ರಾಯಚೂರು: ನಗರದ ತಿಮ್ಮಾಪುರ ಪೇಟೆಯಲ್ಲಿರುವ ಕೆಇಬಿ ಪಿಎಸ್ಐ ಲಕ್ಷ್ಮಿ ಅವರ ಮನೆಯಲ್ಲಿ ಕಳ್ಳತನವಾಗಿದೆ. 10 ಸಾವಿರ ನಗದು ಹಾಗೂ ಏಳೆಂಟು ತೊಲ ಬಂಗಾರ ಕಳ್ಳತನವಾಗಿದೆ. ನಿನ್ನೆ (ಶುಕ್ರವಾರ) ತಡರಾತ್ರಿ 12 ರಿಂದ 12:30ರ ಸುಮಾರಿಗೆ ಘಟನೆ ನಡೆದಿರಬಹುದು ಎನ್ನಲಾಗ್ತಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮನೆಯ ಮಹಡಿ ಕೊಠಡಿಯಲ್ಲಿ ಮನೆಯವರೆಲ್ಲ ಮಲಗ್ಗಿದ್ದರು. ರಾತ್ರಿ ವೇಳೆ ಶಬ್ದವಾಗಿದೆ. ಆದರೆ ಬಡಾವಣೆಯಲ್ಲಿ ಏನಾದರೂ ಮಾಡುತ್ತಿದ್ದಾರೆ ಎಂದುಕೊಂಡು ಹಾಗೇ ಮಲಗಿದ್ದಾರೆ. ಆದರೆ ಬೆಳಗ್ಗೆ ಎದ್ದು ನೋಡಿದಾಗ, ಖದೀಮರು ಮನೆಯ ಬಾಗಿಲು ಮುರಿದು ಕೊಠಡಿಯೊಳಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿರುವುದು ಬೆಳಕಿಗೆ ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ನೇತಾಜಿ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನೇತಾಜಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕೊರೊನಾದಿಂದ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ: ಪತ್ನಿ ಸಾವು, ಗಂಡ - ಮಗಳು ಪಾರು