ETV Bharat / state

ಗಂಡನಿಗೆ ಗಂಡಾಂತರ ಇದೆ ಎಂದು ನಂಬಿಸಿ 6 ತೊಲ ಬಂಗಾರ ದೋಚಿದ ನಕಲಿ ಸ್ವಾಮೀಜಿ - ರಾಯಚೂರು ಜಿಲ್ಲಾ ಸುದ್ದಿ

ಗಂಡಾಂತರವಿರುವುದಾಗಿ ಹೇಳಿ ವಿಶೇಷ ಪೂಜೆ ಮಾಡುವುದಾಗಿ ನಂಬಿಸಿ ನಗದು ಮತ್ತು ಚಿನ್ನಾಭರಣದೊಂದಿಗೆ ನಕಲಿ ಸಾಧು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.

ನಕಲಿ ಸಾಧುನಿಂದ ಗೃಹಿಣಿಗೆ ವಂಚನೆ
author img

By

Published : Aug 30, 2019, 11:31 PM IST

ರಾಯಚೂರು: ವ್ಯಕ್ತಿಯೊರ್ವ ಸಾಧು ವೇಷದಲ್ಲಿ ಬಂದು ಪೂಜೆಯ ನೆಪದಲ್ಲಿ ನಗದು ಹಣ, ಚಿನ್ನಾಭರಣವನ್ನು ಹಾಡುಹಗಲೇ ಲಪಾಟಾಯಿಸಿರುವ ಪ್ರಸಂಗ ನಗರದಲ್ಲಿ ಬೆಳಕಿಗೆ ಬಂದಿದೆ.

ನಗರದ ಮುಕ್ತಲ್ ಪೇಟೆಯ ಬಡಾವಣೆಯಲ್ಲಿ ಗಂಡಾಂತರ ವಿರುವುದಾಗಿ ಹೇಳಿ ಪದ್ಮಾ ಎಂಬುವವರಿಗೆ ನಕಲಿ ಸಾಧು ಮೋಸಮಾಡಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾನೆ. ಪದ್ಮಾರವರ ಮನೆ ಬಾಗಿಲಿಗೆ ಬಂದ ನಕಲಿ ಸಾಧು ಮನೆಯಲ್ಲಿ ಗಂಡಾಂತರ ಎದುರಾಗಲಿದ್ದು ಪೂಜೆ ಮಾಡದಿದ್ದರೆ ಪತಿ ಜೀವಕ್ಕ ಕಂಟಕವಿದೆ ಎಂದು ಹೇಳಿ ವಿಶೇಷ ಪೂಜೆ ಮಾಡಬೇಕೆಂದು ನಂಬಿಸಿದ್ದಾನೆ.

ನಕಲಿ ಸಾಧುನಿಂದ ಗೃಹಿಣಿಗೆ ವಂಚನೆ

ಇನ್ನೂ ಪೂಜೆಗಾಗಿ 60 ಗ್ರಾಂ ಬಂಗಾರ ತರುವಂತೆ ಹೇಳಿದ್ದಾನೆ. ಇಲ್ಲದಿದ್ದರೆ ಪತಿಯ ಜೀವಕ್ಕೆ ಅಪಾಯವಿದೆ ಎಂದು ಹೆದರಿಸಿದ್ದಾನೆ. ಇದರಿಂದ ಸಂಬಂಧಿಕರ ಮೂರು ತೊಲೆ ಬಂಗಾರವನನ್ನು ಪದ್ಮಾ ಪೂಜೆಗೆ ಇಟ್ಟಿದ್ದಾಳೆ. ಸಾಧು ತಂದ ಬಾಕ್ಸ್​ ಒಳಗೆ ಬಂಗಾರ ವಿಟ್ಟು ಪೂಜೆ ಮಾಡಿ, 10 ಸಾವಿರ ರೂಪಾಯಿ ಪಡೆದು ತಾನು ಹೋದ ನಂತರ ಬಾಕ್ಸ್ ತೆಗೆಯಲು ಹೇಳಿದ್ದಾನೆ.

