ETV Bharat / state

ರಾಜ್ಯ ರಾಜಕೀಯದಲ್ಲಿ ಅನೈತಿಕತೆ ನಡೆಯುತ್ತಿದೆ: ಬಸವರಾಜ ರಾಯರೆಡ್ಡಿ

ಕುಲಗೆಟ್ಟರು ಸುಖ ಪಡಬೇಕು ಅನ್ನೋ ಗಾದೆ ಮಾತಿನಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದವರು ವೈಯಕ್ತಿಕವಾಗಿ ಸುಖಪಟ್ಟರೆ ಹೊರತು, ಜನರಿಗೇನು ಕೂಡುಗೆ ನೀಡಿದ್ದಾರೆ. ಸಿಎಂ ಬಿ ಎಸ್ ಯಡಿಯೂರಪ್ಪನವರು ಮಂಡಿಸಿದ ಬಜೆಟ್​ನಲ್ಲಿ ಜನರಿಗೆ ಕೊಡುಗೆ ನೀಡಿಲ್ಲ. ಬದಲಾಗಿ ಲಕ್ಷಾಂತರ ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ದೂರಿದರು..

immorality-in-state-politics
ಬಸವರಾಜ ರಾಯರೆಡ್ಡಿ
author img

By

Published : Apr 4, 2021, 4:29 PM IST

ರಾಯಚೂರು : ರಾಜಕೀಯದಲ್ಲಿ ಅನೈತಿಕ ವ್ಯವಹಾರದಿಂದ ಇತ್ತೀಚಿನ ದಿನಗಳಲ್ಲಿ ಉಪಚುನಾವಣೆಗಳು ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಮಾನಗಳಲ್ಲಿ ರಾಜಕೀಯ ವಿದ್ಯಾಮಾನಗಳಲ್ಲಿ ಅನೈತಿಕ ವ್ಯವಹಾರ ನಡೆಯುತ್ತಿದೆ. ಅದರಿಂದಾಗಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದೆ. ಇಂತಹ ಅನೈತಿಕ ವ್ಯವಹಾರಗಳಿಂದ ರಾಜಕೀಯ ಅಧಃಪತನವಾಗುತ್ತಿದೆ. ಇದಕ್ಕೆ ನಾವು ದೇಶ ಭಕ್ತರು, ಸುಸಂಸ್ಕೃತರು ಎಂದು ಹೇಳುವವರು ಭಾರತೀಯ ಜನತಾ ಪಾರ್ಟಿಯವರು ಎಂದು ಕಿಡಿಕಾರಿದರು.

ರಾಜ್ಯ ರಾಜಕೀಯದಲ್ಲಿ ಅನೈತಿಕತೆ ನಡೆಯುತ್ತಿದೆ..

ಹಣ, ಅಧಿಕಾರದ ಆಮಿಷದಿಂದ ಬಿಜೆಪಿ ಅಧಿಕಾರಿಕ್ಕೆ ಬಂತು : ರಾಜ್ಯದಲ್ಲಿ ವಾಮ ಮಾರ್ಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಹಣ, ಮಂತ್ರಿಗಿರಿ ಆಮಿಷವೊಡ್ಡಿ ರಾಜೀನಾಮೆ ಕೊಡಿಸಿದ್ದಾರೆ. ಆಮಿಷಗಳಿಗೆ ರಾಜೀನಾಮೆ ನೀಡಿದವರಿಗೆ ನೈತಿಕತೆ ಇರಬೇಕು. ಯಾಕೆಂದ್ರೆ, ಜನ ಚುನಾಯಿಸುವ ಜನಪ್ರತಿನಿಧಿಗಳನ್ನ ನಾಯಕರು ಎಂದು ಕರೆಯುತ್ತಾರೆ. ಆದ್ರೆ, ಲೀಡರ್​ಗಳನ್ನ, ಪ್ರತಾಪ್ ಗೌಡ ಅಂತಹವರನ್ನ ಹರಾಜು ಹಾಕಲಾಗುತ್ತಿದೆ ಎಂದರು.

