ರಾಯಚೂರು : ಬ್ರೆಜಿಲ್ನಲ್ಲಿ ನೆಲೆಸಿರುವ ರಾಯಚೂರು ಮೂಲದ ಬಾಲಕಿ ತನ್ನ ಹೆಸರಿನಲ್ಲಿ ಮಾಡಿಸಿದ ಸುಕನ್ಯಾ ಸಮೃದ್ಧಿ ಯೋಜನೆ ಹಣವನ್ನ ಪಿಎಂ ಪರಿಹಾರ ನಿಧಿಗೆ ನೀಡುವ ಮೂಲಕ ಹೃದಯವಂತಿಕೆ ಮೆರೆದಿದ್ದಾಳೆ.
ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಾಗಿ ಹಲವರು ದೇಣಿಗೆ ನೀಡುತ್ತಿದ್ದಾರೆ. ನನಗೂ ದೇಣಿಗೆ ನೀಡಬೇಕು ಎನ್ನುವ ಆಸೆಯಿದೆ. ಆದರೆ ನನ್ನ ಬಳಿ ಹಣವಿಲ್ಲ. ನಮ್ಮ ತಂದೆ ಮುಂದಿನ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಹಣವನ್ನ ಬ್ಯಾಂಕ್ನಲ್ಲಿ ಇರಿಸಿದ್ದಾರೆ. ಸದ್ಯ ಭಾರತದ ಪಿಎಂ ಪರಿಹಾರ ನಿಧಿಗೆ ನನ್ನ ಸುಕನ್ಯಾ ಸಮೃದ್ದಿ ಯೋಜನೆಯ ಖಾತೆಯಲ್ಲಿರುವ ಹಣವನ್ನು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾಳೆ.
ಭಾರತದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ತಡೆಗಟ್ಟಲು ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ತನ್ನ ಹಸ್ತಾಕ್ಷರಗಳಲ್ಲಿ ಪತ್ರ ಬರೆದು ಧನ್ಯವಾದ ತಿಳಿಸಿದ್ದಾಳೆ.