ನಕಲಿ ಸಾಧು ಹೋದ ನಂತರ ಬಾಕ್ಸ್ ತೆಗೆದು ನೋಡಿದಾಗ ಬಾಕ್ಸ್​ನಲ್ಲಿ ಅಕ್ಕಿ ಇರುತ್ತದೆ ಇದರಿಂದ ಮೋಸ ಹೋಗಿರುವುದು ತಿಳಿದು ಬಂದಿದೆ. ನಕಲಿ ಸ್ವಾಮಿಗಾಗಿ ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಸದ್ಯ ನಗರ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಒದಗಿಸುವಂತೆ ಕೋರಿದ್ದಾರೆ.

Intro:ಸ್ಲಗ್: ನಕಲಿ ಸಾಧುನಿಂದ ಗೃಹಿಣಿಗೆ ವಂಚನೆ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 30-೦8-2019
ಸ್ಥಳ: ರಾಯಚೂರು
ಆಂಕರ್: ಹಿಂದು ಸಾಂಪ್ರದಾಯದಲ್ಲಿ ಕಾವಿ ಧರಿಸಿದ, ಮಠಾಧೀಶರಿಗೆ, ಸ್ವಾಮಿಗಳಿಗೆ ಹಾಗೂ ಸಾಧುಗಳಿಗೆ ವಿಶೇಷವಾದ ಸ್ಥಾನಮಾನ ನೀಡಿ ಗೌರವಿಸಲಾಗುತ್ತದೆ. ಕೆಲವರು ಕಾವಿಯನ್ನ ಬಂಡವಾಳ ಮಾಡಿಕೊಂಡು ಅಮಾಯಕ ಜನ ಮೋಸ ಅನೇಕ ಘಟನೆಗಳು ಸಾಕ್ಷಿಯಾಗಿವೆ. ಇಂತಹ ಘಟನೆಯ ಮದ್ಯ ಸಾಧು ವೇಷದಲ್ಲಿ ಬಂದ ಓರ್ವ ವ್ಯಕ್ತಿ, ಪೂಜೆ ನೆಪ್ಪದಲ್ಲಿ ನಗದು ಹಣ, ಚಿನ್ನಾಭರಣವನ್ನು ಹಾಡುಹಗಲೇ ಲಪಾಟಿಸಿರುವ ಪ್ರಸಂಗ ಬೆಳಕಿಗೆ ಬಂದಿದೆ. ಎಲ್ಲಿ ನಡೆದಿದೆ ಇಂತಹ ಪ್ರಸಂಗ, ಯಾರು ಮೋಸ ಹೊದವರು ಅಂತಿರಾ..ಹಾಗದ್ರೆ ಈ ಸ್ಟೋರಿ ನೋಡಿ. Body:
ವಾಯ್ಸ್ ಓವರ್.1: ಮನೆಯ ಕುಟುಂಬಸ್ಥರು ನೆಮ್ಮದಿಯಿಂದ ಕೆಲವರು ಪೂಜೆ ಪುನಸ್ಕಾರ ಮಾಡುವುದು, ಜೋತಿಷ್ಯಗಳು ಕೇಳಿ ಅವರು ಹೇಳಿದಂತೆ ಗುಡಿ-ಗುಂಡರಕ್ಕೆ ನಡೆದುಕೊಳ್ಳುತ್ತಾರೆ. ತಮ್ಮ ಕುಟುಂಬವು ಸಹ ಚೆನ್ನಾಗಿ ಇರಬೇಕೆಂದು ಬಯಸುವವರು, ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದರೆ. ಆದ್ರೆ ಮನೆಯಲ್ಲಿ ಯಾಜಮಾನ ಇಲ್ಲದ ವೇಳೆ ಮನೆಯಲ್ಲಿದ ಮಹಿಳೆಯರನ್ನ ಟಾರ್ಗೇಟ್ ಮಾಡಿಕೊಂಡಿರುವ ಕೆಲವರು ನಿಮ್ಮ ಪತಿಗೆ ಜೀವ ಕಟಕವಿದೆ ಎಂದು ಅಮಾಯಕ ಕುಟುಂಬವನ್ನ ನಂಬಿಸಿ ಪೂಜೆ ಮಾಡುವ ನೆಪ್ಪದಲ್ಲಿ ನಗದು ಹಣ, ಚಿನ್ನಾಭರಣವನ್ನ ಖದೀಮನೊಬ್ಬ ವಂಚಿಸಿ, ಲಪಾಟಿಸಿಕೊಂಡು ಹೋಗಿದ್ದಾನೆ.
ವಾಯ್ಸ್ ಓವರ್.2: ರಾಯಚೂರು ನಗರದ ಮಕ್ತಲ್ ಪೇಟೆ ಬಡವಣೆಯಲ್ಲಿ ಸುಮಾರು ಬೆಳಿಗ್ಗೆ 10:30ರ ಸುಮಾರಿಗೆ ಸಾಧುವೇಷ ಧರಿಸಿ ಬಡವಣೆಯನ್ನ ಎಂಟ್ರಿಕೊಟ್ಟಿದ್ದಾನೆ. ಬಡವಣೆಯಲ್ಲಿದ್ದ ಪದ್ಮಾ ಎಂಬುವವರ ಸೇರಿದ ಮನೆಗೆ ನೋಡಿ, ನಿಮ್ಮ ಮನೆಯಲ್ಲಿ ಗಂಡಾತರ ಎದುರಾಗಿದ್ದು, ಎರಡು ದಿನಗಳಲ್ಲಿ ನಿಮ್ಮ ಪತಿ ಜೀವಕ್ಕೆ ಕಂಟಕವಿದೆ. ಇದಕ್ಕಾಗಿ ವಿಶೇಷ ಪೂಜೆ ಮಾಡಬೇಕೆಂದು ನಂಬಿಸಿದ್ದಾನೆ. ಇದನ್ನು ನಂಬಿದ ಗೃಹಿಣಿ ಮನೆಯೊಳಗೆ ಕರೆದುಕೊಂಡು ಹೋಗಿ, ಗಂಡಾತರ ಎದುರಾಗಿರುವುದಕ್ಕೆ ಮೊದಲಿಗೆ ಪೂಜೆ ಸಾಮಾನುಗಳು ತರಿಸಿ ಬಳಿಕ, 60 ಗ್ರಾಂ ಬಂಗಾರ ಪೂಜೆ ತರುವಂತೆ ಹೇಳಿದ್ದಾನೆ. ಆಗ ಮಹಿಳೆ ಗಾಬರಿಗೊಂಡ, ಅಷ್ಟೊಂದು ಬಂಗಾರವಿಲ್ಲವೆಂದು ಹೇಳಿದ್ದಾಳೆ. ಆದ್ರೆ ಹೇಗಾದರೂ ಮಾಡಿ ತಗೊಂಡ ಬಾ, ಇಲ್ಲಿದ್ದರೆ ನಿಮ್ಮ ಪತಿಗೆ ಜೀವಕೊತ್ತು ಬರುತ್ತದೆ ಎಂದು ನಂಬಿಸಿದ್ದಾನೆ. ಇದನ್ನ ನಂಬಿದ ಗೃಹಿಣಿ, ತಮ್ಮ ಸಂಬಂಧಿಕರ ಮೂರು ತೊಲೆ ಬಂಗಾರವನ್ನ ಪೂಜೆ ಇಟ್ಟಿದ್ದಾರೆ. ತಂದಂತ ಬಂಗಾರವನ್ನ ಟಿಫನ್ ಬಾಕ್ಸ್ ಇರಿಸಿ ಪೂಜೆ ಮಾಡಿದ್ದಾನೆ. ಆದ್ರೆ ಸಾಧುವೇಷದಲ್ಲಿ ಬಂದ ನಕಲಿ ಸಾಧು, ಒಂದು ತರಹದ ಎರಡು