ETV Bharat / state

ರಾಯಚೂರಲ್ಲಿ ಬಿಸಿಲ ಬೇಗೆಗೆ ಬಸವಳಿದ ಹೈದ್ರಾಬಾದ್​ ಕರ್ನಾಟಕದ ಜನ

ಹೈ-ಕ ಭಾಗದ ರಾಯಚೂರು ಜಿಲ್ಲೆಯೊಂದರಲ್ಲಿಯೇ ವಾಡಿಕೆಯಂತೆ 672 ಎಂ.ಎಂ. ಮಳೆ ಸುರಿಯಬೇಕಾಗಿತ್ತು. ಆದರೆ ಈ ಬಾರಿ ಕೇವಲ 216 ಎಂ.ಎಂ ಮಳೆಯಾಗಿ ಶೇ.80 ರಷ್ಟು ಮಳೆ ಕೊರತೆ ಎದುರಾಗಿ ಭೀಕರ ಬರಗಾಲ ಆವರಿಸಿದೆ. ಈ ಮಧ್ಯೆ ಬಿಸಿಲಿನ ನರ್ತನ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಬಿಸಿಲಿನ ಪ್ರಮಾಣ ಏರಿಕೆ
author img

By

Published : Mar 21, 2019, 12:12 AM IST

ರಾಯಚೂರು: ಬಿಸಿಲ ತಾಪಮಾನ ಕಳೆದ ವರ್ಷಕ್ಕಿಂತ ಈ ಬಾರಿ 0.5 ರಿಂದ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಮೂಲಕ ಬಿಸಿಲಿನ ಪ್ರಮಾಣ ಏರಿಕೆಯಾಗಿ ಹೈದರಾಬಾದ್ ಕರ್ನಾಟಕ ಜನ ಹೈರಾಣಾಗಿದ್ದಾರೆ.

ಬೇಸಿಗೆ ಕಾಲ ಪ್ರಾರಂಭವಾದರೆ ಸಾಕು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸೂರ್ಯನ ಶಿಖಾರಿ ಶುರುವಾಗುತ್ತದೆ. ಪ್ರತಿ ವರ್ಷ ಬೇಸಿಗೆಯಲ್ಲಿ ತನ್ನ ಪ್ರಖರತೆ ತೋರಿಸಿ ಸೂರ್ಯ ಜನರಿಗೆ ಬಿಸಿ ಗಾಳಿಯ ಶಕೆಯನ್ನು ಅನುಭವಿಸುವಂತೆ ಮಾಡುತ್ತಾನೆ. ಆದರೆ ಕಳೆದ ವರ್ಷಕ್ಕಿಂತ ಪ್ರಸಕ್ತ ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚಾಗಿರಲಿದೆ.ಈಗಾಗಲೇ ಮಾ.1 ರಿಂದ 15 ರವರೆಗೆ 0.5 ದಿಂದ 1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿ ಬೇಸಿಗೆ ಆರಂಭದ ದಿನಗಳಲ್ಲೇ ಜನ ಬಸವಳಿದಿದ್ದಾರೆ.

ಬಿಸಿಲಿನ ಪ್ರಮಾಣ ಏರಿಕೆ

ಹೈ-ಕ ಭಾಗದ ರಾಯಚೂರು ಜಿಲ್ಲೆಯೊಂದರಲ್ಲಿಯೇ ಮುಂಗಾರು-ಹಿಂಗಾರು ಕೈಕೊಟ್ಟಿದೆ. ಜಿಲ್ಲೆಯಲ್ಲಿ ವಾಡಿಕೆಯಂತೆ 672ಎಂ.ಎಂ. ಮಳೆ ಸುರಿಯಬೇಕಾಗಿತ್ತು. ಆದರೆ ಈ ಬಾರಿ ಕೇವಲ 216 ಎಂ.ಎಂ ಮಳೆಯಾಗಿ ಶೇ.80 ರಷ್ಟು ಮಳೆ ಕೊರತೆ ಎದುರಾಗಿ ಭೀಕರ ಬರಗಾಲ ಆವರಿಸಿದೆ.

ಕಳೆದ ವರ್ಷ ಮಾರ್ಚ್ ಪ್ರಾರಂಭದ 15 ದಿನಗಳಲ್ಲಿ 36.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಪ್ರಮಾಣ ದಾಖಲಾಗಿತ್ತು. ಆದರೆ ಪಸಕ್ತ ಮಾ.1 ರಿಂದ 15 ರವರೆಗೆ 37.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಹೈದರಾಬಾದ್-ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಪೈಕಿ ಹಚ್ಚಿನ ಬಿಸಿಲಿನ ತಾಪಮಾನ ದಾಖಲಾಗುವುದು ಕಲಬುರಗಿಯಲ್ಲಿ, 2ನೇ ಸ್ಥಾನವನ್ನು ರಾಯಚೂರು ಜಿಲ್ಲೆ ಪಡೆದುಕೊಂಡಿದೆ.

Intro:KN_RCR_01_20_Ranna Bisilu_vis1_7202440

Body:KN_RCR_01_20_Ranna Bisilu_vis1_7202440

Conclusion:KN_RCR_01_20_Ranna Bisilu_vis1_7202440
ETV Bharat Logo

Copyright © 2024 Ushodaya Enterprises Pvt. Ltd., All Rights Reserved.