ಳಬಹುದು.
4) 250000 ಕ್ಯೂಸೆಕ್ ನೀರು ಬಿಟ್ಟರೆ ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ, ಯರಗೋಡಿ ಸೇತುವೆ ಮುಳಗಡೆಗೊಂಡು ಸಂಚಾರ ಸ್ಥಗಿತಗೊಳ್ಳಬಹುದು.
5) 3000000 ಕ್ಯೂಸೆಕ್ ಮೇಲ್ಪಟ್ಟು ನೀರು ಹರಿದು ಬಂದರೆ ಕೃಷ್ಣಾ ನದಿ ಇಕ್ಕೆಲಗಳಲ್ಲಿ ಪ್ರವಾಹ ಉಂಟಾಗುವುದರಿಂದ ನದಿ ಪಾತ್ರದ ಗ್ರಾಮಗಳ ಜನರಿಗೆ ಪ್ರವಾಹವಾದ ಕುರಿತು ಮುನ್ನೆಚ್ಚರಿಕೆಯ ಕುರಿತು ಎಚ್ಚರಿಸುವುದು.