ETV Bharat / state

ಆಯುಷ್ ಇಲಾಖೆ ಕಷಾಯ ಪೌಡರ್​​ಗೆ ಫುಲ್​​ ಡಿಮ್ಯಾಂಡ್ : ದಾಸ್ತಾನು ಖಾಲಿ, ಪೂರೈಕೆ ಮಾಡದ ಸರ್ಕಾರ

ಮಹಾಮಾರಿಯಂತೆ ಕಾಡುತ್ತಿರುವ ಕೊರೊನಾ ವೈರಸ್ ಗೆ ಇದುವರೆಗೆ ಮದ್ದು ದೊರೆತಿಲ್ಲ. ಮದ್ದು ದೊರೆಯದ ಕಾರಣ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವಂತಹ ಔಷಧಗಳಿಗೆ ಜನರಿಂದ ಹೆಚ್ಚು ಬೇಡಿಕೆಯಿದೆ.

ಆಯುಷ್ ಇಲಾಖೆ ಕಷಾಯ ಪೌಡರ್​​ಗೆ ಫುಲ್​​ ಡಿಮ್ಯಾಂಡ್

author img

By

Published : Aug 25, 2020, 11:27 AM IST

ರಾಯಚೂರು : ಕೊರೊನಾ ಸೋಂಕಿಗೆ ಆಯುಷ್ ಇಲಾಖೆಯಿಂದ ನೀಡುವ ಕಿಟ್ ಗಳಿಗೆ ಬಾರಿ ಡಿಮ್ಯಾಂಡ್ ಇದೆ. ಅದರಲ್ಲಿ ಆಯುಷ್ ಇಲಾಖೆಯಿಂದ ನೀಡುವ ಕಷಾಯ ಪೌಡರ್ ಗಂತೂ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ ದಾಸ್ತಾನು ಖಾಲಿಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದುವರೆಗೆ ಸ್ಪಂದನೆ ದೊರೆತಿಲ್ಲ.

ಮಹಾಮಾರಿಯಂತೆ ಕಾಡುತ್ತಿರುವ ಕೊರೊನಾ ವೈರಸ್​​ಗೆ ಇದುವರೆಗೆ ಮದ್ದು ದೊರೆತಿಲ್ಲ. ಮದ್ದು ದೊರೆಯದ ಕಾರಣ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವಂತಹ ಔಷಧಗಳಿಗೆ ಜನರಿಂದ ಹೆಚ್ಚು ಬೇಡಿಕೆಯಿದೆ. ವಿಶೇಷವಾಗಿ ಸರ್ಕಾರ ಅಧೀನದ ಆಯುಷ್ ಇಲಾಖೆಯಿಂದ ನೀಡುವಂತಹ ಕಿಟ್ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಬಂದಿದೆ. ಮೆಡಿಕಲ್ ಶಾಪ್ ಗಳಲ್ಲಿ ವಿಟಮಿನ್ ಸಿ, ಮಲ್ಟಿ ವಿಟಮಿನ್, ಜಿಂಕ್ ಮಾತ್ರೆಗಳಿಗೆ ಹೆಚ್ಚಿನ ಡಿಮ್ಯಾಂಡಿದ್ದು, ಮೆಡಿಕಲ್ ಶಾಪ್ ಗಳಲ್ಲಿ ಅಧಿಕವಾಗಿ ಮಾರಾಟವಾಗುತ್ತಿವೆ. ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಹೋಮಿಯೋಪತಿ, ಆಯುರ್ವೇದ ಔಷಧಗಳನ್ನ ಸಹ ಜನರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ.