ಸ್ವಾರ್ಥಕ್ಕಾಗಿ ರಾಜೀನಾಮೆ ಕೊಟ್ಟರು : ಕುಲಗೆಟ್ಟರು ಸುಖ ಪಡಬೇಕು ಅನ್ನೋ ಗಾದೆ ಮಾತಿನಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಶಾಸಕರು ವೈಯಕ್ತಿಕವಾಗಿ ಸುಖಪಟ್ಟರೆ ಹೊರತು, ಜನರಿಗೇನು ಕೂಡುಗೆ ನೀಡಿದ್ದಾರೆ. ಸಿಎಂ ಬಿ ಎಸ್ ಯಡಿಯೂರಪ್ಪನವರು ಮಂಡಿಸಿದ ಬಜೆಟ್​ನಲ್ಲಿ ಜನರಿಗೆ ಕೊಡುಗೆ ನೀಡಿಲ್ಲ. ಬದಲಾಗಿ ಲಕ್ಷಾಂತರ ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ದೂರಿದರು.

ಮುಂಬೈನಲ್ಲಿ ಇದ್ದಷ್ಟು ದಿನ ಏನಾದ್ರೂ ಮಾಡಿರಬಹುದಲ್ವಾ?: ಬಿಜೆಪಿಯಲ್ಲಿ ಅತ್ಯಾಚಾರ, ಅನಾಚಾರಗಳು ನಡೆಯುತ್ತಿವೆ. 6 ಸಚಿವರು ನ್ಯಾಯಲಯದ ಮೊರೆ ಹೋಗಿ ಪ್ರಚಾರ ಮಾಡದಂತೆ ಸ್ಟೇ ತಂದಿದ್ದಾರೆ. ಮುಂಬೈನಲ್ಲಿರುವಷ್ಟು ದಿನಗಳು ಏನಾದರೂ ಮಾಡಿರಬಹುದಲ್ಲ ಎಂದು ಪ್ರಶ್ನಿಸಿದರು. ಅಲ್ಲಿ ಇದ್ದವರು ಎಲ್ಲಾ ಅತ್ಯಾಚಾರ, ಅನಾಚಾರ ಮಾಡುವವರವೆಂದು ಲೇವಡಿ ಮಾಡಿದ್ರು.

ವಿಜಯೇಂದ್ರ ಹಣದ ಹೊಳೆ ಹರಿಸುತ್ತಾರೆ : ಪ್ರತಾಪ್ ಗೌಡ, ಬಿ ವೈ ವಿಜಯೇಂದ್ರ ಮಸ್ಕಿ ವಿಧಾನಸಭಾ ಉಪಚುನಾವಣೆ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ವಿನಂತಿ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ವಿಜಯೇಂದ್ರ ಹಣದ ಹೊಳೆ ಹರಿಸಿ ಗೆಲ್ಲಿಸುತ್ತಾರೆ ಎಂದು ಹರಿಹಾಯ್ದರು.

ಈಶ್ವರಪ್ಪ ರಾಜೀನಾಮೆ ನೀಡಿ ಹೊರಬರಬೇಕು : 6 ಜನ ಕೋರ್ಟ್ ಸ್ಟೇ ತಂದ ಕೂಡಲೇ ರಾಜೀನಾಮೆ ತೆಗೆದುಕೊಳ್ಳಬೇಕು ಅನ್ನೋ ನೈತಿಕತೆ ಸರ್ಕಾರಕ್ಕೆ ಇಲ್ಲ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಸರ್ಕಾರ ಭ್ರಷ್ಟ ಸರ್ಕಾರವಾಗಿದೆ. ಯಾವುದೇ ಹಣ ಬಿಡುಗಡೆ ಮಾಡಬೇಕೆಂದರೂ ಕಮಿಷನ್ ಕೊಡಬೇಕು ಎಂದು ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ.

ಇದೊಂದು ಲೂಟಿ ಸರ್ಕಾರ. ಯಡಿಯೂರಪ್ಪನವರಿಗೆ ಮಾನ, ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಸಚಿವ ಕೆ ಎಸ್ ಈಶ್ವರಪ್ಪ ನಡೆಯನ್ನ ನಾನು ಮೆಚ್ಚುತ್ತೇನೆ. ಯಾಕೆಂದ್ರೆ, ಒಬ್ಬ ಸಚಿವರಿಗೆ ಗಮನಕ್ಕೆ ತರದೆ ಅನುದಾನವನ್ನ ನೇರವಾಗಿ ನೀಡಿರುವುದು ತಪ್ಪು. ಈಶ್ವರನಪ್ಪವರು ರಾಜೀನಾಮೆ ನೀಡಬೇಕಾಗಿತ್ತು ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.