ರಾಯಚೂರು: ಚಿನ್ನದ ಗಣಿಗಾರಿಕೆ ನಡೆಸುತ್ತಿರುವ ಕಂಪನಿಯಲ್ಲಿ ಉದ್ಯೋಗ ನೀಡುವಂತೆ ಆಗ್ರಹಿಸಿ ಹಲವು ದಿನಗಳಿಂದ ಮಾನ್ವಿ ತಾಲೂಕಿನ ಹಿರೇಬುದ್ದಿನಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ಹಿರೇಬುದ್ದಿನಿ ಗ್ರಾಮದಲ್ಲಿ ಚಿನ್ನದ ನಿಕ್ಷೇಪವಿದ್ದು, ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಚಿನ್ನ ತೆಗೆಯಲಾಗುತ್ತಿದೆ. ಚಿನ್ನ ತೆಗೆಯುವುದಕ್ಕೆ ಸ್ಫೋಟಕ ವಸ್ತುಗಳು ಬಳಕೆಯಿಂದ ಗ್ರಾಮದಲ್ಲಿ ಮನೆಗಳು ಬಿರುಕು ಬಿಟ್ಟಿವೆ. ಇದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನೆ ನಿರತರು ದೂರಿದರು.
ಕಳೆದ 26 ವರ್ಷಗಳಿಂದ ಚಿನ್ನದ ಗಣಿಗಾರಿಕೆ ನಡೆಯುತ್ತಿದ್ದು, ಅಂದಿನಿಂದಲೂ ಉದ್ಯೋಗ ನೀಡುವಂತೆ ಗ್ರಾಮಸ್ಥರ ಬೇಡಿಕೆ ಇಡುತ್ತಿದ್ದಾರೆ. ಆದರೆ, ಕಂಪನಿಯಿಂದ ಗ್ರಾಮಸ್ಥರಿಗೆ ಯಾವುದೇ ಉದ್ಯೋಗದ ಭರವಸೆ ಸಿಕ್ಕಿಲ್ಲ. ಗ್ರಾಮದ 150 ಜನರಿಗೆ ಉದ್ಯೋಗ ನೀಡುವಂತೆ ಕೋರಲಾಗಿದೆ. ಆದರೆ ಗಣಿ ಕಂಪನಿ ನಾಲ್ಕು- ಐದು ಜನರಿಗೆ ಮಾತ್ರ ಉದ್ಯೋಗ ನೀಡುವುದಾಗಿ ಹೇಳುತ್ತಿದೆ. ಕನಿಷ್ಠ 70 ಜನರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿದರು.