ETV Bharat / state

ಅಪ್ಪ ತೀರೋದ.. ಕುಟುಂಬಕ್ಕೆ ಮಗಳೇ ಆಧಾರಸ್ತಂಭ: ಓದು ನಿಲ್ಲಿಸಿ ಭೂತಾಯಿ ಸೇವೆಗೆ ನಿಂತ ಗಟ್ಟಿಗಿತ್ತಿ! - Huligemma

ಹುಲಿಗೆಮ್ಮ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿ ಮೃತಪಟ್ಟಾಗ, ಮೂವರು ಮಕ್ಕಳು ಇನ್ನೂ ಓದುತ್ತಿದ್ದರು. ಆದರೆ, ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆ, ಎಲ್ಲರಿಗಿಂತ ಕಿರಿಯಳಾದ ಹುಲಿಗೆಮ್ಮ ಅರ್ಧಕ್ಕೆ ಓದು ನಿಲ್ಲಿಸಿ ಕುಟುಂಬ ನಿರ್ವಹಣೆಗೆ ನಿಂತಳು. ನನ್ನ ತಂಗಿ ಅವಳ ಓದನ್ನು ನಿಲ್ಲಿಸಿ ನನಗೆ ವಿದ್ಯೆ ಕೊಡಿಸಿದ್ದಾಳೆ ಎಂದು ಅಕ್ಕ ಈರಮ್ಮ ಸಂತಸ ವ್ಯಕ್ತಪಡಿಸುತ್ತಾರೆ.

ಈ ಕುಟುಂಬಕ್ಕೆ ಮಗಳೇ ಆಧಾರಸ್ತಂಭ
ಓದು ಅರ್ಧಕ್ಕೆ ನಿಲ್ಲಿಸಿ, ಕುಟುಂಬಕ್ಕೆ ಆಸರೆಯಾದ ಗಟ್ಟಿಗಿತ್ತಿ ಹುಲಿಗೆಮ್ಮ..!
author img

By

Published : Jun 24, 2021, 7:05 PM IST

Updated : Jun 25, 2021, 4:12 PM IST

ರಾಯಚೂರು: ಕೃಷಿ ಅಂದ್ರೆ ಸಾಕು, ಮೂಗು ಮುರಿಯುವವರೇ ಹೆಚ್ಚು. ಆದ್ರೆ, ಇಲ್ಲೋರ್ವ ಯುವತಿ ತನ್ನ ತಂದೆ ಮೃತಪಟ್ಟಿದ್ದಕ್ಕೆ ವಿದ್ಯಾಭ್ಯಾಸ ಬದಿಗಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾಳೆ. ಹೀಗೆ ಟ್ರ್ಯಾಕ್ಟರ್​​ನಿಂದ ಹೊಲ ಉಳುಮೆ ಮಾಡುತ್ತಿರುವ ಯುವತಿಯ ಹೆಸರು ಹುಲಿಗೆಮ್ಮ. ಸಿರವಾರ ತಾಲೂಕಿನ ಜಕ್ಕಲದಿನ್ನಿ ಗ್ರಾಮದ ನಿವಾಸಿ. ಬಿಎ ಮೊದಲ ವರ್ಷ ಮುಗಿಸಿ ಎರಡನೇ ವರ್ಷಕ್ಕೆ ಕಾಲಿಡಬೇಕಿತ್ತು. ಆ ಸಮಯದಲ್ಲಿ ಆಕೆಯ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆ ವೇಳೆ ದಿಕ್ಕು ತೋಚದ ಹುಲಿಗೆಮ್ಮ ಸ್ವತಃ ತಾನೇ ಸಂಸಾರದ ಹೊಣೆ ಹೊತ್ತು, ವ್ಯವಸಾಯ ಮಾಡುತ್ತಿದ್ದಾಳೆ.

ಕೃಷಿ ಚಟುವಟಿಕೆಗೆ ಸಂಬಂಧಿಸಿದ ಪ್ರತಿಯೊಂದು ಕೆಲಸವನ್ನೂ ತನ್ನ ತಂದೆಯಿಂದ ನೋಡಿ ಕಲಿತಿರುವ ಹುಲಿಗೆಮ್ಮ, ತಮ್ಮ ಮೂರು ಎಕರೆ ಜಮೀನಿನ ಜತೆಗೆ ಇತರರ 15 ಎಕರೆ ಭೂಮಿಯನ್ನು ಸಹ ಲೀಸ್​ಗೆ ಪಡೆದಿದ್ದಾಳೆ. ಮುಂಗಾರು ಆರಂಭವಾಗಿರುವುದರಿಂದ ಬಿತ್ತನೆ ಕಾರ್ಯಕ್ಕೆ ಜಮೀನನ್ನು ಹದಗೊಳಿಸುತ್ತಿದ್ದಾಳೆ.