ಟಿಫನ್ ಬಾಕ್ಸ್ ಮೊದಲು ತಯಾರು ಮಾಡಿಕೊಂಡು, ಪೂಜೆ ಸಾಮಾನುಗಳನ್ನ ತೆಗೆದುಕೊಂಡು ಬನ್ನಿಯಂತೆ ಮಹಿಳೆಯರನ್ನ ಮನೆಯೊಳಗೆ ಕಳುಹಿಸಿ, ಬಂಗಾರದ ಬಾಕ್ಸ್ ತಗೆದುಕೊಂಡು, ಅಕ್ಕಿ ಹಾಕಿದ್ದ ಬಾಕ್ಸ್ ಪೂಜೆ ಸ್ಥಳದಲ್ಲಿ ತೆಗೆದುಕೊಂಡು ಪರಾರಿಯಾಗಿದ್ದಾನೆ.
ವಾಯ್ಸ್ ಓವರ್.3: ಇನ್ನು ಅಮಾಯಕನ್ನ ಪೂಜೆ ಮಾಡಿದ್ದಕ್ಕೆ 10 ಸಾವಿರ ರೂಪಾಯಿ ಹಣ ಪಡೆದುಕೊಂಡು, ಪೂಜೆ ಮಾಡಿದ ಬಾಕ್ಸ್ ನಾನು ಹೋದಲ ಮೇಲೆ ಪೂಜೆ ಮಾಡಿ ತೆಗೆಯುವಂತೆ ಹೇಳಿದ್ದಾನೆ. ನಕಲಿ ಸಾಧು ಹೋದ ಬಳಿಕ ಡಬ್ಬಿಯನ್ನ ಹೇಳಿದ ಸಮಯಕ್ಕೆ ತೆಗೆದಾಗ ದರ, ಅಕ್ಕಿ ಇರಿಸಿದ್ದಾನೆ. ಪದ್ಮಾ ಮೋಸ ಹೋಗಿರುವುದು ಗೊತ್ತಾಗಿದೆ. ಆಗ ಸುತ್ತಮುತ್ತಲಿನ ಪೂಜೆ ಮಾಡಿದ ವ್ಯಕ್ತಿಯನ್ನ ಶೋಧ ಮಾಡಿದ್ರು, ಪರಾರಿಯಾಗಿದ್ದನೆ. ಇದರಿಂದ ಗಾಬರಿಗೊಂಡು ಪೊಲೀಸ್ ರ ಮೋರೆ ಹೋಗಿ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಒಟ್ನಿಲ್ಲಿ, ನಕಲಿ ಸ್ವಾಮಿ, ಸಾಧುಗಳ ಬಗ್ಗೆ ಜನರಿಗೆ ಜಾಗೃತ ಮೂಡಿಸಿದ್ರು, ಅಮಾಯಕ ಜನರು ಇನ್ನು ಮೋಸ ಹೋಗುತ್ತಿದ್ದಾರೆ. ಇದೀಗ ಪೊಲೀಸ್ ರೂ ಜನರಿಗೆ ಜಾಗೃತಿ ಮೂಡಿಸುವ ಜತೆಗೆ ನಕಲಿ ಸಾಧುಗಳನ್ನ ಮಟ್ಟ ಹಾಕಿ, ಅಮಾಯಕ ಜನರ ಮೋಸ ಹೊಗದಂತೆ ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರಜ್ಞೆನವಂತರ ಒತ್ತಾಸೆಯಾಗಿದೆ.
Conclusion:ಬೈಟ್.1: ಪದ್ಮಾ, ಮೋಸಹೋದ ಗೃಹಿಣಿ,
ಬೈಟ್.2: ಡಾ.ಸಿ.ಬಿ.ವೇದಮೂರ್ತಿ, ಎಸ್ಪಿ, ರಾಯಚೂರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.