ರಾಯಚೂರು: ರಾಯಚೂರು ಜಿಲ್ಲೆಯ ಗೂಗಲ್ ಹಾಗೂ ಗಗಲ್ ಗ್ರಾಮದ ಮೀನುಗಾರರ ಗುಡಿಸಲಿಗೆ ಕೃಷ್ಣಾ ನದಿಯ ನೀರು ಅಪಾರ ಪ್ರಮಾಣದಲ್ಲಿ ಹರಿದು ಬಂದಿದ್ದು, ಇದೀಗ ಮೀನುಗಾರರಿಗೆ ತಾತ್ಕಾಲಿಕವಾಗಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಮೂಲಕ ಈಟಿವಿ ಭಾರತ್ ವರದಿಗೆ ಫಲ ಸಿಕ್ಕಂತಾಗಿದೆ.
'ಗೂಗಲ್'ಗೆ ಅಪ್ಪಳಿಸಿರುವ ಪ್ರವಾಹ... ಮೀನುಗಾರರ ಬದುಕು ಬೀದಿಪಾಲು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಸಿ.ಬಿ. ವೇದಮೂರ್ತಿ ಹಾಗೂ ರೆಡ್ ಕ್ರಾಸ್‌ನಿಂದ ಮೀನುಗಾರರಿಗೆ ಬೆಡ್‌ಶೀಟ್ ಸೇರಿದಂತೆ ಪರಿಹಾರದ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ. ಇನ್ನು ಆಂಧ್ರ ಮೀನುಗಾರರು ಗೂಗಲ್ ಗ್ರಾಮದ ಬಳಿಯ ಗಗಲ್ ಬಳಿ ಗುಡಿಸಿಲು ನಿರ್ಮಿಸಿಕೊಂಡು ಮೀನುಗಾರಿಕೆ ಮಾಡಿ ಜೀವನ ಸಾಗಿಸುತ್ತಿದ್ದರು. ಆದ್ರೆ ಕೃಷ್ಣ ನದಿಯಲ್ಲಿ 4 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಹರಿಬಿಟ್ಟ ಪರಿಣಾಮ ಸುಮಾರು 9 ಗುಡಿಸಲುಗಳು ಸಂಪೂರ್ಣ ಜಲಾವೃತ್ತಗೊಂಡಿತ್ತು.
ಈ ಬಗ್ಗೆ ಈಟಿವಿ ಭಾರತ್, "ಗೂಗಲ್‌ಗೆ ಅಪ್ಪಳಿರುವ ಪ್ರವಾಹ... ಮೀನುಗಾರರ ಬದುಕು ಬೀದಿಪಾಲು" ಎಂಬ ಶೀರ್ಷಿಕೆಯಡಿ ವಿಸೃತ ವರದಿ ಬಿತ್ತರಿಸಿತ್ತು. ಈ ವರದಿಯನ್ನ ಗಮನಿಸಿದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಂದಿಸಿದ್ದು, ಮೀನುಗಾರರಿಗೆ ತಾತ್ಕಾಲಿಕ ಪರಿಹಾರ ಸಾಮಗ್ರಿಗಳನ್ನು ವಿತರಣೆ ಮಾಡಿದ್ದಾರೆ.