ರಾಯಚೂರು: ಬಿಜೆಪಿಗೆ ಇತಿಹಾಸ ಹಾಗೂ ನಾಯಕತ್ವವಿಲ್ಲವೆಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಲೇವಡಿ ಮಾಡಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ ಕ್ಲೇಮ್ ಮಾಡಿದ್ರು. ಈಗ ಕಲ್ಯಾಣ ಕರ್ನಾಟಕ ನಮ್ಮಿಂದಾಯ್ತು ಅಂತ ಮಾತನಾಡುತ್ತಿದ್ದಾರೆ. ಸದ್ಯ ಸುಭಾಷ್ ಚಂದ್ರ ಬೋಸ್ ವಿಚಾರ ತಂದಿದ್ದಾರೆ. ಹೀಗಾಗಿ ಬಿಜೆಪಿಗೆ ಪರಂಪರೆಯೂ ಇಲ್ಲ. ಜಾತೀಯತೆ, ಮತಿಯತೆ ಅಷ್ಟೇ ಬಿಜೆಪಿಗೆ ಇರೋದು. ಅದಕ್ಕೆ ಬೇರೆ ಬೇರೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಬಳಸುತ್ತಿದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವವಸ್ಥೆ ಹದಗೆಟ್ಟಿದೆ. ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಭ್ರಷ್ಟಾಚಾರ ತಡೆಯಬೇಕಾದ ಲೋಕಾಯುಕ್ತ, ಲೋಕಪಾಲ್ ಕೂಡ ಸರಿಯಿಲ್ಲ. ಬಿಜೆಪಿ ಆಡಳಿತ ಸರಿಯಾದರೆ ಲೋಕಾಯುಕ್ತವೂ ಸರಿಯಾಗುತ್ತದೆ ಎಂದ ಅವರು ನಮ್ಮಲ್ಲಿ ಯಾವುದೇ ಬಣಗಳಿಲ್ಲ. ಸಾಮೂಹಿಕ ನಾಯಕತ್ವದಲ್ಲೇ ಎಲ್ಲವೂ ತೀರ್ಮಾನವಾಗುತ್ತೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಲಿವುಡ್ ಯುವ ನಟಿ ದೀಪಾ ಆತ್ಮಹತ್ಯೆ.. ಡೆತ್ನೋಟ್ನಲ್ಲಿದೆ ಸಾವಿನ ರಹಸ್ಯ
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಎಲ್ಲದರ ಬೆಲೆ ಏರಿಕೆ ಆಗಿದೆ. ಆರ್ಥಿಕತೆ ಕುಸಿತವಾಗುತ್ತಿದೆ. ಜನಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.