ETV Bharat / state

ರಾಯಚೂರಿನಲ್ಲಿ ವರುಣನ ಅಬ್ಬರ: ಮಸ್ಕಿ ಜಲಾಶಯ ಭರ್ತಿ - ರಾಯಚೂರಿನಲ್ಲಿ ಭಾರಿ ಮಳೆ ಲೇಟೆಸ್ಟ್​ ನ್ಯೂಸ್​

ರಾಯಚೂರು ಜಿಲ್ಲೆಯ ಮಸ್ಕಿ ಡ್ಯಾಮ್​ ತುಂಬಿದ ಹಿನ್ನೆಲೆ ಜಲಾಶಯದಿಂದ 500 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಮಸ್ಕಿ ಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಹಳ್ಳದ ತೀರದ ಗ್ರಾಮಗಳಿಗೆ ಹಳ್ಳದ ಕಡೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

heavy rain fill up  maski riservoir in raichur
ಮಸ್ಕಿ ಜಲಾಶಯ ಭರ್ತಿ
author img

By

Published : Oct 21, 2020, 11:20 AM IST

ರಾಯಚೂರು : ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಮಸ್ಕಿ ಜಲಾಶಯ ಭರ್ತಿಯಾಗಿದೆ. ಜಲಾಶಯದ ಮೇಲ್ಬಾಗದಲ್ಲಿ ನೀರು ಹರಿಯುತ್ತಿದ್ದು, ಹೆಚ್ಚುವರಿ ನೀರನ್ನು ಮಸ್ಕಿ ಹಳ್ಳಕ್ಕೆ ಹರಿಬಿಡಲಾಗಿದೆ.

ಮಸ್ಕಿ ಜಲಾಶಯ ಭರ್ತಿ

ಜಲಾಶಯದಿಂದ 500 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಮಸ್ಕಿ ಹಳ್ಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಹಳ್ಳದ ಕಡೆ ತೆರಳದಂತೆ ತೀರದ ಗ್ರಾಮಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಸುಮಾರು 15 ದಿನಗಳ ಹಿಂದೆ ಸುರಿದ ಮಳೆಯಿಂದ ಮಸ್ಕಿ ಹಳ್ಳಕ್ಕೆ ನೀರು ಹರಿಸಲಾಗಿತ್ತು. ಆಗ ಹಳ್ಳದ ಕಡೆ ಬಹಿರ್ದೆಸೆಗೆ ತೆರಳಿದ ಇಬ್ಬರು ಅಪಾಯಕ್ಕೆ ಸಿಲುಕಿ ಒಬ್ಬರನ್ನ ರಕ್ಷಣೆ ಮಾಡಲಾಗಿದ್ದು, ಚನ್ನಬಸವ ಎನ್ನುವ ವ್ಯಕ್ತಿ ಕೊಚ್ಚಿ ಹೋಗಿದ್ದರು. ಶೋಧ ಕಾರ್ಯ ನಡೆದಿದ್ರೂ ಇದುವರೆಗೆ ಚನ್ನಬಸವ ಪತ್ತೆಯಾಗಿಲ್ಲ.

ಪುನಃ ನಿನ್ನೆಯಿಂದ ಜೋರು ಮಳೆ ಸುರಿಯುತ್ತಿದ್ದು, ಮಸ್ಕಿ ಪಟ್ಟಣದ ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿದೆ. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರು ನಿಂತು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.