ರಾಯಚೂರು: ಶೃತಿ ಸಂಸ್ಕೃತಿ ಸಂಸ್ಥೆ ಹಾಗೂ ಶಿವಮೊಗ್ಗ ರಂಗಾಯಣದ ಸಹಯೋಗದೊಂದಿಗೆ ಸವಿತಾ ರಾಣಿ ನಿರ್ದೇಶನದಲ್ಲಿ ಇಂದು ನಗರದ ರಂಗಮಂದಿರದಲ್ಲಿ "ಗಾರ್ಮೆಂಟ್ ಬ್ರಾಹ್ಮಣ" ನಾಟಕ ನಡೆಯಿತು.
ನಾಟಕದಲ್ಲಿ ರಂಗೋತ್ಸವ ತಂಡ ಅದ್ಭುತವಾಗಿ ನಟಿಸಿದ್ದು, ಪ್ರತಿಯೊಂದು ದೃಶ್ಯಗಳೂ ಪ್ರೇಕ್ಷಕರಿಗೆ ಮನೋರಂಜನೆ ನೀಡಿದವು. ಇದಕ್ಕೆ ಪ್ರತಿಯಾಗಿ ಪ್ಷೇಕ್ಷಕರು ಶಿಳ್ಳೆ, ಚಪ್ಪಾಳೆಯ ಮೂಲಕ ಅವರ ಕಲೆಗೆ ಪ್ರೋತ್ಸಾಹಿಸಿದರು.
ಖಾಸಗಿ ಹಾಗೂ ಸರ್ಕಾರದ ಕಾರ್ಯಕ್ರಮಗಳಲ್ಲಿ ಜನವಿಲ್ಲದೇ ಖಾಲಿಯಿರುತಿದ್ದ ಇಲ್ಲಿನ ಕುರ್ಚಿಗಳು ನಾಟಕ ಪ್ರದರ್ಶನದಿಂದ ತುಂಬಿ ತುಳುಕಿದ್ದು ವಿಶೇಷ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಈ ನಾಟಕಗಳಿಗೆ ಪ್ರೇಕ್ಷಕರಲ್ಲದೇ ಸಾಹಿತಿಗಳು, ಹಿರಿಯ, ಕಿರಿಯ ಕಲಾವಿದರೂ ಹಾಗೂ ಸ್ಥಳೀಯ ಪ್ರೇಕ್ಷಕರು ಸಹ ಆಗಮಿಸಿದ್ದು, ನಾಟಕ ನೋಡುವುದರ ಮೂಲಕ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದಾರೆ.