ರಾಯಚೂರು : ದೇವದುರ್ಗ ತಾಲೂಕಿನ ಗೋಪಾಲಪುರ, ಅಂಜಳ ಗ್ರಾಮಗಳಲ್ಲಿ ಕೃಷ್ಣ ನದಿಯಿಂದ ಅಕ್ರಮವಾಗಿ ಹೊಲಗಳಲ್ಲಿ ಸಂಗ್ರಹಿಸಿಟ್ಟಿದ್ದ 2,700 ಮೆಟ್ರಿಕ್ ಟನ್ ಮರಳನ್ನು ಎಸ್ಪಿ ವೇದಮೂರ್ತಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಒಟ್ಟು ರೂ. 13,77,000 ಬೆಲೆ ಬಾಳುವ ಮರಳು ಜಪ್ತಿ ಮಾಡಿಕೊಳ್ಳಲಾಗಿದ್ದು, ತಂಡದಲ್ಲಿ ಸಂಜಿವ್ ಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಗೋಪಿ ಕೃಷ್ಣ , ದೇವದುರ್ಗ ಕಂದಾಯ ನಿರೀಕ್ಷಕ ವಿರೇಶ ಬಾಬು ಮತ್ತಿತರರು ಇದ್ದರು.