ETV Bharat / state

ನನಗೆ ಕಾಂಗ್ರೆಸ್​ ನಾಯಕರಿಂದ ಯಾವುದೇ ಆಹ್ವಾನ ಬಂದಿಲ್ಲ: ಬಿ.ವಿ.ನಾಯಕ್

Congress 'Ghar Wapsi' Plan for MP Election: ಬಿಜೆಪಿ ಬಿಡುವ ಬಗ್ಗೆ ಯಾವುದೇ ಪ್ರಸ್ತಾಪ ಆಗಿಲ್ಲ. ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಬಿ.ವಿ.ನಾಯಕ್​ ಹೇಳಿದರು.

Former MP B V Nayaka
ಮಾಜಿ ಸಂಸದ ಬಿ. ವಿ. ನಾಯಕ್​
author img

By

Published : Aug 18, 2023, 4:35 PM IST

ಮಾಜಿ ಸಂಸದ ಬಿ.ವಿ.ನಾಯಕ್ ಹೇಳಿಕೆ​

ರಾಯಚೂರು: ನನಗೆ ಕಾಂಗ್ರೆಸ್ ನಾಯಕರಿಂದ ಯಾವುದೇ ಆಹ್ವಾನ ಬಂದಿಲ್ಲ. ಊಹಾಪೋಹಗಳು ಕೇಳಿ ಬರುತ್ತವೆ. ಅವೆಲ್ಲದಕ್ಕೂ ನಾನು ಉತ್ತರ ಕೊಡಲ್ಲ ಎಂದು ಮಾಜಿ ಸಂಸದ ಬಿ.ವಿ.ನಾಯಕ್​ ಸ್ಪಷ್ಟಪಡಿಸಿದ್ದಾರೆ. ರಾಯಚೂರು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದ ಡಿ.ಕೆ.ಸುರೇಶ್ ಹಾಗೂ ಬಿ.ವಿ.ನಾಯಕ್​​ ಅವರು ಭೇಟಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಅದು ಹಳೇ ಫೋಟೋ ಎಂದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಪರೇಷನ್ ಹಸ್ತ ವಿಚಾರಕ್ಕೆ, ರಾಜಕೀಯದಲ್ಲಿ ಚುನಾವಣೆ ಬಂದಾಗ ಧ್ರುವೀಕರಣ ಸಾಮಾನ್ಯ ಎಂದರು. ಇದೇ ವೇಳೆ, ಡಿ.ಕೆ.ಸುರೇಶ್ ಹಾಗೂ ನಾನು ಸ್ನೇಹಿತರು ಬೆಂಗಳೂರಿಗೆ ಹೋದಾಗ ನಾನು, ಅವರು ಭೇಟಿಯಾಗುತ್ತಿರುತ್ತೇವೆ. ಅವರ ಜೊತೆಗಿನ ಫೋಟೋ ಹಳೆಯದು. ಇತ್ತೀಚೆಗೆ ನಾನು ಅವರನ್ನು ಭೇಟಿಯಾಗಿಲ್ಲ. ಚುನಾವಣೆ ಸಮಯದಲ್ಲಿ ಏನಾದರೂ ಆಗಬಹುದು ಎಂದು ತಿಳಿಸಿದರು.

ವೆಂಕಟಪ್ಪ ನಾಯಕ್‌ರನ್ನು ಭೇಟಿಯಾದಾಗಲೂ ರಾಜಕೀಯದ ಕುರಿತು ಮಾತಾಡಿಲ್ಲ. ರಾಜಕೀಯ ಬಿಟ್ಟು ಬೇರೆ ವಿಷಯ ಮಾತನಾಡಿದ್ದೇವೆ ಅಷ್ಟೆ. ಸದ್ಯಕ್ಕೆ ನಾನು ಯಾವುದೇ ಚುನಾವಣೆಗೆ ರೆಡಿ ಇಲ್ಲ. ಮೊನ್ನೆ ತಾನೇ ವಿಧಾನಸಭಾ ಚುನಾವಣೆ ಎದುರಿಸಿದ್ದೇನೆ. ಮತ್ತೆ ಮತ್ತೆ ಚುನಾವಣೆ ಎದುರಿಸುವಂತಹ ಆಸಕ್ತಿ ಇಲ್ಲ, ಮುಂದೆ ನೋಡೋಣ ಎಂದು ಹೇಳಿದರು.

ಆ ಪಕ್ಷವೂ ಇಲ್ಲ, ಈ ಪಕ್ಷವೂ ಇಲ್ಲ ತಟಸ್ಥ ನಿಲುವು ಹೊಂದಿದ್ದೇನೆ ಎಂದು ನಾನು ಹೇಳಿಲ್ಲ. ಆ ಮಾತು ಹೇಳುವ ಪ್ರಶ್ನೆಯೇ ಇಲ್ಲ. ನಾನು ಒಂದು ಪಕ್ಷದಿಂದ ಚುನಾವಣೆ ಎದುರಿಸಿದ್ದೇನೆ, ಹಾಗಿರುವಾಗ ನಾನು ಆ ಥರ ಹೇಳೋಕೆ ಹೇಗೆ ಸಾಧ್ಯ? ಎಂದು ಕೇಳಿದರು.

ವಾತಾವರಣ ಬೆಳಗ್ಗೆ ಒಂದು ರೀತಿ ಇದ್ದರೆ ಸಂಜೆ ಇನ್ನೊಂದು ರೀತಿ ಇರುತ್ತೆ‌. ಹಾಗಂತ ನಾವು ತೆಗೆದುಕೊಳ್ಳುವ ತೀರ್ಮಾನವನ್ನು ಜನರು ಒಪ್ಪಿಕೊಳ್ಳಬೇಕಲ್ಲ. ಇವತ್ತೊಂದು ರೀತಿ ನಾಳೆ ಒಂದು ರೀತಿ ಇದ್ದರೆ ಜನರು ಒಪ್ಪಲ್ಲ. ಅವತ್ತು ವಯಕ್ತಿಕ ಕಾರಣಗಳಿಂದ ಪಕ್ಷ ತೊರೆದಿದ್ದು ನಿಜ. ಹಾಗಂತ ನಾನು ಯಾವತ್ತೂ ಪಕ್ಷ ನನಗೆ ದ್ರೋಹ ಮಾಡಿದೆ ಎಂದು ಹೇಳಿಲ್ಲ.

ಇದನ್ನೂ ಓದಿ: ಬಿಜೆಪಿಯಲ್ಲಿ ಕಿರುಕುಳ ಅನುಭವಿಸುವವರು ಕಾಂಗ್ರೆಸ್​ಗೆ ಬರಬಹುದು: ಗೃಹ ಸಚಿವ ಪರಮೇಶ್ವರ ಸ್ವಾಗತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.