ಅವರ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿ ಮೃತಪಟ್ಟಾಗ, ಮೂವರು ಮಕ್ಕಳು ಇನ್ನೂ ಓದುತ್ತಿದ್ದರು. ಆದರೆ, ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆ, ಎಲ್ಲರಿಗಿಂತ ಕಿರಿಯಳಾದ ಹುಲಿಗೆಮ್ಮ ಅರ್ಧಕ್ಕೆ ಓದು ನಿಲ್ಲಿಸಿ ಕುಟುಂಬ ನಿರ್ವಹಣೆಗೆ ನಿಂತಳು. ನನ್ನ ತಂಗಿ ಅವಳ ಓದನ್ನು ನಿಲ್ಲಿಸಿ ನನಗೆ ವಿದ್ಯೆ ಕೊಡಿಸಿದ್ದಾಳೆ ಎಂದು ಅಕ್ಕ ಈರಮ್ಮ ಸಂತಸ ವ್ಯಕ್ತಪಡಿಸುತ್ತಾರೆ.

ಅಪ್ಪ ತೀರೋದ.. ಕುಟುಂಬಕ್ಕೆ ಮಗಳೇ ಆಧಾರಸ್ತಂಭ

ಮಗಳ ಕೆಲಸಕ್ಕೆ ತಾಯಿಯೂ ಸಾಥ್ ನೀಡಿದ್ದಾಳೆ. ಬೆಳೆ ಬೆಳೆಯುವ ಸಲುವಾಗಿ ಹೊಲದ ಮೇಲೆ ಸಾಲ ಪಡೆದುಕೊಳ್ಳಲಾಗಿತ್ತು. ಆದರೆ, ಬ್ಯಾಂಕ್​ನಲ್ಲಿ ಎಲ್ಲರ ಸಾಲವೂ ಮನ್ನವಾಗಿದೆ, ನಾವು ಪಡೆದ ಸಾಲ ಮಾತ್ರ ಹಾಗೇ ಇದೆ ಎಂದು ಕಣ್ಣೀರಾಕುತ್ತಾರೆ ಯಲ್ಲಮ್ಮ.

ಇದನ್ನೂ ಓದಿ:ಚಕ್ರಕ್ಕೆ ಸಿಲುಕಿದ್ದವನ ಎಳೆದೊಯ್ದ ಲಾರಿ.. ಬೆಳಗಾವಿಯಲ್ಲಿ ನರಳಾಡಿ ಜೀವ ಬಿಟ್ಟ ಬೈಕ್​ ಸವಾರ

ನಾನು ರೈತನ ಮಗಳಾಗಿ ಹುಟ್ಟಿದ್ದೇನೆ. ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ನಾನು ವ್ಯವಸಾಯ ಮಾಡುವುದು ಅನಿವಾರ್ಯವಾಗಿತ್ತು. ಅಲ್ಲದೆ, ನನ್ನ ಅಕ್ಕನನ್ನು ಚೆನ್ನಾಗಿ ಓದಿಸಿ ಉನ್ನತ ಹುದ್ದೆಗೆ ಏರಿಸಬೇಕೆಂಬ ದೊಡ್ಡ ಆಸೆ ನನ್ನ ತಂದೆಗಿತ್ತು. ಈಗ ಕೃಷಿ ಜತೆಗೆ ವಿದ್ಯಾಭ್ಯಾಸವನ್ನೂ ಮುಂದುವರಿಸುತ್ತೇನೆ ಅಂತಾಳೆ ಹುಲಿಗೆಮ್ಮ.

ಮನೆಯ ಯಜಮಾನನ ಕಳೆದುಕೊಂಡಿರುವ ಈ ಕುಟುಂಬಕ್ಕೆ ಆಸರೆಯಾಗಿ ನಿಂತಿರುವ ಹುಲಿಗೆಮ್ಮ ಬೇಸಾಯದ ಜತೆಗೆ ವಿದ್ಯಾಭ್ಯಾಸದಲ್ಲೂ ಯಶಸ್ವಿಯಾಗಲಿ ಅನ್ನೋದು ನಮ್ಮೆಲ್ಲರ ಆಶಯ.

Last Updated : Jun 25, 2021, 4:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.