ರಾಯಚೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಾಲೂಕಿನ ಮರ್ಚಟ್ಹಾಳ ಗ್ರಾಮ ಪಂಚಾಯಿತಿ ಚುನಾವಣೆಗೆ ಮಾಜಿ ಸಚಿವರ ಪುತ್ರಿಯರಿಬ್ಬರು ಸ್ಪರ್ಧಿಸಿದ್ದಾರೆ.
ದಿವಂಗತ ಜೆ.ಎಚ್.ಪಟೇಲರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ದಿ.ಮುನಿಯಪ್ಪ ಮುದ್ದಪ್ಪ ಅವರ ಇಬ್ಬರು ಪುತ್ರಿಯರಾದ ಶರದಾ ಮತ್ತು ಮೀನಾಕ್ಷಿ ತಮ್ಮ ತವರು ಗ್ರಾಮದ ಪ್ರತ್ಯೇಕ ವಾರ್ಡ್ನಲ್ಲಿ ಸ್ಪರ್ಧಿಸಿದ್ದಾರೆ. ವಿವಾಹವಾದ ಬಳಿಕ ಶರದಾ ಬೆಂಗಳೂರಿನಲ್ಲಿ ಹಾಗೂ ಮೀನಾಕ್ಷಿ ದೊಡ್ಡಬಳ್ಳಾಪುರದಲ್ಲಿ ವಾಸವಾಗಿದ್ದರು. ಇದೀಗ ಅಪ್ಪನ ಆಸೆಯಂತೆ ಇಬ್ಬರು ತವರು ಗ್ರಾಮದ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ಅಪ್ಪನ ಆಸೆ ಈಡೇರಿಸಲು ಮುಂದಾಗಿದ್ದಾರೆ.
ಓದಿ: ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಸರ್ಕಾರದ ಮಾರ್ಗಸೂಚಿ.. ಹೀಗೆ ಮಾಡಿ, ಹಾಗೆ ಮಾಡ್ಬೇಡಿ..
ಸಹೋದರಿಯರ ಸವಾಲ್:
ರಾಯಚೂರು ತಾಲೂಕಿನ ದೇವಸುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 7ರಲ್ಲಿ ಹನುಮಂತಿ ಮತ್ತು ಬಸಮ್ಮ ಎಂಬ ಅಕ್ಕ-ತಂಗಿಯರು ಸ್ಪರ್ಧಿಸಿದ್ದಾರೆ.