ರಾಯಚೂರು : ಅಕ್ರಮವಾಗಿ ಹೊಲದಲ್ಲಿ ಬೆಳೆದಿದ್ದ ಗಾಂಜಾ ಬೆಳೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ವಶಪಡೆದುಕೊಂಡಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ರಾಯಚೂರು ತಾಲೂಕಿನ ಉಪ್ರಾಳ ಗ್ರಾಮದ ಸಿದ್ದಪ್ಪ ಎಂಬುವರ ಹೊಲದಲ್ಲಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಇಲಾಖೆ ಆಯುಕ್ತೆ ಲಕ್ಷ್ಮಿ ನಾಯಕ್ ನೇತೃತ್ವದ ತಂಡ, ಲಕ್ಷಾಂತರ ರೂಪಾಯಿ ಮೌಲ್ಯದ 229 ಹಸಿ ಗಾಂಜಾ ಗಿಡಗಳು ಹಾಗೂ 1 ಕೆಜಿಯಷ್ಟು ಒಣ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಸಿದ್ದಪ್ಪ ಗಾಂಜಾ ಬೆಳೆದು, ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಆದ್ರೆ, ರೈತ ಸಿದ್ದಪ್ಪ ಹೇಳುವ ಪ್ರಕಾರ, ನಾನು ಈ ಗಾಂಜಾವನ್ನ ಸಾಧು-ಸಂತರಿಗೆ ನೀಡಲು ಬೆಳೆಯುತ್ತಿದ್ದೆ ಎಂದಿದ್ದಾನೆ. ಸದ್ಯ ಗಾಂಜಾ ಗಿಡಗಳು ಹಾಗೂ ಒಣ ಗಾಂಜಾವನ್ನ ಅಬಕಾರಿ ಇಲಾಖೆ ಪೊಲೀಸರು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.