ಆಯುಷ್ ಇಲಾಖೆ ಕಷಾಯ ಪೌಡರ್​​ಗೆ ಫುಲ್​​ ಡಿಮ್ಯಾಂಡ್

ಇನ್ನೂ ಕೊರೊನಾ ಸೋಂಕು ಹರಡುವಿಕೆ ಹೆಚ್ಚಳವಾದ ಬಳಿಕ ಆಯುಷ್ ಇಲಾಖೆಯಿಂದ ಆಯುರ್ವೇದ, ಹೋಮಿಯೋಪತಿ, ಯೂನಾನಿಯ ಮಾತ್ರೆಗಳು ಹಾಗೂ ಉಸಿರಾಟ ತೊಂದರೆಯನ್ನ ನಿವಾರಿಸುವ ತೈಲ ಒಳಗೊಂಡ ಕಿಟ್​​​ಗಳನ್ನ ಅಂಗನವಾಡಿಯ ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೇರಿದಂತೆ ಕೊರೊನಾ ವಾರಿಯರ್ಸ್​​​ಗೆ ಪ್ರಥಮ ಆದ್ಯತೆ ಮೆರೆಗೆ ವಿತರಣೆ ಮಾಡಲಾಯಿತು.

ಇದಾದ ಬಳಿಕ ಸರ್ಕಾರಿ ನೌಕರರಿಗೂ ವಿತರಿಸಬೇಕು ಎಂದು ಹೇಳಿದಾಗ ಸರ್ಕಾರಿ ನೌಕರರಿಗೆ ಸೇರಿದಂತೆ, ಇದುವರೆಗೆ ಜಿಲ್ಲೆಯ 25 ಸಾವಿರವರೆಗೆ ಕಿಟ್​​​​​​​ಗಳನ್ನ ಹಂಚಿಕೆ ಮಾಡಲಾಯಿತು. ಈ ಕಿಟ್ ಉಪಯೋಗಿಸಿದ ಬಳಿಕ ಉತ್ತಮ ಸ್ಪಂದನೆ ಸಿಕ್ಕ ನಂತರ ಹೆಚ್ಚಿನ ಡಿಮ್ಯಾಂಡ್ ಆಯುಷ್ ಇಲಾಖೆಗೆ ಬಂದಿತ್ತು. ಕಿಟ್ ರೋಗ ನಿರೋಧಕ ಶಕ್ತಿ ಹಾಗೂ ಉಸಿರಾಟದ ಸಮಸ್ಯೆ ನಿವಾರಿಸುವ ಮಾತ್ರೆಗಳು, ಉಸಿರಾಟಕ್ಕೆ ತೈಲ, ಕಷಾಯ ಪೌಡರ್ (ಆಯುಷ್ ಕ್ವಾಥ) ವಿತರಣೆ ಮಾಡಲಾಯಿತು. ಇದರಲ್ಲಿ ಮಾತ್ರೆಗಳ, ತೈಲ ಇಲಾಖೆಯಲ್ಲಿ ಲಭ್ಯವಿದೆ. ಆದರೆ, ಡಿಮ್ಯಾಂಡ್ ಇರುವಂತಹ ಕಷಾಯ ಪೌಡರ್ ಮಾತ್ರ ಖಾಲಿಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ತಿಂಗಳ ಹಿಂದಯೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದ್ರೆ ರಾಜ್ಯ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ.

ಇನ್ನೂ ಕೊರೊನಾ ಸೋಂಕಿಗೆ ಆಯುರ್ವೇದ ಔಷಧ ಉತ್ತಮ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ. ಹೀಗಾಗಿ ಆಯುರ್ವೇದ, ಯೂನಾನಿ, ಹೋಮಿಯೋಪಥಿಯಿಂದ ತಯಾರಿಸುವಂತಹ ಔಷಧಗಳಿಗೆ ಡಿಮ್ಯಾಂಡ್ ಬಂದಿದೆ. ವಿಶೇಷವಾಗಿ ಆಯುರ್ವೇದಿಂದ ತಯಾರಿಸುವ ಕಷಾಯ ಪೌಡರ್(ಆಯುಷ್ ಕ್ವಾಥ)ಕ್ಕೆ ಹೆಚ್ಚಿನ ಬೇಡಿಕೆಯಿದೆ. ಬೇಡಿಕೆಯಿರುವ ಕಷಾಯ ಪೌಡರ್​​ ಅನ್ನು ರಾಜ್ಯ ಸರ್ಕಾರ ಸರಬರಾಜು ಮಾಡಲು ಮುಂದಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.