ರಾಯಚೂರು : ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಅಧ್ಯಯನಕ್ಕೆಂದು ಕೃಷಿ ವಿಶ್ವವಿದ್ಯಾಲಯಗಳಿಗೆ ಯುವಕರು ಸೇರುತ್ತಿದ್ದರು. ಆದರೆ, ಇದೀಗ ಟ್ರೆಂಡ್ ಬದಲಾಗಿ ನಾವೇನು ಕಡಿಮೆಯಿಲ್ಲವೆಂಬಂತೆ ಯುವತಿಯರು ಕೃಷಿ ಕೋರ್ಸ್‌ನತ್ತ ಒಲವು ತೋರಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿನಿಯರ ಪ್ರವೇಶಾತಿ ಹೆಚ್ಚಳವಾಗುತ್ತಿದೆ.
ಕೃಷಿ ಪ್ರಧಾನವಾಗಿರುವ ನಮ್ಮ ದೇಶದಲ್ಲಿ ಯುವತಿಯರು ಕೃಷಿ ಅಧ್ಯಯನಕ್ಕೆ ಮುಂದಾಗುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕೃಷಿ ವಿವಿಗಳಲ್ಲಿ ವಿದ್ಯಾರ್ಥಿನಿಯರ ಪ್ರವೇಶಾತಿ ಹೆಚ್ಚಳವಾಗುತ್ತಿದೆ. ಯುವತಿಯರು ಕೃಷಿ ಕೋರ್ಸ್‌ಗಳ ಅಧ್ಯಯನಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲೇ, ಕಳೆದ ಹತ್ತು ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಕೃಷಿ ಕೋರ್ಸ್‌ನ ಶೇ.45ರಷ್ಟು ಯುವತಿಯರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 2009 ರಿಂದ 2019ರವರೆಗೆ ಬಿಎಸ್ಸಿ ಆಗ್ರಿಕಲ್ಚರ್, ಬಿಟೆಕ್ ಆಗ್ರಿಕಲ್ಚರ್ ಇಂಜಿನಿಯರ್ ಕೋರ್ಸ್ ಪದವಿಗೆ 2955 ಪ್ರವೇಶಗಳ ಪೈಕಿ 1039 ವಿದ್ಯಾರ್ಥಿನಿಯರು ಪ್ರವೇಶ ಪಡೆದುಕೊಂಡಿದ್ದಾರೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವಂತಹ ಕೃಷಿ ಕಾಲೇಜುಗಳಲ್ಲಿ ಆರಂಭದಲ್ಲಿ ಬೆರಳಣಿಕೆಯ ಸಂಖ್ಯೆಯಷ್ಟು ಕಂಡು ಬಂದಿದ್ದು, ಶೇ.20ರಷ್ಟಿತ್ತು. ಇದೀಗ ಶೇ.45ಕ್ಕೆ ತಲುಪಿದೆ. ಬರುವ ದಿನಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚು ಮಾಡಬೇಕು ಎನ್ನುವ ಬೇಡಿಕೆ ಸಹ ಇದೆ ಅಂತಾರೆ ಕೃಷಿ ವಿವಿ ಕುಲಸಚಿವರು ಹಾಗೂ ಶಿಕ್ಷಣ ನಿರ್ದೇಶಕ ಡಾ.ಎಂ ಜಿ ಪಾಟೀಲ್.